AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀತಾ ರಾಮಂ’ ಸುಂದರಿ ಮೃಣಾಲ್​ ಠಾಕೂರ್​ ಜೊತೆ ಬಾದ್​ಷಾ ಪ್ರೀತಿ-ಪ್ರೇಮ? ಸಿಕ್ತು ಸ್ಪಷ್ಟನೆ

ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮೆಲ್ಲ ಸ್ನೇಹಿತರಿಗಾಗಿ ಮುಂಬೈನಲ್ಲಿ ದೀಪಾವಳಿ ಹಬ್ಬದ ಔತಣ ಕೂಟ ಆಯೋಜಿಸಿದ್ದರು. ಈ ಪಾರ್ಟಿಗೆ ಬಂದಿದ್ದ ಮೃಣಾಲ್​ ಠಾಕೂರ್​ ಅವರು ಸಿಂಗರ್​ ಬಾದ್​ಷಾ ಜೊತೆ ಕಾಣಿಸಿಕೊಂಡರು. ಅವರಿಬ್ಬರು ಕೈ-ಕೈ ಹಿಡಿದು ನಡೆದಾಡಿದ ವಿಡಿಯೋ ವೈರಲ್​ ಆಯಿತು. ಅದರ ಬೆನ್ನಲ್ಲೇ ಗಾಸಿಪ್​ ಹಬ್ಬಿದೆ.

‘ಸೀತಾ ರಾಮಂ’ ಸುಂದರಿ ಮೃಣಾಲ್​ ಠಾಕೂರ್​ ಜೊತೆ ಬಾದ್​ಷಾ ಪ್ರೀತಿ-ಪ್ರೇಮ? ಸಿಕ್ತು ಸ್ಪಷ್ಟನೆ
ಬಾದ್​ಶಾ, ಮೃಣಾಲ್​ ಠಾಕೂರ್​,
ಮದನ್​ ಕುಮಾರ್​
|

Updated on: Nov 15, 2023 | 11:55 AM

Share

ಸೆಲೆಬ್ರಿಟಿಗಳ ಪ್ರತಿಯೊಂದು ನಡೆಯ ಮೇಲೂ ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ. ಅವರ ವರ್ತನೆಯಲ್ಲಿ ಏನಾದರೂ ವ್ಯತ್ಯಾಸ ಕಾಣಿಸಿದರೆ ಕೂಡಲೇ ಗಾಸಿಪ್​ಗಳು (Gossip) ಹುಟ್ಟಿಕೊಳ್ಳುತ್ತವೆ. ಪ್ರೀತಿ-ಪ್ರೇಮದ ವಿಚಾರಗಳು ಕಾಳ್ಗಿಚ್ಚಿನಂತೆ ಹರಡುತ್ತವೆ. ನಟಿ ಮೃಣಾಲ್​ ಠಾಕೂರ್ ಅವರ ವಿಚಾರದಲ್ಲಿ ಈಗ ಅದೇ ರೀತಿ ಆಗಿದೆ. ಖ್ಯಾತ ಸಿಂಗರ್​ ಬಾದ್​ಷಾ (Badshah) ಜೊತೆ ಮೃಣಾಲ್​ ಠಾಕೂರ್​ ಅವರು ಪ್ರೀತಿಯಲ್ಲಿ ಮುಳುಗಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ. ಇಬ್ಬರ ನಡುವೆ ಆಪ್ತತೆ ಹೆಚ್ಚಿರುವುದೇ ಇದಕ್ಕೆ ಕಾರಣ. ಈ ಗಾಸಿಪ್​ಗಳಿಗೆ ಸ್ವತಃ ಬಾದ್​ಷಾ ಅವರು ಸ್ಪಷ್ಟನೆ ನೀಡಿದ್ದಾರೆ. ಮೃಣಾಲ್ ಠಾಕೂರ್​ (Mrunal Thakur) ಅವರ ಹೆಸರನ್ನು ಪ್ರಸ್ತಾಪ ಮಾಡದೆಯೂ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಗಾಸಿಪ್​ ಹುಟ್ಟುಲು ಕಾರಣ?

ಬಾಲಿವುಡ್​ನ ಕೆಲವು ಸೆಲೆಬ್ರಿಟಿಗಳು ಅದ್ದೂರಿಯಾಗಿ ದೀಪಾವಳಿ ಆಯೋಜಿಸುತ್ತಾರೆ. ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮೆಲ್ಲ ಸ್ನೇಹಿತರಿಗಾಗಿ ದೀಪಾವಳಿ ಹಬ್ಬದ ಔತಣ ಕೂಟ ಆಯೋಜಿಸಿದ್ದರು. ಈ ಪಾರ್ಟಿಗೆ ಬಂದಿದ್ದ ಮೃಣಾಲ್​ ಠಾಕೂರ್​ ಅವರು ಸಿಂಗರ್​ ಬಾದ್​ಷಾ ಜೊತೆ ಕಾಣಿಸಿಕೊಂಡರು. ಅವರಿಬ್ಬರು ಕೈ-ಕೈ ಹಿಡಿದು ನಡೆದಾಡಿದ ವಿಡಿಯೋ ವೈರಲ್​ ಆಯಿತು. ಹಾಗಾಗಿ ಇವರಿಬ್ಬರ ನಡುವೆ ಪ್ರೀತಿ ಚಿಗುರಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಸೋಶಿಯಲ್​ ಮೀಡಿಯಾ ತುಂಬೆಲ್ಲ ಇವರ ಬಗ್ಗೆಯೇ ಗುಸುಗುಸು ಕೇಳಿಬರಲು ಆರಂಭಿಸಿದೆ.

ಬಾದ್​ಷಾ ಪ್ರತಿಕ್ರಿಯೆ ಏನು?

ಮೃಣಾಲ್​ ಠಾಕೂರ್​ ಜೊತೆಗೆ ತಮ್ಮ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆಯೇ ಬಾದ್​ಷಾ ಅವರು ಅಲರ್ಟ್​ ಆಗಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಅವರು ಸ್ಪಷ್ಟನೆ ನೀಡಿದ್ದಾರೆ. ‘ಪ್ರೀತಿಯ ಇಂಟರ್​ನೆಟ್​ ಬಳಕೆದಾರರೇ.. ಮತ್ತೊಮ್ಮೆ ನಿಮ್ಮನ್ನು ನಿರಾಸೆ ಮಾಡಿದ್ದಕ್ಕೆ ಕ್ಷಮೆ ಇರಲಿ. ಆದರೆ ನೀವು ಊಹಿಸಿದಂತೆ ಏನೂ ಇಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ. ಈ ಸಾಲುಗಳಲ್ಲಿ ಮೃಣಾಲ್​ ಠಾಕೂರ್​ ಹೆಸರು ಪ್ರಸ್ತಾಪಿಸಿಲ್ಲವಾದರೂ ಇದು ಅವರ ಬಗ್ಗೆಯೇ ಬರೆದಿದ್ದು ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ.

ಇದನ್ನೂ ಓದಿ: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಮೃಣಾಲ್ ಠಾಕೂರ್

ಮೃಣಾಲ್​ ಠಾಕೂರ್​ ಬಗ್ಗೆ:

ನಟಿ ಮೃಣಾಲ್​ ಠಾಕೂರ್​ ಅವರು ಬಾಲಿವುಡ್​ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿದ್ದಾರೆ. ಹೃತಿಕ್​ ರೋಷನ್​, ಶಾಹಿದ್​ ಕಪೂರ್​, ಜಾನ್​ ಅಬ್ರಾಹಂ, ಫರ್ಹಾನ್​ ಅಖ್ತರ್​ ಮುಂತಾದ ಸ್ಟಾರ್​ ಹೀರೋಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ದುಲ್ಕರ್​ ಸಲ್ಮಾನ್​ ಜೊತೆ ಅವರು ನಟಿಸಿದ ‘ಸೀತಾ ರಾಮಂ’ ಸಿನಿಮಾ ಸೂಪರ್​ ಹಿಟ್​ ಆಯಿತು. ಆ ಚಿತ್ರದ ಯಶಸ್ಸಿನ ಬಳಿಕ ದಕ್ಷಿಣ ಭಾರತದಲ್ಲಿ ಅವರ ಬೇಡಿಕೆ ಹೆಚ್ಚಾಗಿದೆ. ಬಾದ್​ಷಾ ಜೊತೆಗಿನ ಲವ್​ ಗಾಸಿಪ್​ ಬಗ್ಗೆ ಅವರಿನ್ನೂ ಪ್ರತಿಕ್ರಿಯೆ ನೀಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?