ಘರ್ಜನೆ ಇಲ್ಲದೇ ಗೆಲ್ಲುತ್ತಾ ‘ಅನಿಮಲ್’ ಸಿನಿಮಾ? ಹೀಗೆ ಆದ್ರೆ ಕಷ್ಟ ಇದೆ
‘ಅನಿಮಲ್’ ತಂಡ ಬಾಲಯ್ಯ ಅವರ ‘ಅನ್ಸ್ಟಾಪಬಲ್’ ಶೋ ಹಾಗೂ ದುಬೈನಲ್ಲಿ ಪ್ರಮೋಷನಲ್ ವಿಡಿಯೋ ರಿಲೀಸ್ ಮಾಡಿದ್ದು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ. ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಕೂಡ ಆಯೋಜನೆ ಮಾಡಿಲ್ಲ. ತೆಲುಗಿನಲ್ಲಿ, ಕನ್ನಡದಲ್ಲಿ ಹಾಗಿರಲಿ ಹಿಂದಿಯಲ್ಲೇ ಸಿನಿಮಾಗೆ ಪ್ರಚಾರ ಸಿಗುತ್ತಿಲ್ಲ.
ಯಾವುದೇ ಬಿಗ್ ಬಜೆಟ್ ಸಿನಿಮಾ ಬರುತ್ತದೆ ಎಂದರೆ ಅದಕ್ಕೆ ಒಂದು ತಿಂಗಳಿಂದ ಪ್ರಚಾರ (Movie Promotion) ಮಾಡಬೇಕು. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ಎಂದಾದರೆ ಬೇರೆ ಬೇರೆ ರಾಜ್ಯಗಳಿಗೆ ತೆರಳಬೇಕಾಗುತ್ತದೆ. ಅಲ್ಲಿನ ಮಾಧ್ಯಮಗಳ ಜೊತೆ ಮಾತನಾಡಬೇಕಾಗುತ್ತದೆ. ಇಷ್ಟೆಲ್ಲ ಮಾಡಿದರೂ ಜನರು ಥಿಯೇಟರ್ಗೆ ಬರುತ್ತಾರೆ ಎನ್ನುವ ಗ್ಯಾರಂಟಿ ಇಲ್ಲ. ಸಿನಿಮಾ ಪ್ರಚಾರ ವಿಚಾರದಲ್ಲಿ ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಅನೇಕರಿಗೆ ಮಾದರಿ. ಅವರು ಸಿನಿಮಾ ಮೇಕಿಂಗ್ಗೆ ಕೊಟ್ಟಷ್ಟೇ ಮಹತ್ವವನ್ನು ಸಿನಿಮಾ ಪ್ರಚಾರಕ್ಕೂ ನೀಡುತ್ತಾರೆ. ಆದರೆ, ‘ಅನಿಮಲ್’ (Animal Movie) ತಂಡ ಸಿನಿಮಾ ಪ್ರಮೋಷನ್ ವಿಚಾರದಲ್ಲಿ ಅಷ್ಟು ಆಸಕ್ತಿ ತೋರಿಸಿದಂತೆ ಕಾಣುತ್ತಿಲ್ಲ.
ಸಂದೀಪ್ ರೆಡ್ಡಿ ವಂಗ ಅವರು ‘ಅರ್ಜುನ್ ರೆಡ್ಡಿ’ ಸಿನಿಮಾ ಮೂಲಕ ಫೇಮಸ್ ಆದವರು. ಇದೇ ಚಿತ್ರವನ್ನು ‘ಕಬೀರ್ ಸಿಂಗ್’ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಲಾಯಿತು. ಇದಕ್ಕೆ ನಿರ್ದೇಶನ ಮಾಡಿದ್ದು ಕೂಡ ಅವರೇ. ಈ ಸಿನಿಮಾ ಕೂಡ ಹಿಟ್ ಆಯಿತು. ಈಗ ಅವರ ಮೇಲೆ ಭರವಸೆ ಇಟ್ಟು ನಿರ್ಮಾಪಕರು ದೊಡ್ಡ ಮೊತ್ತದ ಹಣ ಹೂಡಿದ್ದಾರೆ. ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್, ಬಾಬಿ ಡಿಯೋಲ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಕೂಡ ‘ಅರ್ಜುನ್ ರೆಡ್ಡಿ’ ಶೇಡ್ನಲ್ಲೇ ಇದೆ. ಜನರು ಸಿನಿಮಾ ನೋಡಿಯೇ ನೋಡುತ್ತಾರೆ ಎನ್ನುವ ಭರವಸೆ ಸಂದೀಪ್ ರೆಡ್ಡಿ ವಂಗಗೆ ಬಂದಂತೆ ಇದೆ. ಈ ಕಾರಣಕ್ಕೆ ಅವರು ಸಿನಿಮಾಗೆ ಹೆಚ್ಚು ಪ್ರಚಾರ ನೀಡುತ್ತಿಲ್ಲ.
ಇದನ್ನೂ ಓದಿ: ಪತಿ ರಣಬೀರ್ ಕಪೂರ್ ಬಗ್ಗೆ ಟಾಕ್ಸಿಕ್ ಎಂದವರಿಗೆ ತಿರುಗೇಟು ನೀಡಿದ ಆಲಿಯಾ ಭಟ್
‘ಅನಿಮಲ್’ ತಂಡ ಬಾಲಯ್ಯ ಅವರ ‘ಅನ್ಸ್ಟಾಪಬಲ್’ ಶೋ ಹಾಗೂ ದುಬೈನಲ್ಲಿ ಪ್ರಮೋಷನಲ್ ವಿಡಿಯೋ ರಿಲೀಸ್ ಮಾಡಿದ್ದು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ. ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಕೂಡ ಆಯೋಜನೆ ಮಾಡಿಲ್ಲ. ತೆಲುಗಿನಲ್ಲಿ, ಕನ್ನಡದಲ್ಲಿ ಹಾಗಿರಲಿ ಹಿಂದಿಯಲ್ಲೇ ಸಿನಿಮಾಗೆ ಪ್ರಚಾರ ಸಿಗುತ್ತಿಲ್ಲ. ಇದು ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ. ಡಿಸೆಂಬರ್ ತಿಂಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ಸಿನಿಮಾ ಚೆನ್ನಾಗಿಲ್ಲ ಎಂದರೆ ಒಂದೇ ವಾರಕ್ಕೆ ಥಿಯೇಟರ್ನಿಂದ ಕಾಲ್ಕೀಳಬೇಕಾಗಿ ಬರಹುದು. ಈ ಬಗ್ಗೆ ತಂಡಕ್ಕೆ ಚಿಂತೆ ಇದ್ದಂತೆ ಕಾಣುತ್ತಿಲ್ಲ.
ಇದನ್ನೂ ಓದಿ: ಮತ್ತೆ ಮುಂದುವರಿದ ಕಿಸ್ಸಿಂಗ್ ಸರಣಿ; ‘ಅನಿಮಲ್’ ಹೊಸ ಹಾಡಿನಲ್ಲಿ ರಣಬೀರ್-ರಶ್ಮಿಕಾ ಲಿಪ್ ಲಾಕ್
ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣ, ತಿರುಪತಿ ಮೊದಲಾದ ಕಡೆಗಳಲ್ಲಿ ಸಂದೀಪ್, ರಣಬೀರ್ ಹಾಗೂ ರಶ್ಮಿಕಾ ತೆರಳುವವರಿದ್ದರು. ಆದರೆ, ಆ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ರಣಬೀರ್ ಕಪೂರ್ ಅವರಿಗೆ ಈ ಸಿನಿಮಾ ಮೂಲಕ ಗೆಲ್ಲಬೇಕಿದೆ. ‘ಬ್ರಹ್ಮಾಸ್ತ್ರ’ ಗೆಲುವಿನ ಬಳಿಕ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಇದು. ರಶ್ಮಿಕಾ ಅವರು ಈ ವರ್ಷ ಕೆಲವು ಗೆಲುವು ಕಂಡಿದ್ದಾರೆ. ಈ ಚಿತ್ರದಿಂದ ಅವರು ಮತ್ತೊಂದು ಗೆಲುವು ಕಾಣುವ ಕನಸು ಕಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.