ಪತಿ ರಣಬೀರ್ ಕಪೂರ್ ಬಗ್ಗೆ ಟಾಕ್ಸಿಕ್ ಎಂದವರಿಗೆ ತಿರುಗೇಟು ನೀಡಿದ ಆಲಿಯಾ ಭಟ್
ಕರಣ್ ಜೋಹರ್ ಅವರಿಗೆ ಬಾಲಿವುಡ್ನ ಎಲ್ಲ ಸೆಲೆಬ್ರಿಟಿಗಳ ಜೊತೆ ನಂಟು ಇದೆ. ‘ಕಾಫಿ ವಿತ್ ಕರಣ್’ ಶೋಗೆ ಬರುವ ಅತಿಥಿಗಳಿಗೆ ಅವರು ಅನೇಕ ವೈಯಕ್ತಿಕ, ವಿವಾದಾತ್ಮಕ ಪ್ರಶ್ನೆಗಳನ್ನು ಕೇಳುತ್ತಾರೆ. ಕರಣ್ ಜೊತೆಗೆ ಇರುವ ಬಾಂಧವ್ಯದ ಕಾರಣದಿಂದ ಆ ಸೆಲೆಬ್ರಿಟಿಗಳು ಮುಕ್ತವಾಗಿ ಮಾತನಾಡುತ್ತಾರೆ. ಈಗ ನಟಿ ಆಲಿಯಾ ಭಟ್ ಸರದಿ..
ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ (Ranbir Kapoor) ಅವರು ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಅನ್ಯೋನ್ಯತೆ ಇದೆ. ಹಾಗಿದ್ದರೂ ಕೂಡ ಕೆಲವರು ಅವರ ಸಂಬಂಧದಲ್ಲಿ ಹುಳಿ ಹಿಂಡುವ ಕೆಲಸ ಮಾಡಿದ್ದಾರೆ. ಅಂಥವರಿಗೆ ಆಲಿಯಾ ಭಟ್ (Alia Bhatt) ಖಡಕ್ ತಿರುಗೇಟು ನೀಡಿದ್ದಾರೆ. ಕೆಲವೇ ದಿನಗಳ ಹಿಂದೆ ರಣಬೀರ್ ಕಪೂರ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಆಲಿಯಾಗೆ ಲಿಪ್ಸ್ಟಿಕ್ ಹಚ್ಚಲು ಬಿಡುವುದಿಲ್ಲ ಎಂಬ ಕಾರಣಕ್ಕೆ ರಣಬೀರ್ ಕಪೂರ್ಗೆ ‘ಟಾಕ್ಸಿಕ್’ (Toxic) ಎಂದು ಹಣೆಪಟ್ಟೆ ಕಟ್ಟಲಾಗಿತ್ತು. ಅದರ ಬಗ್ಗೆ ಈಗ ಆಲಿಯಾ ಭಟ್ ಮಾತನಾಡಿದ್ದಾರೆ. ‘ಕಾಫಿ ವಿತ್ ಕರಣ್’ ಶೋನಲ್ಲಿ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕರಣ್ ಜೋಹರ್ ಅವರಿಗೆ ಬಾಲಿವುಡ್ನ ಎಲ್ಲ ಸೆಲೆಬ್ರಿಟಿಗಳ ಜೊತೆ ನಂಟು ಇದೆ. ‘ಕಾಫಿ ವಿತ್ ಕರಣ್’ ಶೋಗೆ ಬರುವ ಅತಿಥಿಗಳಿಗೆ ಅವರು ಅನೇಕ ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಾರೆ. ಕರಣ್ ಜೊತೆಗೆ ಇರುವ ಬಾಂಧವ್ಯದ ಕಾರಣದಿಂದ ಆ ಸೆಲೆಬ್ರಿಟಿಗಳು ಮುಕ್ತವಾಗಿ ಮಾತನಾಡುತ್ತಾರೆ. ರಣಬೀರ್ ಕಪೂರ್ ಅವರನ್ನು ಟಾಕ್ಸಿಕ್ ಎಂದು ಜನರು ಕರೆದಿದ್ದರ ಬಗ್ಗೆ ಆಲಿಯಾ ಭಟ್ ಇಷ್ಟು ದಿನ ಸುಮ್ಮನಾಗಿದ್ದರು. ಆದರೆ ಈಗ ಅವರು ಮೌನ ಮುರಿದಿದ್ದಾರೆ. ತಮ್ಮ ಗಂಡನ ವ್ಯಕ್ತಿತ್ವ ಆ ರೀತಿ ಇಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿವೇಕ್ ಅಗ್ನಿಹೋತ್ರಿಗೆ ಆಲಿಯಾ ಭಟ್ನ ಕಂಡರೆ ಸಖತ್ ಇಷ್ಟ; ಕಾರಣ ತಿಳಿಸಿದ ನಿರ್ದೇಶಕ
ವಿವಾದ ಶುರುವಾಗಿದ್ದು ಹೇಗೆ?
ಮೇಕಪ್ಗೆ ಸಂಬಂಧಿಸಿದ ಒಂದು ವಿಡಿಯೋದಲ್ಲಿ ಆಲಿಯಾ ಭಟ್ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು. ‘ನಾನು ಲಿಪ್ಸ್ಟಿಕ್ ಹಚ್ಚಿಕೊಂಡರೆ ರಣಬೀರ್ ಕಪೂರ್ಗೆ ಇಷ್ಟ ಆಗುವುದಿಲ್ಲ. ಅದನ್ನು ಒರೆಸಿಕೋ ಅಂತ ಅವರು ಹೇಳುತ್ತಾರೆ’ ಎಂದಿದ್ದರು ಆಲಿಯಾ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಣಬೀರ್ ಕಪೂರ್ ಅವರನ್ನು ಟಾಕ್ಸಿಕ್ ಎಂದು ನೆಟ್ಟಿಗರು ಕರೆದಿದ್ದರು.
ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ಮದುವೆಯ ಸೀರೆಯುಟ್ಟು ಬಂದ ಆಲಿಯಾ ಭಟ್; ಫ್ಯಾನ್ಸ್ ಏನಂದ್ರು?
ಆಲಿಯಾ ಭಟ್ ಪ್ರತಿಕ್ರಿಯೆ:
‘ಈ ರೀತಿ ಆಗಿದ್ದಕ್ಕೆ ನನಗೆ ಬೇಜಾರಾಯ್ತು. ಯಾಕೆಂದರೆ ರಣಬೀರ್ ಕಪೂರ್ ಅವರ ವ್ಯಕ್ತಿತ್ವ ಸಂಪೂರ್ಣ ವಿರುದ್ಧವಾಗಿದೆ. ನನ್ನ ಮಾತನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಯಿತು. ನನ್ನ ತಂಡದವರೂ ಅದನ್ನು ನನಗೆ ತಿಳಿಸಿದರು. ಆಗಲಿ ಬಿಡಿ ಎಂದೆ. ಆದರೆ ರಣಬೀರ್ ಕಪೂರ್ ಬಗ್ಗೆ ಗಂಭೀರವಾದ ಲೇಖನ ಬರೆದು, ಅದರಲ್ಲೂ ಕೂಡ ಟಾಕ್ಸಿಕ್ ಎಂದು ವಿವರಿಸಲಾಗಿತ್ತು. ಜಗತ್ತಿನಲ್ಲಿ ಗಮನ ನೀಡಲು ಬೇರೆ ವಿಷಯಗಳು ಕೂಡ ಇವೆ’ ಎಂದು ಆಲಿಯಾ ಭಟ್ ಹೇಳಿದ್ದಾರೆ. ಆ ಮೂಲಕ ಅವರು ಗಂಡನ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.