ಸಲ್ಮಾನ್ ಖಾನ್ ಸಹೋದರಿಯಾಗಿ ನಟಿಸಬೇಕಿತ್ತು ಐಶ್ವರ್ಯಾ ರೈ; ಮುಲಾಜಿಲ್ಲದೇ ತಿರಸ್ಕರಿಸಿದ್ದ ಸಲ್ಲು

‘ಜೋಶ್’ ಸಿನಿಮಾದಲ್ಲಿ ಐಶ್ವರ್ಯಾ ರೈ, ಶಾರುಖ್ ಖಾನ್, ಮಾಧುರಿ ದೀಕ್ಷಿತ್ ನಟಿಸಿದ್ದರು. ಐಶ್ವರ್ಯಾ ರೈ ಸಹೋದರನ ಪಾತ್ರದಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದರು. ಈ ಆಫರ್ ಮೊದಲು ಸಲ್ಮಾನ್ ಖಾನ್​ ಅವರಿಗೆ ಹೋಗಿತ್ತು. ಆದರೆ ಅದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆ ಬಗ್ಗೆ ಐಶ್ವರ್ಯಾ ರೈ ಅವರು ಹೇಳಿಕೊಂಡಿದ್ದರು.

ಸಲ್ಮಾನ್ ಖಾನ್ ಸಹೋದರಿಯಾಗಿ ನಟಿಸಬೇಕಿತ್ತು ಐಶ್ವರ್ಯಾ ರೈ; ಮುಲಾಜಿಲ್ಲದೇ ತಿರಸ್ಕರಿಸಿದ್ದ ಸಲ್ಲು
ಸಲ್ಮಾನ್​ ಖಾನ್​, ಐಶ್ವರ್ಯಾ ರೈ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Nov 14, 2023 | 1:33 PM

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ (Aishwarya Rai) ಅವರು ಒಂದು ಕಾಲದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇಬ್ಬರೂ ಬೇರೆ ಆದರು. ಇವರ ವಿಚ್ಛೇದನಕ್ಕೆ ಕಾರಣ ಏನು ಏಂಬುದನ್ನು ಸರಿಯಾಗಿ ರಿವೀಲ್ ಮಾಡಿಲ್ಲ. ಇಬ್ಬರೂ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದರು. ಅಚ್ಚರಿ ಏನೆಂದರೆ ಒಂದು ಸಿನಿಮಾದಲ್ಲಿ ಐಶ್ವರ್ಯಾ ರೈ ಸಹೋದರನ ಪಾತ್ರದಲ್ಲಿ ಸಲ್ಮಾನ್ ಖಾನ್ (Salman Khan) ನಟಿಸಬೇಕಿತ್ತು. ಆದರೆ, ಅವರು ಆಫರ್​ನ ತಿರಸ್ಕರಿಸಿದರು. ಆ ಬಳಿಕ ಶಾರುಖ್ (Shah Rukh Khan) ಅವರು ಐಶ್ವರ್ಯಾ ಸಹೋದರನ ಪಾತ್ರ ಮಾಡಿದ್ದರು.

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಅವರು ಮೊದಲು ಒಟ್ಟಾಗಿ ನಟಿಸಿದ್ದು ‘ಹಮ್ ದಿಲ್ ದೆ ಚುಕೇ ಸನಮ್’ ಸಿನಿಮಾದಲ್ಲಿ. ಈ ಸಿನಿಮಾನ ನಿರ್ದೇಶನ ಮಾಡಿದ್ದು ಸಂಜಯ್ ಲೀಲಾ ಬನ್ಸಾಲಿ ಅವರು. ಈ ಚಿತ್ರ 1999ರಲ್ಲಿ ರಿಲೀಸ್ ಆಯಿತು. ಇವರ ಕೆಮಿಸ್ಟ್ರಿ ಕೆಲಸ ಮಾಡಿತು. ಆ ಬಳಿಕ 2002ರಲ್ಲಿ ರಿಲೀಸ್ ಆದ ‘ಹಮ್ ತುಮಾರೇ ಹೈ ಸನಮ್’ ಸಿನಿಮಾದಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡರು. ಆ ಬಳಿಕ ಇವರು ಅಣ್ಣ ತಂಗಿ ಪಾತ್ರ ಮಾಡಬೇಕಿತ್ತು.

ಇದನ್ನೂ ಓದಿ: Tiger 3 Collection: ಎರಡೇ ದಿನಕ್ಕೆ 102 ಕೋಟಿ ರೂ. ಗಳಿಸಿದ ‘ಟೈಗರ್​ 3’; ಸಲ್ಮಾನ್​ ಖಾನ್​ ದೀಪಾವಳಿ ಧಮಾಕಾ

‘ಜೋಶ್’ ಸಿನಿಮಾದಲ್ಲಿ ಐಶ್ವರ್ಯಾ ರೈ, ಶಾರುಖ್ ಖಾನ್, ಮಾಧುರಿ ದೀಕ್ಷಿತ್ ನಟಿಸಿದ್ದರು. ಐಶ್ವರ್ಯಾ ರೈ ಸಹೋದರನ ಪಾತ್ರದಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿದ್ದರು. ಈ ಆಫರ್ ಮೊದಲು ಸಲ್ಮಾನ್ ಖಾನ್​ಗೆ ಹೋಗಿತ್ತು. ಈ ಬಗ್ಗೆ ಐಶ್ವರ್ಯಾ ರೈ ಅವರು ಹೇಳಿಕೊಂಡಿದ್ದರು. ‘ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ‘ಜೋಶ್’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಬೇಕಿತ್ತು. ನಾನು ಸಲ್ಮಾನ್ ಖಾನ್ ಸಹೋದರಿ ಆಗಬೇಕಿತ್ತು. ಆದರೆ, ಸಲ್ಮಾನ್ ಖಾನ್ ಈ ಆಫರ್ ರಿಜೆಕ್ಟ್ ಮಾಡಿದ್ದರು. ಆ ಬಳಿಕ ಸಲ್ಮಾನ್ ಖಾನ್ ಜಾಗಕ್ಕೆ ಶಾರುಖ್ ಖಾನ್ ಬಂದಿದ್ದರು’ ಎಂದಿದ್ದರು ಅವರು. ‘ಜೋಶ್’ ಸಿನಿಮಾ 2000ನೇ ಇಸ್ವಿಯಲ್ಲಿ ರಿಲೀಸ್ ಆಯಿತು. ಇದನ್ನು ಮನ್ಸೂರ್ ಖಾನ್ ಅವರು ನಿರ್ದೇಶನ ಮಾಡಿದ್ದರು. ಇದು ಕಮರ್ಷಿಯಲ್ ಹಿಟ್ ಎನಿಸಿಕೊಂಡಿದೆ. ಈ ಚಿತ್ರದ ಹಾಡುಗಳು ಕೂಡ ಹಿಟ್ ಆಗಿದ್ದವು.

ಇದನ್ನೂ ಓದಿ: ಪಾರ್ಟಿಯಲ್ಲಿ ಐಶ್ವರ್ಯಾಗೆ ಹಗ್ ಮಾಡಿದ ಸಲ್ಮಾನ್ ಖಾನ್? ವೈರಲ್ ಆಗಿದೆ ವಿಡಿಯೋ

ಸಲ್ಮಾನ್ ಹಾಗೂ ಐಶ್ವರ್ಯಾ ಲವ್ ಸ್ಟೋರಿ:

1999ರ ಸಮಯದಲ್ಲಿ ಐಶ್ವರ್ಯಾ ಹಾಗೂ ಸಲ್ಮಾನ್ ಸಂಬಂಧ ಚರ್ಚೆಗೆ ಕಾರಣವಾಗಿತ್ತು. ‘ಹಮ್ ದಿಲ್ ದೇ ಚುಕೇ ಸನಮ್’ ಸೆಟ್‌ನಲ್ಲಿ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿತು ಎನ್ನಲಾಗಿದೆ. ಎರಡು ವರ್ಷಗಳ ಕಾಲ ಇವರು ಡೇಟಿಂಗ್ ಮಾಡಿದ್ದರು. ನಂತರ ಇವರ ರಿಲೇಶನ್​ಶಿಪ್ ಮುರಿದುಬಿತ್ತು. 2001ರಲ್ಲಿ ಇವರದ್ದು ಬ್ರೇಕಪ್ ಆಯಿತು. ಐಶ್ವರ್ಯಾ ರೈ ಮನೆಗೆ ಬಂದಿದ್ದ ಸಲ್ಮಾನ್ ಖಾನ್ ಅವರು, ಕಿಟಕಿ ಗಾಜನ್ನು ಒಡೆದು ಹಾಕಿದ್ದರು. ಸಲ್ಲು ವಿರುದ್ಧ ಕೇಸ್ ಕೂಡ ದಾಖಲಾಯಿತು. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಒಟ್ಟಾಗಿ ನಟಿಸಿದ್ದ ‘ಕುಚ್ ನಾ ಕಹೋ’ ಚಿತ್ರದ ಶೂಟಿಂಗ್ ವೇಳೆ ಐಶ್ವರ್ಯಾ ಅವರ ಕಾರನ್ನು ಸಲ್ಲು ಜಖಂಗೊಳಿಸಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ