ಅಭಿಷೇಕ್ ಬಚ್ಚನ್​ಗೆ ಪತ್ನಿ ಐಶ್ವರ್ಯಾ ರೈ ಮೇಲೆ ಕಡಿಮೆ ಆಗಿದೆ ಪ್ರೀತಿ? ಸಾಕ್ಷಿ ಹುಡುಕಿದ ಫ್ಯಾನ್ಸ್

ಈ ಸೆಲೆಬ್ರಿಟಿ ಜೋಡಿಯ ದಾಂಪತ್ಯ ಜೀವನ ಆರಂಭ ಆಗಿ 16 ವರ್ಷಗಳ ಮೇಲಾಗಿದೆ. ಇವರ ದಾಂಪತ್ಯದ ಬಗ್ಗೆ ಅಭಿಮಾನಿಗಳಿಗೆ ಅನುಮಾನ ಮೂಡುವಂತೆ ಆಗಿದೆ.

ಅಭಿಷೇಕ್ ಬಚ್ಚನ್​ಗೆ ಪತ್ನಿ ಐಶ್ವರ್ಯಾ ರೈ ಮೇಲೆ ಕಡಿಮೆ ಆಗಿದೆ ಪ್ರೀತಿ? ಸಾಕ್ಷಿ ಹುಡುಕಿದ ಫ್ಯಾನ್ಸ್
ಅಭಿಷೇಕ್-ಐಶ್ವರ್ಯಾ
Follow us
ರಾಜೇಶ್ ದುಗ್ಗುಮನೆ
|

Updated on: Nov 02, 2023 | 11:20 AM

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಮದುವೆ ಆಗಿ ಹಲವು ವರ್ಷ ಕಳೆದಿದೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಆದರೆ, ಅಭಿಷೇಕ್ ಬಚ್ಚನ್​ಗೆ ಪತ್ನಿಯ ಮೇಲೆ ಮೊದಲಿನಷ್ಟು ಪ್ರೀತಿ ಉಳಿದುಕೊಂಡಿಲ್ಲ ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ. ಇದಕ್ಕೆ ಅಭಿಷೇಕ್ ಬಚ್ಚನ್ ಮಾಡಿರೋ ಹೊಸ ಪೋಸ್ಟ್ ಒಳ್ಳೆಯ ಉದಾಹರಣೆ. ನವೆಂಬರ್ 1ರಂದು ಐಶ್ವರ್ಯಾ ರೈ ಬಚ್ಚನ್ ಅವರು ಬರ್ತ್​ಡೇ ಆಚರಿಸಿಕೊಂಡರು. ಈ ವೇಳೆ ಅಭಿಷೇಕ್ ಮಾಡಿರೋ ಪೋಸ್ಟ್​ ಅನೇಕರ ಅಚ್ಚರಿಗೆ ಕಾರಣ ಆಗಿದೆ.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಅವರು ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ‘ಗುರು’ ಸಿನಿಮಾದಲ್ಲಿ ಇವರ ಕೆಮಿಸ್ಟ್ರಿ ನೋಡಿ ಜನರು ಇಷ್ಟಪಟ್ಟರು. ಇವರು 2007ರಲ್ಲಿ ಮದುವೆ ಆದರು. ಈ ಸೆಲೆಬ್ರಿಟಿ ಜೋಡಿಯ ದಾಂಪತ್ಯ ಜೀವನ ಆರಂಭ ಆಗಿ 16 ವರ್ಷಗಳ ಮೇಲಾಗಿದೆ. ಇವರ ದಾಂಪತ್ಯದ ಬಗ್ಗೆ ಅಭಿಮಾನಿಗಳಿಗೆ ಅನುಮಾನ ಮೂಡುವಂತೆ ಆಗಿದೆ.

ಬರ್ತ್​ಡೇ ದಿನ ಐಶ್ವರ್ಯಾ ರೈ ಅವರ ಒಂದು ಫೋಟೋನ ಪೋಸ್ಟ್ ಮಾಡಿದ್ದಾರೆ ಅಭಿಷೇಕ್. ಆ ಫೋಟೋ ಗೂಗಲ್​ನಲ್ಲಿ ಹುಡುಕಿ ತೆಗೆದಂತಿದೆ. ಈ ಫೋಟೋಗೆ ‘ಹುಟ್ಟುಹಬ್ಬದ ಶುಭಾಶಯ’ ಎಂದಷ್ಟೇ ಬರೆದುಕೊಂಡಿದ್ದಾರೆ. ಕೆಲ ವಾರಗಳ ಹಿಂದೆ ಅಮಿತಾಭ್ ಹುಟ್ಟುಹಬ್ಬ ಇತ್ತು. ಆಗ ಅಭಿಷೇಕ್ ಅವರು ತಂದೆಯ ಜೊತೆ ಇರುವ ಫೋಟೋ ಹಾಕಿ ಉದ್ದನೆಯ ಕ್ಯಾಪ್ಶನ್ ಬರೆದಿದ್ದರು. ಎರಡೂ ಪೋಸ್ಟ್​ಗಳನ್ನು ಹೋಲಿಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಐಶ್ವರ್ಯಾ ರೈ ಮೇಲೆ ಸಲ್ಮಾನ್ ಖಾನ್​ಗೆ ಇತ್ತು ಅನುಮಾನ; ಸಂಬಂಧ ಮುರಿದು ಬೀಳಲು ಇದೇ ಕಾರಣ

‘ಕಾಟಾಚಾರಕ್ಕೆ ಈ ಫೋಟೋ ಪೋಸ್ಟ್ ಮಾಡಿದಂತಿದೆ’ ಎಂದು ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದಾನೆ. ‘ನಿಮ್ಮ ತಂದೆಗೆ ಒಂದು ಆರ್ಟಿಕಲ್ ಸೈಜ್​ನ ವಿಶ್ ಬರೆದಿದ್ದಿರಿ. ನಿಮ್ಮ ಪತ್ನಿಗೆ ಹ್ಯಾಪಿ ಬರ್ತ್​ಡೇ ಅನ್ನೋ ಸಾಲುಗಳನ್ನಷ್ಟೇ ಬರೆದಿದ್ದೀರಿ’ ಎಂದು ಕೆಲವರು ಕೊಂಕು ತೆಗೆದಿದ್ದಾರೆ. ಸದ್ಯ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅಭಿಷೇಕ್ ಬಚ್ಚನ್​ಗೆ ಪತ್ನಿಯ ಮೇಲೆ ಮೊದಲಿನಷ್ಟು ಪ್ರೀತಿ ಇಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ