AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಪ್ರೀತಿಯಲ್ಲಿ ಬಿದ್ದ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ? 9,000 ಕೋಟಿ ಒಡೆಯನ ಜೊತೆ ಸುತ್ತಾಟ

ರಿಯಾ ಚಕ್ರವರ್ತಿ ಅವರು ಬಾಲಿವುಡ್​ನಲ್ಲಿ ಈಗ ತಾನೇ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಜನಪ್ರಿಯತೆ ಪಡೆಯಬೇಕು ಎನ್ನುವ ಸಂದರ್ಭದಲ್ಲೇ ಕುಖ್ಯಾತಿ ಪಡೆದರು. ಸುಶಾಂತ್ ಅಭಿಮಾನಿಗಳು ಅವರನ್ನು ಈಗಲೂ ದ್ವೇಷಿಸುತ್ತಾರೆ. ಸುಶಾಂತ್ ಸಾವಿಗೆ ಅವರೇ ಕಾರಣ ಎಂದು ಬಲವಾಗಿ ನಂಬಿದ್ದಾರೆ.

ಮತ್ತೆ ಪ್ರೀತಿಯಲ್ಲಿ ಬಿದ್ದ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ? 9,000 ಕೋಟಿ ಒಡೆಯನ ಜೊತೆ ಸುತ್ತಾಟ
ರಿಯಾ-ನಿಖಿಲ್
ರಾಜೇಶ್ ದುಗ್ಗುಮನೆ
|

Updated on: Oct 22, 2023 | 7:09 AM

Share

ನಟಿ ರಿಯಾ ಚಕ್ರವರ್ತಿ ಅವರು ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಜೊತೆ ಸುತ್ತಾಟ ನಡೆಸಿದ್ದರು. ಇಬ್ಬರೂ ಹಾಯಾಗಿ ಕೆಲ ವರ್ಷ ಸಮಯ ಕಳೆದಿದ್ದರು. ಆದರೆ, ಇವರ ಬ್ರೇಕಪ್ ಆದ ಕೆಲವೇ ದಿನಗಳಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡರು. ಸುಶಾಂತ್ ಸಾವಿಗೆ ರಿಯಾ ಕಾರಣ ಎಂಬ ಆರೋಪವೂ ಕೇಳಿ ಬಂತು. ಅವರು ಜೈಲು ಕೂಡ ಸೇರಿದ್ದರು. ಇದೆಲ್ಲ ನಡೆದು ಕೆಲವು ವರ್ಷ ಕಳೆದಿದೆ. ಹೀಗಾಗಿ ರಿಯಾ ಅವರು ಇದನ್ನೆಲ್ಲ ಮರೆತಿದ್ದಾರೆ. ರಿಯಾ ಈಗ ಉದ್ಯಮಿಯೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರ ಅವರ ಫ್ಯಾನ್ಸ್​ಗೆ ಖುಷಿ ನೀಡಿದೆ.

ರಿಯಾ ಚಕ್ರವರ್ತಿ ಅವರು ಬಾಲಿವುಡ್​ನಲ್ಲಿ ಈಗ ತಾನೇ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಜನಪ್ರಿಯತೆ ಪಡೆಯಬೇಕು ಎನ್ನುವ ಸಂದರ್ಭದಲ್ಲೇ ಕುಖ್ಯಾತಿ ಪಡೆದರು. ಸುಶಾಂತ್ ಅಭಿಮಾನಿಗಳು ಅವರನ್ನು ಈಗಲೂ ದ್ವೇಷಿಸುತ್ತಾರೆ. ಸುಶಾಂತ್ ಸಾವಿಗೆ ಅವರೇ ಕಾರಣ ಎಂದು ಬಲವಾಗಿ ನಂಬಿದ್ದಾರೆ. ಆದರೆ, ಇದನ್ನು ರಿಯಾ ಅಲ್ಲ ಗಳೆಯುತ್ತಲೇ ಬರುತ್ತಿದ್ದಾರೆ. ಈಗ ಜೆರೋದಾ ಸ್ಥಾಪಕ ನಿಖಿಲ್ ಕಾಮತ್ ಜೊತೆ ಸುತ್ತಾಟ ಆರಂಭಿಸಿದ್ದಾರೆ.

ಶೇರು ಮಾರುಕಟ್ಟೆಯಲ್ಲಿ ಬ್ರೋಕರಿಂಗ್ ಕೆಲಸವನ್ನು ಜೆರೋದಾ ಮಾಡುತ್ತದೆ. ಇದನ್ನು ಸ್ಥಾಪಿಸಿರುವ ನಿಖಿಲ್ ಕಾಮತ್ ಮೇಲೆ ರಿಯಾಗೆ ಪ್ರೀತಿ ಹುಟ್ಟಿದಂತಿದೆ. ಈ ಮೊದಲು ನಿಖಿಲ್ ಮಿಸ್ ವರ್ಲ್ಡ್​ ಪಟ್ಟ ಪಡೆದ ಮಾನುಷಿ ಚಿಲ್ಲರ್ ಜೊತೆ ಸುತ್ತಾಟ ನಡೆಸುತ್ತಿದ್ದರು. ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ. ಈಗ ರಿಯಾ ಹಾಗೂ ನಿಖಿಲ್ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಪರಿಸ್ಥಿತಿ ಮೊದಲೇ ಗೊತ್ತಿತ್ತು ಎಂದ ರಿಯಾ ಚಕ್ರವರ್ತಿ

ನಿಖಿಲ್ ಅವರ ನೆಟ್​ವರ್ತ್​ 9000 ಸಾವಿರ ಕೋಟಿ ರೂಪಾಯಿ. 2019ರಲ್ಲಿ ಅಮಂದಾ ಪುರುವಾಂಕರ್ ಅವರನ್ನು ಮದುವೆ ಆದರು. ಆದರೆ, ಮದುವೆ ಬಳಿಕ ಇಬ್ಬರ ಮಧ್ಯೆ ವೈಮನಸ್ಸು ಮೂಡಿತು. 2021ರಲ್ಲಿ ಇಬ್ಬರೂ ಬೇರೆ ಆದರು. ಆ ಬಳಿಕ ನಿಖಿಲ್ ಅವರು ಸುತ್ತಾಟ ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ