AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭುಜದ ಎತ್ತರಕ್ಕೆ ಬೆಳೆದು ನಿಂತ ಪುತ್ರಿ ಆರಾಧ್ಯಾ ಮಾತು ಕೇಳಿ ಅಚ್ಚರಿಪಟ್ಟ ಐಶ್ವರ್ಯಾ ರೈ; ವಿಡಿಯೋ ವೈರಲ್​

Aaradhya Bachchan Viral Video: ಇಷ್ಟು ದಿನಗಳ ಕಾಲ ಆರಾಧ್ಯಾ ಬಚ್ಚನ್​ ಸಾರ್ವಜನಿಕವಾಗಿ ಮಾಧ್ಯಮಗಳ ಎದುರಿನಲ್ಲಿ ಮಾತನಾಡುತ್ತಿರಲಿಲ್ಲ. ‘ಮಗಳು ಹೀಗೆಲ್ಲ ಮಾತನಾಡುತ್ತಾಳೆ ಅಂತ ನಾನು ನಿರೀಕ್ಷೆಯೇ ಮಾಡಿರಲಿಲ್ಲ’ ಎಂದು ಐಶ್ವರ್ಯಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದ್ದು, ಜನರು ಕಮೆಂಟ್​ ಮಾಡುತ್ತಿದ್ದಾರೆ.

ಭುಜದ ಎತ್ತರಕ್ಕೆ ಬೆಳೆದು ನಿಂತ ಪುತ್ರಿ ಆರಾಧ್ಯಾ ಮಾತು ಕೇಳಿ ಅಚ್ಚರಿಪಟ್ಟ ಐಶ್ವರ್ಯಾ ರೈ; ವಿಡಿಯೋ ವೈರಲ್​
ಐಶ್ವರ್ಯಾ ರೈ ಬಚ್ಚನ್​, ಆರಾಧ್ಯ ಬಚ್ಚನ್​
ಮದನ್​ ಕುಮಾರ್​
|

Updated on: Nov 02, 2023 | 11:30 AM

Share

ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್​ (Aishwarya Rai Bachchan) ಅವರು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬವನ್ನು ನವೆಂಬರ್​ 1ರಂದು ಸೆಲೆಬ್ರೇಟ್​ ಮಾಡಲಾಗಿದೆ. ಕುಟುಂಬದವರು, ಆಪ್ತರು, ಅಭಿಮಾನಿಗಳು ಮಾಜಿ ವಿಶ್ವ ಸುಂದರಿಗೆ ಜನ್ಮದಿನದ (Aishwarya Rai Birthday) ಶುಭ ಹಾರೈಸಿದ್ದಾರೆ. ಈ ದಿನದ ಪ್ರಯುಕ್ತ ಅನೇಕ ಸಮಾಜಮುಖಿ ಕೆಲಸಗಳು ಕೂಡ ನಡೆದಿವೆ. ಆ ಪೈಕಿ ಕೆಲವು ಕಾರ್ಯಕ್ರಮಗಳಿಗೆ ಐಶ್ವರ್ಯಾ ರೈ ಅವರ ಮಗಳು ಆರಾಧ್ಯಾ (Aaradhya Bachchan) ಕೂಡ ಹಾಜರಿ ಹಾಕಿದ್ದಾರೆ. ಅಚ್ಚರಿ ಏನೆಂದರೆ, ಇದೇ ಮೊದಲ ಬಾರಿಗೆ ಆರಾಧ್ಯಾ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಅದು ಸ್ವತಃ ಐಶ್ವರ್ಯಾ ರೈಗೆ ಅಚ್ಚರಿ ಮೂಡಿಸಿದೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಇಷ್ಟು ದಿನಗಳ ಕಾಲ ಆರಾಧ್ಯಾ ಬಚ್ಚನ್​ ಸಾರ್ವಜನಿಕವಾಗಿ ಮಾಧ್ಯಮಗಳ ಎದುರಿನಲ್ಲಿ ಮಾತನಾಡುತ್ತಿರಲಿಲ್ಲ. ಆದರೆ ಈಗ ಅವರಿಗೆ ಆತ್ಮವಿಶ್ವಾಸ ಬಂದಿದೆ. ಅಮ್ಮನ ಮಾರ್ಗದರ್ಶನದಲ್ಲಿ ಅವರು ಮಾತನಾಡುವುದನ್ನು ಕಲಿತಿದ್ದಾರೆ. ಅದಕ್ಕೆ ಸಾಕ್ಷಿ ಒದಗಿಸುತ್ತಿದೆ ಈ ವಿಡಿಯೋ. ಮಗಳ ಮಾತುಗಳನ್ನು ಕೇಳಿ ಐಶ್ವರ್ಯಾ ರೈಗೆ ಖುಷಿ ಆಗಿದೆ. ಅಮ್ಮನಿಂದ ಹೊಗಳಿಗೆ ಸಿಕ್ಕಿದ್ದಕ್ಕೆ ಆರಾಧ್ಯಾ ಹಿರಿಹಿರಿ ಹಿಗ್ಗಿದ್ದಾರೆ.

‘ನನ್ನ ಜೀವನ, ನನ್ನ ಡಾರ್ಲಿಂಗ್​, ನನ್ನ ಅಮ್ಮ ತುಂಬ ಅದ್ಭುತವಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಇದರಿಂದ ಬಹಳ ಒಳ್ಳೆಯದು ಆಗುತ್ತಿದೆ. ಜಗತ್ತಿನಲ್ಲಿ ಅನೇಕರಿಗೆ ಇದರಿಂದ ಸಹಾಯ ಆಗುತ್ತಿದೆ. ಅವರು ಮಾಡುತ್ತಿರುವ ಕೆಲಸ ನಿಜಕ್ಕೂ ಅತ್ಯುತ್ತಮವಾಗಿದೆ ಅಂತ ಹೇಳಲು ಬಯಸುತ್ತೇನೆ’ ಎಂದು ಆರಾಧ್ಯಾ ಹೇಳಿದ್ದಾರೆ. ‘ಮಗಳು ಹೀಗೆಲ್ಲ ಮಾತನಾಡುತ್ತಾಳೆ ಅಂತ ನಾನು ನಿರೀಕ್ಷೆಯೇ ಮಾಡಿರಲಿಲ್ಲ’ ಎಂದು ಐಶ್ವರ್ಯಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಮ್ಮನ ಹೊಗಳಿಕೆಯ ಮಾತಿಗೆ ಆರಾಧ್ಯಾ ಫಿದಾ ಆಗಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರೈ ಮೇಲೆ ಸಲ್ಮಾನ್ ಖಾನ್​ಗೆ ಇತ್ತು ಅನುಮಾನ; ಸಂಬಂಧ ಮುರಿದು ಬೀಳಲು ಇದೇ ಕಾರಣ

ಸಿನಿಮಾ ವಿಚಾರಕ್ಕೆ ಬರುವುದಾದರೆ ಐಶ್ವರ್ಯಾ ರೈ ಅವರ ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳ ಆಯ್ಕೆಯಲ್ಲಿ ಸಖತ್​ ಚ್ಯೂಸಿ ಆಗಿದ್ದಾರೆ. ತಮಗೆ ಸರಿ ಎನಿಸಿದ ಪ್ರಾಜೆಕ್ಟ್​ಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ಅವರಿಗೆ ಈಗಲೂ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇದೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಅವುಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಅವರಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಸಿಗುತ್ತದೆ. ಅವರ ಒಟ್ಟು ಆಸ್ತಿ ಮೌಲ್ಯ 750 ಕೋಟಿ ರೂಪಾಯಿಗೂ ಆಧಿಕ. ಐಶ್ವರ್ಯಾ ರೈ ಪತಿ ಅಭಿಷೇಕ್​ ಬಚ್ಚನ್​, ಮಾವ ಅಮಿತಾಭ್​ ಬಚ್ಚನ್ ಮತ್ತು ಅತ್ತೆ ​ಜಯಾ ಬಚ್ಚನ್​ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಪುತ್ರಿ ಆರಾಧ್ಯಾ ಯಾವಾಗ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಾರೆ ಎಂಬ ಕೌತುಕ ಎಲ್ಲರಲ್ಲೂ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ