AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aishwarya Rai: ಮದುವೆಯ ದಿನ 75 ಲಕ್ಷ ರೂಪಾಯಿ ಬೆಲೆಯ ಸೀರೆ ಧರಿಸಿದ್ದ ಐಶ್ವರ್ಯಾ ರೈ? ಇದರ ಅಸಲಿಯತ್ತು ಇಲ್ಲಿದೆ..

Aishwarya Rai Bachchan: ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯರ ಪಟ್ಟಿಯಲ್ಲಿ ಐಶ್ವರ್ಯಾ ರೈ ಬಚ್ಚನ್​ ಅವರ ಹೆಸರು ಕೂಡ ಇದೆ. ಪ್ರತಿ ಚಿತ್ರಕ್ಕೆ ಅವರು ಹತ್ತಾರು ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಆ ಶ್ರೀಮಂತಿಕೆಗೆ ತಕ್ಕಂತೆಯೇ ಅವರ ಲೈಫ್​ ಸ್ಟೈಲ್​ ಇದೆ. ಅದೇ ಕಾರಣಕ್ಕಾಗಿ ಅವರ ಮದುವೆ ಸೀರೆ ಬಗ್ಗೆ ಇಂಥ ಗಾಸಿಪ್​ ಹಬ್ಬಿದ್ದು.

Aishwarya Rai: ಮದುವೆಯ ದಿನ 75 ಲಕ್ಷ ರೂಪಾಯಿ ಬೆಲೆಯ ಸೀರೆ ಧರಿಸಿದ್ದ ಐಶ್ವರ್ಯಾ ರೈ? ಇದರ ಅಸಲಿಯತ್ತು ಇಲ್ಲಿದೆ..
ಐಶ್ವರ್ಯಾ ರೈ ಬಚ್ಚನ್​
ಮದನ್​ ಕುಮಾರ್​
|

Updated on: Nov 02, 2023 | 6:01 PM

Share

ಸೆಲೆಬ್ರಿಟಿಗಳ ಮದುವೆ ಸಖತ್​ ಅದ್ದೂರಿಯಾಗಿ ನಡೆಯುತ್ತದೆ. ಮದುವೆಯ ದಿನ ಅವರು ಧರಿಸಿದ ಬಟ್ಟೆ ಬಗ್ಗೆ ಸದಾ ಕಾಲ ಚರ್ಚೆ ಆಗುತ್ತಲೇ ಇರುತ್ತದೆ. ನಟಿ ಐಶ್ವರ್ಯಾ ರೈ (Aishwarya Rai) ಅವರ ಮದುವೆ ಸೀರೆ ಕೂಡ ಇಂದಿಗೂ ಹಾಟ್​ ಟಾಪಿಕ್​ ಆಗಿಯೇ ಉಳಿದುಕೊಂಡಿದೆ. ಬಾಲಿವುಡ್​ನ ಖ್ಯಾತ ನಟ ಅಭಿಷೇಕ್​ ಬಚ್ಚನ್​ (Abhishek Bachchan) ಜೊತೆ ಐಶ್ವರ್ಯಾ ರೈ ಅವರು ಹಸೆಮಣೆ ಏರಿದ್ದು 2007ರಲ್ಲಿ. ಅದಾಗಿ 16 ವರ್ಷ ಕಳೆದರೂ ಕೂಡ ಆ ಗ್ರ್ಯಾಂಡ್​ ವಿವಾಹದ ವಿವರಗಳ ಬಗ್ಗೆ ಗಾಸಿಪ್​ ಓಡಾಡುತ್ತಲೇ ಇವೆ. ಈಗಾಗಲೇ ವರದಿ ಆಗಿರುವಂತೆ, ಅಂದು ಐಶ್ವರ್ಯಾ ರೈ ಅವರು ಧರಿಸಿದ್ದ ಸೀರೆಯ (Aishwarya Rai Marriage Saree) ಬೆಲೆ ಬರೋಬ್ಬರಿ 75 ಲಕ್ಷ ರೂಪಾಯಿ! ಬಂಗಾರದ‌ ಎಳೆಗಳ ಕಸೂತಿಯಿಂದ ಈ ಸೀರೆ ಮಿರಿಮಿರಿ ಮಿಂಚುತ್ತಿತ್ತು ಅಂತ ಕೂಡ ಸುದ್ದಿ ಆಗಿತ್ತು. ಈ ಬಗ್ಗೆ ಅಧಿಕೃತವಾಗಿ ಅವರ ಕುಟುಂಬದವರು ಯಾರೂ ಮಾತನಾಡಿಲ್ಲ. ಹಾಗಿದ್ದರೂ ಕೂಡ ಆ ಗಾಸಿಪ್​ ಈಗಲೂ ಚಾಲ್ತಿಯಲ್ಲಿದೆ.

ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯರ ಪಟ್ಟಿಯಲ್ಲಿ ಐಶ್ವರ್ಯಾ ರೈ ಬಚ್ಚನ್​ ಅವರ ಹೆಸರು ಕೂಡ ಇದೆ. ಪ್ರತಿ ಚಿತ್ರಕ್ಕೆ ಅವರು ಹತ್ತಾರು ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಆ ಶ್ರೀಮಂತಿಕೆಗೆ ತಕ್ಕಂತೆಯೇ ಅವರ ಲೈಫ್​ ಸ್ಟೈಲ್​ ಇದೆ. ಹಲವು ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಒಂದು ಮೂಲದ ಪ್ರಕಾರ ಅವರ ಒಟ್ಟು ಆಸ್ತಿ ಮೌಲ್ಯ 770 ಕೋಟಿ ರೂಪಾಯಿಗೂ ಅಧಿಕ. ಈ ಪರಿ ಶ್ರೀಮಂತಿಕೆ ಇರುವ ಅವರು 75 ಲಕ್ಷ ರೂಪಾಯಿ ಬೆಲೆಯ ಸೀರೆ ಧರಿಸಿದ್ದರಲ್ಲಿ ಅಚ್ಚರಿ ಏನಿಲ್ಲ ಎಂದುಕೊಳ್ಳುತ್ತಾರೆ ಅಭಿಮಾನಿಗಳು. ಆದರೆ ಟ್ವಿಸ್ಟ್​ ಬೇರೆಯೇ ಇದೆ.

ಇದನ್ನೂ ಓದಿ: 50ನೇ ವಯಸ್ಸಿನಲ್ಲೂ ಹದಿಹರೆಯದ ಯುವತಿಯಂತೆ ಮಿಂಚುವ ಐಶ್ವರ್ಯಾ ರೈ

ಮದುವೆಯ ದಿನ ಐಶ್ವರ್ಯಾ ರೈ ಧರಿಸಿದ್ದ ಸೀರೆಯನ್ನು ನೀತಾ ಲುಲ್ಲ ವಿನ್ಯಾಸ ಮಾಡಿದ್ದರು. ಈ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಹಸೆಮಣೆ ಏರುವಾಗ ಐಶ್ವರ್ಯಾ ರೈ ಅವರು ಧರಿಸಿದ್ದು ಕಾಂಜಿವರಂ ಸೀರೆ. ಎಷ್ಟೇ ಅದ್ದೂರಿಯಾಗಿ ಇದ್ದರೂ ಕೂಡ ಆ ಸೀರೆಯ ಬೆಲೆ ಒಂದು ಕೋಟಿ ರೂಪಾಯಿ ಅಥವಾ 75 ಲಕ್ಷ ರೂಪಾಯಿ ಆಗಿರಲು ಸಾಧ್ಯವಿಲ್ಲ ಎಂದು ನೀತಾ ಲುಲ್ಲ ಹೇಳಿದ್ದರು. ಹಾಗಿದ್ದರೂ ಕೂಡ ಆ ಸೀರೆಯ ಬೆಲೆ ಎಷ್ಟು ಎಂಬುದನ್ನು ಅವರು ರಿವೀಲ್​ ಮಾಡಿಲ್ಲ.

ಇದನ್ನೂ ಓದಿ: ಭುಜದ ಎತ್ತರಕ್ಕೆ ಬೆಳೆದು ನಿಂತ ಪುತ್ರಿ ಆರಾಧ್ಯಾ ಮಾತು ಕೇಳಿ ಅಚ್ಚರಿಪಟ್ಟ ಐಶ್ವರ್ಯಾ ರೈ; ವಿಡಿಯೋ ವೈರಲ್​

ಐಶ್ವರ್ಯಾ ರೈ ಅವರು 1994ರಲ್ಲಿ ಮಿಸ್​ ಇಂಡಿಯಾ ಕಿರೀಟ ಗೆದ್ದರು. 1997ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಬಣ್ಣದ ಲೋಕದಲ್ಲಿ ಅವರಿಗೆ ಎರಡೂವರೆ ದಶಕಕ್ಕೂ ಹೆಚ್ಚು ಅನುಭವ ಇದೆ. ಈ ಪಯಣದಲ್ಲಿ ಅವರು ಸಾಕಷ್ಟು ಯಶಸ್ಸು ಕಂಡರು. ವರ್ಷದಿಂದ ವರ್ಷಕ್ಕೆ ಅವರ ಶ್ರೀಮಂತಿಕೆ ಕೂಡ ಹೆಚ್ಚುತ್ತಾ ಹೋಯಿತು. 21 ಕೋಟಿ ರೂ. ಬೆಲೆಬಾಳುವ ಬಂಗಲೆಯನ್ನು ಮುಂಬೈನಲ್ಲಿ ಅವರು ಹೊಂದಿದ್ದಾರೆ. 7 ಕೋಟಿ ರೂ. ಬೆಲೆಯ ರೋಲ್ಸ್ ರಾಯ್ಸ್ ಕಾರಿಗೂ ಅವರು ಒಡತಿ. ಜಾಗತಿಕ ಮಟ್ಟದ ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಅದರಿಂದಲೂ ಅವರಿಗೆ ಕೈ ತುಂಬ ಸಂಭಾವನೆ ಸಿಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು