Tiger 3: ಸಲ್ಮಾನ್ ಖಾನ್ ಮೇಲಿನ ಭಯಕ್ಕೆ ಕದ್ದುಮುಚ್ಚಿ ‘ಟೈಗರ್ 3’ ನೋಡಿದ ಅರ್ಜುನ್ ಕಪೂರ್?
ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ನವೆಂಬರ್ 12ರಂದು ರಿಲೀಸ್ ಆಯಿತು. ಭಾನುವಾರ ಸಿನಿಮಾ ರಿಲೀಸ್ ಆಗಿದ್ದರಿಂದ ಮೊದಲ ದಿನ ಸಿನಿಮಾಗೆ ಭರ್ಜರಿ ಗಳಿಕೆ ಆಗಿದೆ. ‘ಟೈಗರ್ 3’ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅರ್ಜುನ್ ಕಪೂರ್ ಸಿನಿಮಾ ನೋಡಲು ಒಂದು ಪ್ರಮುಖ ಕಾರಣ ಇದೆ.
ಸಲ್ಮಾನ್ ಖಾನ್ ಹಾಗೂ ಅರ್ಜುನ್ ಕಪೂರ್ (Arjun Kapoor) ಮಧ್ಯೆ ಕೋಲ್ಡ್ ವಾರ್ ನಡೆಯುತ್ತಿದೆ ಅನ್ನೋದು ಮೊದಲಿನಿಂದಲೂ ಇರೋ ಸುದ್ದಿ. ಆದರೆ, ಈ ಬಗ್ಗೆ ಯಾರೊಬ್ಬರೂ ಅಧಿಕೃತವಾಗಿ ಬಾಯ್ಬಿಟ್ಟಿಲ್ಲ. ಈ ಕಿತ್ತಾಟ ಕೊನೆಗೊಂಡಿದೆಯೋ ಅಥವಾ ಇಲ್ಲವೋ ಎನ್ನುವ ಬಗ್ಗೆಯೂ ಸರಿಯಾದ ಮಾಹಿತಿ ಇಲ್ಲ. ಹೀಗಿರುವಾಗಲೇ ಅರ್ಜುನ್ ಕಪೂರ್ ಅವರು ಕದ್ದುಮುಚ್ಚಿ ‘ಟೈಗರ್ 3’ (Tiger 3) ಸಿನಿಮಾ ವೀಕ್ಷಿಸಿದ್ದಾರೆ. ‘ಪಠಾಣ್’, ‘ವಾರ್’ ಅಂಥ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸಿದ್ದಾರ್ಥ್ ಆನಂದ್ ಅವರು ಅರ್ಜುನ್ ಕಪೂರ್ಗೆ ಸಾಥ್ ನೀಡಿದ್ದಾರೆ. ಅರ್ಜುನ್ ಜೊತೆ ಮಲೈಕಾ ಅರೋರಾ ಕಾಣಿಸಿಕೊಂಡಿಲ್ಲ ಅನ್ನೋದು ಅನೇಕರ ಕುತೂಹಲಕ್ಕೆ ಕಾರಣ ಆಗಿದೆ.
ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ನವೆಂಬರ್ 12ರಂದು ರಿಲೀಸ್ ಆಯಿತು. ಭಾನುವಾರ ಸಿನಿಮಾ ರಿಲೀಸ್ ಆಗಿದ್ದರಿಂದ ಮೊದಲ ದಿನ ಸಿನಿಮಾಗೆ ಭರ್ಜರಿ ಗಳಿಕೆ ಆಗಿದೆ. ‘ಟೈಗರ್ 3’ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅರ್ಜುನ್ ಕಪೂರ್ ಸಿನಿಮಾ ನೋಡಲು ಒಂದು ಪ್ರಮುಖ ಕಾರಣ ಇದೆ. ಈ ಸಿನಿಮಾದಲ್ಲಿ ನಟಿಸಿರೋ ಕತ್ರಿನಾ ಕೈಫ್ ಹಾಗೂ ಇಮ್ರಾನ್ ಹಷ್ಮಿ ಜೊತೆ ಅರ್ಜುನ್ ಕಪೂರ್ ಅವರಿಗೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಈ ಕಾರಣದಿಂದಲೇ ಅರ್ಜುನ್ ಕಪೂರ್ ಅವರು ಈ ಚಿತ್ರ ವೀಕ್ಷಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಅರ್ಜುನ್ ಕಪೂರ್ ಇಂದ ಮಲೈಕಾ ಅರೋರಾ ದೂರಾಗಲು ಕಾರಣವೇನು?
ಅರ್ಜುನ್ ಕಪೂರ್ ಅವರು ಕದ್ದು ಮುಚ್ಚಿ ಸಿನಿಮಾ ನೋಡಿದ್ದಾರೆ. ಅವರ ಜೊತೆ ಸಿದ್ದಾರ್ಥ್ ಆನಂದ್ ಕೂಡ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಕಪೂರ್ ಅವರು ಎಲ್ಲಾ ಕಡೆ ಸುತ್ತಾಡುವಾಗ ಮಲೈಕಾ ಅರೋರಾ ಜೊತೆಗೆ ಇರುತ್ತಿದ್ದರು. ಆದರೆ, ಈ ಬಾರಿ ಅವರು ಜೊತೆ ಇರಲಿಲ್ಲ. ಇವರದ್ದು ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಆಗಾಗ ಹರಿದಾಡುತ್ತಿದೆ. ಈ ಕಾರಣದಿಂದ ಫ್ರೆಂಡ್ಸ್ ಜೊತೆ ಅರ್ಜುನ್ ಬಂದಿದ್ದಾರೆ ಎಂದು ಹೇಳಲಾಗಿದೆ.
View this post on Instagram
ಸಲ್ಮಾನ್ ಖಾನ್ಗೆ ಅರ್ಜುನ್ ಕಪೂರ್ ಮೇಲೆ ಇರೋ ಕೋಪ ಏನು?
ಸಲ್ಮಾನ್ ಖಾನ್ ಹಾಗೂ ಅರ್ಜುನ್ ಕಪೂರ್ ಮಧ್ಯೆ ಈ ಮೊದಲು ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಅರ್ಜುನ್ಗೆ ಸಿನಿಮಾ ರಂಗಕ್ಕೆ ಬರೋಕೆ ಸಲ್ಮಾನ್ ಖಾನ್ ಸಹಾಯ ಮಾಡಿದ್ದರು. ಅವರು ಹಲವು ವಿಚಾರಗಳಲ್ಲಿ ಬೆಂಬಲ ನೀಡಿದ್ದರು. ಆದರೆ, ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಜೊತೆ ಅರ್ಜುನ್ ಕಪೂರ್ ಡೇಟಿಂಗ್ ಶುರುಹಚ್ಚಿಕೊಂಡರು. 2005ರಲ್ಲಿ ಇವರದ್ದು ಬ್ರೇಕಪ್ ಆಯಿತು. ಅರ್ಪಿತಾ ಅವರು ಈಗ ಆಯುಷ್ ಶರ್ಮಾ ಅವರನ್ನು ಮದುವೆ ಆದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಅರ್ಪಿತಾ ಜೊತೆ ಅರ್ಜುನ್ ಕಪೂರ್ ಅವರು ಡೇಟಿಂಗ್ ಮಾಡಿದ್ದು ಸಲ್ಮಾನ್ ಖಾನ್ಗೆ ಇಷ್ಟ ಆಗಿರಲಿಲ್ಲ. ಸಲ್ಮಾನ್ ಖಾನ್ ಹಾಗೂ ಅರ್ಜುನ್ ಕಪೂರ್ ಮಧ್ಯೆ ದ್ವೇಷ ಹುಟ್ಟಲು ಇದೊಂದೇ ಕಾರಣವಲ್ಲ. ಅರ್ಬಾಜ್ ಖಾನ್ ಅವರ ಮಾಜಿ ಪತ್ನಿ ಮಲೈಕಾ ಅರೋರಾ ಜೊತೆ ಅರ್ಜುನ್ ಕಪೂರ್ ಡೇಟಿಂಗ್ ಶುರು ಹಚ್ಚಿಕೊಂಡಿದ್ದಾರೆ. ಇದು ಕೂಡ ಸಲ್ಮಾನ್ ಖಾನ್ ಕೋಪಕ್ಕೆ ಕಾರಣ ಆಗಿತ್ತು.
ಅರ್ಜುನ್ ಕಪೂರ್ ವೃತ್ತಿ ಬದುಕಿನ ಬಗ್ಗೆ: ಅರ್ಜುನ್ ಕಪೂರ್ ಅವರು ‘ಇಶಖಜಾದೇ’ ಸಿನಿಮಾದಲ್ಲಿ ಮೊದಲು ನಟಿಸಿದರು. ಈ ಚಿತ್ರ 2012ರಲ್ಲಿ ರಿಲೀಸ್ ಆಯಿತು. ‘2 ಸ್ಟೇಟ್ಸ್’ ಸೇರಿ ಕೆಲವೇ ಕೆಲವು ಸಿನಿಮಾಗಳು ಮೆಚ್ಚುಗೆ ಪಡೆದವು. ಸಿನಿಮಾ ಆಯ್ಕೆಯಲ್ಲಿ ಅವರು ಚ್ಯೂಸಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.