AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shahid Kapoor: ಫಿಲ್ಮ್​ ಫೆಸ್ಟಿವಲ್​ ವೇದಿಕೆಯಲ್ಲಿ ಡ್ಯಾನ್ಸ್​ ಮಾಡುವಾಗ ಜಾರಿ ಬಿದ್ದ ನಟ ಶಾಹಿದ್​ ಕಪೂರ್​

ಶಾಹಿದ್​ ಕಪೂರ್​ ಅವರು ಕೆಳಗೆ ಬಿದ್ದಾಗ ಜನರೆಲ್ಲರೂ ಜೋರಾಗಿ ಕಿರುಚಿದರು. ಅವರಿಗೆ ಏನಾಯಿತೋ ಏನೋ ಎಂದು ಒಂದು ಕ್ಷಣ ಆತಂಕ ಆಗಿದ್ದು ನಿಜ. ಆದರೆ ಕೂಡಲೇ ಅವರು ಎದ್ದು ನಿಂತಿದ್ದು ನೋಡಿ ಎಲ್ಲರೂ ನಿಟ್ಟುಸಿರು ಬಿಟ್ಟರು. ಡ್ಯಾನ್ಸ್​ ಮುಗಿದ ಬಳಿಕ ತಾವು ಬಿದ್ದ ಜಾಗವನ್ನು ಶಾಹಿದ್​ ಕಪೂರ್​ ಮತ್ತೊಮ್ಮೆ ಪರಿಶೀಲಿಸಿದರು.

Shahid Kapoor: ಫಿಲ್ಮ್​ ಫೆಸ್ಟಿವಲ್​ ವೇದಿಕೆಯಲ್ಲಿ ಡ್ಯಾನ್ಸ್​ ಮಾಡುವಾಗ ಜಾರಿ ಬಿದ್ದ ನಟ ಶಾಹಿದ್​ ಕಪೂರ್​
ಶಾಹಿದ್ ಕಪೂರ್​
ಮದನ್​ ಕುಮಾರ್​
|

Updated on: Nov 21, 2023 | 7:25 PM

Share

54ನೇ ‘ಭಾರತೀಯ ಅಂತಾರಾಷ್ಟ್ರೀಯ ಸಿನಿಮೋತ್ಸವ’ (IFFI) ಗೋವಾದಲ್ಲಿ ಸೋಮವಾರ (ನವೆಂಬರ್​ 20) ಆರಂಭ ಆಗಿದೆ. ಉದ್ಘಾಟನಾ ಸಮಾರಂಭ ಸಖತ್​ ಕಲರ್​ಫುಲ್​ ಆಗಿತ್ತು. ಈ ವೇಳೆ ಕೆಲವು ಸೆಲೆಬ್ರಿಟಿಗಳು ವೇದಿಕೆ ಮೇಲೆ ಮನರಂಜನಾ ಕಾರ್ಯಕ್ರಮ ನೀಡಿದ್ದಾರೆ. ಖ್ಯಾತ ಬಾಲಿವುಡ್​ ನಟ ಶಾಹಿದ್​ ಕಪೂರ್ (Shahid Kapoor) ಅವರು ಡ್ಯಾನ್ಸ್​ ಮಾಡಿದ್ದಾರೆ. ಬಹಳ ಉತ್ಸಾಹದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಅವರು ಬ್ಯಾಲೆನ್ಸ್​ ತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದ ವಿಡಿಯೋ (Shahid Kapoor Viral Video) ವೈರಲ್​ ಆಗಿದೆ. ಅದನ್ನು ನೋಡಿ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಕಪ್ಪು ಬಣ್ಣದ ಸ್ಲೀವ್​ಲೆಸ್​ ಶರ್ಟ್​, ಪ್ಯಾಂಟ್​ ಮತ್ತು ಸನ್​ಗ್ಲಾಸ್​ ಧರಿಸಿ ಶಾಹಿದ್​ ಕಪೂರ್​ ಅವರು ಡ್ಯಾನ್ಸ್​ ಮಾಡುತ್ತಿದ್ದರು. ಅವರ ಜೊತೆ ಇನ್ನುಳಿದ ಡ್ಯಾನ್ಸರ್​ಗಳು ಕೂಡ ಇದ್ದರು. ಎಲ್ಲರಿಗಿಂತ ಮುಂದಿನ ಸಾಲಿನಲ್ಲಿ ಶಾಹಿದ್​ ಕಪೂರ್​ ಇದ್ದರು. ಇನ್ನೇನು ಡ್ಯಾನ್ಸ್​ ಪೂರ್ಣಗೊಳ್ಳಬೇಕು ಎಂಬಷ್ಟರಲ್ಲಿ ಶಾಹಿದ್​ ಕಪೂರ್​ ಅವರು ಆಯ ತಪ್ಪಿ ಕೆಳಗೆ ಬಿದ್ದರು. ಆ ಕ್ಷಣದಲ್ಲಿ ಅವರು ಆತಂಕಕ್ಕೆ ಒಳಗಾಗಲಿಲ್ಲ. ಕೂಡಲೇ ಎದ್ದು ನಿಂತು ಇನ್ನುಳಿದ ಡ್ಯಾನ್ಸರ್​ಗಳ ಜೊತೆ ಸೇರಿಕೊಂಡು ನೃತ್ಯ ಪೂರ್ಣಗೊಳಿಸಿದರು.

ಇದನ್ನೂ ಓದಿ: ‘ಟೈಗರ್​ 3’ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡದಿದ್ದರೂ ‘ಟೈಗರ್​ 4’ ಬಗ್ಗೆ ಕನಸು ಕಂಡ ಸಲ್ಮಾನ್​ ಖಾನ್​

ಶಾಹಿದ್​ ಕಪೂರ್​ ಅವರು ಕೆಳಗೆ ಬಿದ್ದಾಗ ಜನರೆಲ್ಲರೂ ಜೋರಾಗಿ ಕಿರುಚಿದರು. ಅವರಿಗೆ ಏನಾಯಿತೋ ಏನೋ ಎಂದು ಒಂದು ಕ್ಷಣ ಆತಂಕ ಆಗಿದ್ದು ನಿಜ. ಆದರೆ ಕೂಡಲೇ ಶಾಹಿದ್​ ಕಪೂರ್​ ಅವರು ಎದ್ದು ನಿಂತಿದ್ದು ನೋಡಿ ಎಲ್ಲರೂ ನಿಟ್ಟುಸಿರು ಬಿಟ್ಟರು. ಡ್ಯಾನ್ಸ್​ ಮುಗಿದ ಬಳಿಕ ಶಾಹಿದ್​ ಕಪೂರ್ ಅವರು ತಾವು ಬಿದ್ದ ಜಾಗವನ್ನು ಮತ್ತೊಮ್ಮೆ ಪರಿಶೀಲಿಸಿದರು. ಜಾರಿ ಬೀಳಲು ಕಾರಣ ಏನಿರಬಹುದು ಎಂದು ಅವರು ಗಮನಿಸಿದರು. ತಮ್ಮನ್ನು ಹುರಿದುಂಬಿಸುತ್ತಿದ್ದ ಅಭಿಮಾನಿಗಳ ಕಡೆಗೆ ನೋಡಿ ಅವರು ನಗು ಚೆಲ್ಲಿದರು. ಅಲ್ಲದೇ, ಗಾಳಿಯಲ್ಲಿ ಮುತ್ತು ನೀಡಿದರು.

ಇದನ್ನೂ ಓದಿ: ಬಟ್ಟೆ ಧರಿಸದೇ ರಸ್ತೆಗೆ ಬಂದ್ರಾ ಶಾಹಿದ್​ ಕಪೂರ್​ ಪತ್ನಿ ಮೀರಾ ರಜಪೂತ್​? ನೆಟ್ಟಿಗರಿಂದ ವ್ಯಂಗ್ಯದ ಪ್ರಶ್ನೆ

‘ಪದ್ಮಾವತ್​’, ‘ಕಬೀರ್​ ಸಿಂಗ್​’ ಮುಂತಾದ ಸಿನಿಮಾಗಳ ಮೂಲಕ ಶಾಹಿದ್​ ಕಪೂರ್​ ಅವರು ಫೇಮಸ್​ ಆಗಿದ್ದಾರೆ. ಸಿನಿಮಾ ಮಾತ್ರವಲ್ಲದೇ ವೆಬ್​ ಸಿರೀಸ್​ಗಳಲ್ಲೂ ಅವರು ಜನಪ್ರಿಯತೆ ಗಳಿಸಿದ್ದಾರೆ. ಈಗ ಅವರು ‘ದೇವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಪೊಲೀಸ್​ ಅಧಿಕಾರಿಯ ಪಾತ್ರ ಇರಲಿದೆ. ಸದ್ಯಕ್ಕೆ ಈ ಸಿನಿಮಾದ ಕೆಲಸಗಳು ಪ್ರಗತಿಯಲ್ಲಿದ್ದು, 2024ರ ಅಕ್ಟೋಬರ್​ 11ರಂದು ಬಿಡುಗಡೆ ಆಗಲಿದೆ. ಇದೇ ಸಿನಿಮಾದಲ್ಲಿ ಪೂಜಾ ಹೆಗ್ಡೆ ಕೂಡ ನಟಿಸುತ್ತಿದ್ದಾರೆ. ಇದಲ್ಲದೇ ಕೃತಿ ಸನೋನ್​ ನಟನೆಯ ಇನ್ನೊಂದು ಸಿನಿಮಾದಲ್ಲೂ ಶಾಹಿದ್ ಕಪೂರ್​ ಅಭಿನಯಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ