AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nana Patekar: ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ಥಳಿಸಿದ ನಟ ನಾನಾ ಪಾಟೇಕರ್​; ವಿಡಿಯೋ ವೈರಲ್​

Nana Patekar Viral Video: ಶೂಟಿಂಗ್​ನಲ್ಲಿ ತೊಡಗಿಕೊಂಡಿರುವಾಗ ಅಭಿಮಾನಿಯೊಬ್ಬರು ನಾನಾ ಪಾಟೇಕರ್​ ಜೊತೆ ಸೆಲ್ಫಿ ತೆಗೆದುಕೊಳ್ಳಲು ತೆರಳಿದ್ದಾರೆ. ಇದರಿಂದ ನಾನಾ ಪಾಟೇಕರ್​ಗೆ ತೀವ್ರ ಕೋಪ ಬಂದಿದೆ. ಸೆಲ್ಫಿ ಕೇಳಲು ಬಂದ ವ್ಯಕ್ತಿಯ ತಲೆಗೆ ಅವರು ಹೊಡೆದಿದ್ದಾರೆ. ಅಲ್ಲಿದೇ ಸೆಟ್​ನಲ್ಲಿದ್ದ ಬೇರೆ ಸಿಬ್ಬಂದಿ ಕೂಡ ಆ ಅಭಿಮಾನಿಯ ಕುತ್ತಿಗೆ ಹಿಡಿದು ಹೊರಗೆ ತಳ್ಳಿದ್ದಾರೆ.

Nana Patekar: ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ಥಳಿಸಿದ ನಟ ನಾನಾ ಪಾಟೇಕರ್​; ವಿಡಿಯೋ ವೈರಲ್​
ನಾನಾ ಪಾಟೇಕರ್​
ಮದನ್​ ಕುಮಾರ್​
|

Updated on: Nov 15, 2023 | 4:45 PM

Share

ಬಾಲಿವುಡ್​ನ ಖ್ಯಾತ ನಟ ನಾನಾ ಪಾಟೇಕರ್​ (Nana Patekar) ಅವರು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸೆಲ್ಫಿ ಕೇಳಲು ಬಂದ ಯುವಕನಿಗೆ ಅವರು ಹೊಡೆದಿದ್ದಾರೆ. ಸ್ಥಳದಲ್ಲಿ ಇದ್ದ ಜನರ ಮೊಬೈಲ್​ನಲ್ಲಿ ಈ ಕಹಿ ಘಟನೆಯ ದೃಶ್ಯ (Nana Patekar Viral Video) ಸೆರೆಯಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗಿದೆ. ನಾನಾ ಪಾಟೇಕರ್​ ಅವರ ವರ್ತನೆಯನ್ನು ಅನೇಕರು ಖಂಡಿಸಿದ್ದಾರೆ. ಅಭಿಮಾನದಿಂದ ಸೆಲ್ಫಿ ತೆಗೆದುಕೊಳ್ಳಲು ಬಂದ ಯುವಕನಿಗೆ ನಾನಾ ಪಾಟೇಕರ್​ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ನೆಟ್ಟಿಗರು ಛಾಟಿ ಬೀಸುತ್ತಿದ್ದಾರೆ. ಈ ಬಗ್ಗೆ ನಾನಾ ಪಾಟೇಕರ್​ ಅವರು ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.

ನಾನಾ ಪಾಟೇಕರ್​ ಅವರಿಗೆ ಸಖತ್​ ಬೇಡಿಕೆ ಇದೆ. ಬಾಲಿವುಡ್​ನಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳ ಮೂಲಕ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ವರ್ಷ ಬಿಡುಗಡೆ ಆದ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಿದರು. ಅವರ ಜೊತೆ ಒಂದು ಫೋಟೋ ತೆಗೆದುಕೊಳ್ಳಬೇಕು ಎಂಬುದು ಎಲ್ಲ ಅಭಿಮಾನಿಗಳ ಆಸೆ. ಆದರೆ ಸೆಲ್ಫಿ ಕೇಳಲು ಬಂದು ಅಭಿಮಾನಿಗೆ ನಾನಾ ಪಾಟೇಕರ್​ ಅವರು ಹೊಡೆದು ಕಳಿಸಿರುವುದು ಸರಿಯಲ್ಲ ಎಂದು ಎಲ್ಲರೂ ಅಭಿಪ್ರಾಯ ತಿಳಿಸುತ್ತಿದ್ದಾರೆ.

ಶಿಲ್ಪಾ ಶೆಟ್ಟಿ ಮಗಳ ಜತೆ ಕಾರು ಏರಲು ಮುಂದಾದ ಅಭಿಮಾನಿ; ಫ್ಯಾನ್ ವರ್ತನೆ ನೋಡಿ ನಟಿ ಶಾಕ್

ಸದ್ಯ ‘ಜರ್ನಿ’ ಸಿನಿಮಾದ ಶೂಟಿಂಗ್​ನಲ್ಲಿ ನಾನಾ ಪಾಟೇಕರ್​ ಅವರು ಬ್ಯುಸಿ ಆಗಿದ್ದಾರೆ. ವಾರಾಣಸಿಯಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಶೂಟಿಂಗ್​ನಲ್ಲಿ ಚಿತ್ರತಂಡ ತೊಡಗಿಕೊಂಡಿರುವಾಗ ಅಭಿಮಾನಿಯೊಬ್ಬರು ನಾನಾ ಪಾಟೇಕರ್​ ಜೊತೆ ಸೆಲ್ಫಿ ತೆಗೆದುಕೊಳ್ಳಲು ತೆರಳಿದ್ದಾರೆ. ಇದರಿಂದ ನಾನಾ ಪಾಟೇಕರ್​ಗೆ ತೀವ್ರ ಕೋಪ ಬಂದಿದೆ. ಸೆಲ್ಫಿ ಕೇಳಲು ಬಂದ ವ್ಯಕ್ತಿಯ ತಲೆಗೆ ಅವರು ಹೊಡೆದಿದ್ದಾರೆ. ಅಲ್ಲಿದೇ ಸೆಟ್​ನಲ್ಲಿದ್ದ ಬೇರೆ ಸಿಬ್ಬಂದಿ ಕೂಡ ಆ ಅಭಿಮಾನಿಯ ಕುತ್ತಿಗೆ ಹಿಡಿದು ಹೊರಗೆ ತಳ್ಳಿದ್ದಾರೆ. ಈ ಘಟನೆಗೆ ಎಲ್ಲರೂ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

‘ಸೆಲೆಬ್ರಿಟಿಗಳ ಮೇಲೆ ಅಭಿಮಾನ ಇರಬೇಕು ನಿಜ. ಆದರೆ ಎಲ್ಲದಕ್ಕೂ ಮಿತಿ ಇರಬೇಕು. ಸಮಯ, ಸಂದರ್ಭ ನೋಡಿಕೊಂಡು ಸೆಲ್ಫಿ ಕೇಳಬೇಕು’ ಎಂದು ಕೆಲವರು ಕಮೆಂಟ್​ ಮಾಡುವ ಮೂಲಕ ನಾನಾ ಪಾಟೇಕರ್​ ಪರವಾಗಿ ಬ್ಯಾಟ್​ ಬೀಸಿದ್ದಾರೆ. ಇನ್ನುಳಿದವರು ನಾನಾ ಪಾಟೇಕರ್​ ಅವರನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ಈ ಮೊದಲು ಕೂಡ ಅನೇಕ ಸೆಲೆಬ್ರಿಟಿಗಳು ಅಭಿಮಾನಿಗಳ ಮೇಲೆ ಕೋಪ ತೋರಿಸಿದ್ದುಂಟು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
'ಹ್ಯಾಟ್ರಿಕ್' ಹೀರೋ ಸ್ಯಾಮ್ ಕರನ್
'ಹ್ಯಾಟ್ರಿಕ್' ಹೀರೋ ಸ್ಯಾಮ್ ಕರನ್
ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು; ಧನಂಜಯ
ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು; ಧನಂಜಯ