ಸಾಮಾನ್ಯರಂತಿರುವ ಈ ಸೆಲೆಬ್ರಿಟಿಗಳ ಹಿನ್ನೆಲೆ ಕೇಳಿದ್ರೆ ನೀವು ಅಚ್ಚರಿ ಪಡೋದು ಗ್ಯಾರಂಟಿ..
ಅನೇಕ ಸ್ಟಾರ್ಗಳಿಗೆ ದೊಡ್ಡ ಹಿನ್ನೆಲೆ ಇದೆ. ಆದರೆ, ಅವರು ಎಂದಿಗೂ ಸ್ಟಾರ್ ಕಿಡ್ ಎನ್ನುವ ಟ್ಯಾಗ್ ಪಡೆದವರಲ್ಲ. ಈ ರೀತಿ ಇನ್ಫ್ಲುಯೆನ್ಶಿಯಲ್ ಬ್ಯಾಕ್ಗ್ರೌಂಡ್ನಿಂದ ಬಂದವರ ಸಾಲಿನಲ್ಲಿ ರಣವೀರ್ ಸಿಂಗ್, ವಿಕ್ಕಿ ಕೌಶಲ್ ಸೇರಿ ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಅನನ್ಯಾ ಪಾಂಡೆ, ವರುಣ್ ಧವನ್, ಸಿದ್ದಾರ್ಥ್ ಮಲ್ಹೋತ್ರ, ಜಾನ್ವಿ ಕಪೂರ್, ಆಲಿಯಾ ಭಟ್ (Alia Bhatt) ಸೇರಿ ಅನೇಕರು ನೆಪೋಟಿಸಂ ಟ್ಯಾಗ್ ಪಡೆದಿದ್ದಾರೆ. ಇವರು ಆಗಾಗ ಎಲ್ಲರಿಂದ ಟೀಕೆಗೆ ಒಳಗಾಗುತ್ತಲೇ ಇರುತ್ತಾರೆ. ಮತ್ತೊಂದೆಡೆ ಬಾಲಿವುಡ್ಗೆ ಹೊರಗಿನಿಂದ ಬಂದು ಗಟ್ಟಿ ನೆಲೆ ಕಂಡುಕೊಂಡವರೂ ಇದ್ದಾರೆ. ಆದರೆ ಇದು ಸುಲಭದ ಮಾತಲ್ಲ. ಇದೆರಡು ವರ್ಗ ಬಿಟ್ಟು ಮತ್ತೊಂದು ವರ್ಗ ಇದೆ. ಅನೇಕ ಸ್ಟಾರ್ಗಳಿಗೆ ದೊಡ್ಡ ಹಿನ್ನೆಲೆ ಇದೆ. ಆದರೆ, ಅವರು ಎಂದಿಗೂ ಸ್ಟಾರ್ ಕಿಡ್ ಎನ್ನುವ ಟ್ಯಾಗ್ ಪಡೆದವರಲ್ಲ. ಈ ರೀತಿ ಇನ್ಫ್ಲುಯೆನ್ಶಿಯಲ್ ಬ್ಯಾಕ್ಗ್ರೌಂಡ್ನಿಂದ ಬಂದವರ ಸಾಲಿನಲ್ಲಿ ರಣವೀರ್ ಸಿಂಗ್, ವಿಕ್ಕಿ ಕೌಶಲ್ ಸೇರಿ ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಅಜಯ್ ದೇವಗನ್
ಅಜಯ್ ದೇವಗನ್ ಅವರು ಬಾಲಿವುಡ್ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅಜಯ್ ನಿರ್ದೇಶಕ ಹಾಗೂ ನಿರ್ಮಾಪಕ ಕೂಡ ಹೌದು. ಇವರು ವೀರು ದೇವಗನ್ ಅವರ ಪುತ್ರ. ವೀರು ದೇವಗನ್ ಅವರು ಬಾಲಿವುಡ್ನ ಖ್ಯಾತ ಆ್ಯಕ್ಷನ್ ಕೊರಿಯೋಗ್ರಾಫರ್. ಅಜಯ್ ದೇವಗನ್ ತಾಯಿ ವೀಣಾ ದೇವಗನ್ ಅವರು ನಿರ್ಮಾಪಕಿ. ಇನ್ನು, ಅಜಯ್ ದೇವಗನ್ ಅವರ ಕಸಿನ್ ಅನಿಲ್ ದೇವಗನ್ ಅವರು ಬಾಲಿವುಡ್ನ ಚಿತ್ರಕಥೆಗಾರ.
ಯಾಮಿ ಗೌತಮ್
ಯಾಮಿ ಗೌತಮ್ ಅವರು ಪಂಜಾಬಿ ಸಿನಿಮಾ ಇಂಡಸ್ಟ್ರಿಯ ನಿರ್ದೇಶಕ ಹಾಗೂ ನಿರ್ಮಾಪಕನ ಮಗಳು. ಯಾಮಿ ಅವರ ಸಹೋದರಿ ಪಂಜಾಬಿ ಇಂಡಸ್ಟ್ರಿಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ‘ವಿಕ್ಕಿ ಡೋನರ್’ ಸಿನಿಮಾ ಮೂಲಕ ಯಾಮಿ ಗೌತಮ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಮದುವೆ ಬಳಿಕ ಸಿನಿಮಾ ಆಯ್ಕೆಯಲ್ಲಿ ಅವರು ಚ್ಯೂಸಿ ಆಗಿದ್ದಾರೆ.
ರಣವೀರ್ ಸಿಂಗ್
ರಣವೀರ್ ಸಿಂಗ್ ಅವರು ಬಾಲಿವುಡ್ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರಿಗೆ ಸಖತ್ ಬೇಡಿಕೆ ಇದೆ. ರಣವೀರ್ ಸಿಂಗ್ ಅವರು ಸೋನಮ್ ಕಪೂರ್ ಅವರ ಕಸಿನ್. ಈ ವಿಚಾರ ಅನೇಕರಿಗೆ ತಿಳಿದಿಲ್ಲ.
ಕಿಯಾರಾ ಅಡ್ವಾಣಿ
ಕಿಯಾರಾ ಅಡ್ವಾಣಿ ಅವರ ಕುಟುಂಬಕ್ಕೆ ಸಾಕಷ್ಟು ಪ್ರಭಾವ ಇದೆ. ಈ ಕಾರಣದಿಂದಲೇ ಕಿಯಾರಾಗೆ ಬಾಲಿವುಡ್ ಎಂಟ್ರಿ ಸುಲಭ ಆಯಿತು. ಜೂಹಿ ಚಾವ್ಲಾ ಅವರ ಸಂಬಂಧಿ ಆಗಿದ್ದಾರೆ ಕಿಯಾರಾ. ಜೂಹಿ ಅವರು ತಮ್ಮ ಮನೆಯ ಪಾರ್ಟಿಯಲ್ಲಿ ಬಾಲಿವುಡ್ ಮಂದಿಗೆ ಕಿಯಾರಾ ಅವರನ್ನು ಪರಿಚಯಿಸಿದ್ದರು. ಕಳೆದ ಕೆಲ ವರ್ಗಳಿಂದ ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.
ವಿಕ್ಕಿ ಕೌಶಲ್
ವಿಕ್ಕಿ ಕೌಶಲ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಖ್ಯಾತ ಸ್ಟಂಟ್ ಡೈರೆಕ್ಟರ್ ಶ್ಯಾಮ್ ಕೌಶಲ್ ಅವರ ಮಗ ವಿಕ್ಕಿ. 100ಕ್ಕೂ ಅಧಿಕ ಸಿನಿಮಾಗಳಲ್ಲಿ ಶ್ಯಾಮ್ ಕೌಶಲ್ ಕೆಲಸ ಮಾಡಿದ್ದಾರೆ. ಅವರಿಗೆ ಬಾಲಿವುಡ್ನಲ್ಲಿ ಜನಪ್ರಿಯತೆ ಇತ್ತು. ಇದರಿಂದ ವಿಕ್ಕಿಗೆ ಬಾಲಿವುಡ್ ಎಂಟ್ರಿ ಸುಲಭ ಆಯಿತು.
ಅಮೀಷಾ ಪಟೇಲ್
‘ಗದರ್ 2’ ಚಿತ್ರದ ಮೂಲಕ ದೊಡ್ಡ ಮಟ್ಟದ ಯಶಸ್ಸು ಪಡೆದವರು ಅಮೀಷಾ ಪಟೇಲ್. ಅವರಿಗೆ ದೊಡ್ಡ ಮಟ್ಟದ ಬ್ಯಾಕ್ಗ್ರೌಂಡ್ ಇದೆ. ಅವರ ತಾತ ರಹ್ನಿ ಪಟೇಲ್ ಬ್ಯಾರಿಸ್ಟರ್, ವಕೀಲ, ರಾಜಕಾರಣಿ. ಅಮೀಷಾ ಪಟೇಲ್ ತಂದೆಯ ಜೊತೆ ರಾಕೇಶ್ ರೋಷನ್ ಒಳ್ಳೆಯ ಒಡನಾಟ ಹೊಂದಿದ್ದರು. ಹೀಗಾಗಿ, ಅಮೀಷಾಗೆ ‘ಕಹೋ ನಾ ಪ್ಯಾರ್ ಹೈ’ ಚಿತ್ರದಲ್ಲಿ ನಟಿಸೋಕೆ ಅವಕಾಶ ಸಿಕ್ಕಿತು.
ಅದಿತಿ ರಾವ್ ಹೈದರಿ
ಅದಿತಿ ರಾವ್ ಹೈದರಿ ಅವರ ತಾತ ಅಕ್ಬರ್ ಹೈದರಿ ಅವರು ಹೈದರಾಬಾದ್ ಸ್ಟೇಟ್ನ ಪ್ರಧಾನ ಮಂತ್ರಿ ಆಗಿದ್ದರು. ಅವರ ತಾಯಿ ವಿದ್ಯಾ ರಾವ್ ಕೂಡ ದೊಡ್ಡ ಹಿನ್ನೆಲೆ ಹೊಂದಿದ್ದಾರೆ.
ಸುನೀಲ್ ಶೆಟ್ಟಿ
ಸುನೀಲ್ ಶೆಟ್ಟಿ ಅವರು ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಈಗ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ತಮ್ಮದೇ ಉದ್ಯಮ ಆರಂಭಿಸಿದ್ದಾರೆ. ಹೋಟೆಲ್ ಹಾಗೂ ರಿಯಲ್ ಎಸ್ಟೇಟ್ ಬಿಸ್ನೆಸ್ನ ಸುನೀಲ್ ಶೆಟ್ಟಿ ಹೊಂದಿದ್ದಾರೆ. ಸುನೀಲ್ ಶೆಟ್ಟಿ ತಂದೆ ಹೆಸರು ವೀರಪ್ಪ ಶೆಟ್ಟಿ. ಇವರು ಹೋಟೆಲ್ ಉದ್ಯಮ ಹೊಂದಿದ್ದರು. ಅವರಿಗೆ ಚಿತ್ರರಂಗದ ಜೊತೆ ನಂಟಿತ್ತು. ಇದು ಸುನೀಲ್ ಶೆಟ್ಟಿಗೆ ವರದಾನ ಆಯಿತು.
ಇದನ್ನೂ ಓದಿ: Tiger 3: ಸಲ್ಮಾನ್ ಖಾನ್ ಮೇಲಿನ ಭಯಕ್ಕೆ ಕದ್ದುಮುಚ್ಚಿ ‘ಟೈಗರ್ 3’ ನೋಡಿದ ಅರ್ಜುನ್ ಕಪೂರ್?
ತಾರಾ ಸುತಾರಿಯಾ
ತಾರಾ ಸುತಾರಿಯಾ ಅವರು ‘ಸ್ಟೂಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಜಾನ್ ಅಬ್ರಹಾಮ್ ಅವರ ಜೊತೆ ತಾರಾ ಸುತಾರಿಯಾಗೆ ಗೆಳೆತನ ಇದೆ ಎನ್ನಲಾಗಿದೆ. ಈ ಕಾರಣಕ್ಕೆ ಅವರಿಗೆ ಸಿನಿಮಾದಲ್ಲಿ ನಟಿಸೋಕೆ ಅವಕಾಶ ದೊರೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:27 am, Wed, 15 November 23