ಶಾರುಖ್ ಖಾನ್ ಜನ್ಮದಿನ: 6,300 ಕೋಟಿ ರೂಪಾಯಿ ಒಡೆಯನಿಗೆ ಹಣ ಹೇಗೆಲ್ಲ ಬರುತ್ತೆ ಗೊತ್ತಾ?

ಶಾರುಖ್ ಖಾನ್ ಅವರ ಆಸ್ತಿ 6300 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಭಾರತದ ಶ್ರೀಮಂತ​ ಹೀರೋಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರಿಗೆ ವರ್ಷಕ್ಕೆ 280 ಕೋಟಿ ರೂಪಾಯಿಗೂ ಅಧಿಕ ವೇತನ ಬರುತ್ತದೆ. ಸಿನಿಮಾ, ಬ್ರ್ಯಾಂಡ್ ಪ್ರಚಾರ ಹಾಗೂ ಹಲವು ಬಿಸ್ನೆಸ್ ವೆಂಚರ್​ಗಳಿಂದ ಅವರಿಗೆ ಹಣ ಹರಿದು ಬರುತ್ತಿದೆ. 

ಶಾರುಖ್ ಖಾನ್ ಜನ್ಮದಿನ: 6,300 ಕೋಟಿ ರೂಪಾಯಿ ಒಡೆಯನಿಗೆ ಹಣ ಹೇಗೆಲ್ಲ ಬರುತ್ತೆ ಗೊತ್ತಾ?
ಶಾರುಖ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 02, 2023 | 10:44 AM

ಶಾರುಖ್ ಖಾನ್ (Shah Rukh Khan) ಅವರಿಗೆ ಇಂದು (ನವೆಂಬರ್ 2) ಜನ್ಮದಿನದ ಸಂಭ್ರಮ. ಅವರಿಗೆ ಎಸ್​ಆರ್​ಕೆ, ಕಿಂಗ್ ಖಾನ್, ಕಿಂಗ್ ಆಫ್ ಬಾಲಿವುಡ್​ ಸೇರಿ ಹಲವು ಬಿರುದುಗಳು ಇವೆ. ಅವರು ಟ್ಯಾಲೆಂಟ್ ಏನು ಎಂಬುದನ್ನು ತೋರಿಸಿ ಬೆಳೆದವರು. ಅವರು ಇಂದು ಭಾರತ ಚಿತ್ರರಂಗದ ಹೆಮ್ಮೆಯಾಗಿದ್ದಾರೆ. ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಅವರು ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಶಾರುಖ್ ನೀಡಿದ್ದಾರೆ.

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ಶಾರುಖ್ ಖಾನ್. 1988ರಲ್ಲಿ ಪ್ರಸಾರಕಂಡ ‘ಫೌಜಿ’ ಧಾರಾವಾಹಿಯಲ್ಲಿ ಮೊದಲು ನಟಿಸಿದರು. 1992ರಲ್ಲಿ ರಿಲೀಸ್ ಆದ ‘ದೀವಾನ’ ಸಿನಿಮಾ ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟರು. ‘ಬಾಜಿಘರ್’, ‘ಡರ್’, ‘ಡಿಡಿಎಲ್​ಜೆ’, ‘ಕುಚ್ ಕುಚ್​ ಹೋತಾ ಹೈ’, ‘ಡಾನ್’, ‘ಡಾನ್ 2’, ‘ಚೆನ್ನೈ ಎಕ್ಸ್​ಪ್ರೆಸ್’, ‘ಪಠಾಣ್​’, ಜವಾನ್’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳು ಅವರ ಕಡೆಯಿಂದ ಬಂದಿವೆ. ಶಾರುಖ್ ಖಾನ್​ಗೆ ಸಿನಿಮಾ ಮಾತ್ರವಲ್ಲದೆ ಹಲವು ಕಡೆಯಿಂದ ಹಣ ಬರುತ್ತದೆ.

ಶಾರುಖ್ ಖಾನ್ ಅವರ ಆಸ್ತಿ 6300 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಭಾರತದ ಶ್ರೀಮಂತ​ ಹೀರೋಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರಿಗೆ ವರ್ಷಕ್ಕೆ 280 ಕೋಟಿ ರೂಪಾಯಿಗೂ ಅಧಿಕ ವೇತನ ಬರುತ್ತದೆ. ಸಿನಿಮಾ, ಬ್ರ್ಯಾಂಡ್ ಪ್ರಚಾರ ಹಾಗೂ ಹಲವು ಬಿಸ್ನೆಸ್ ವೆಂಚರ್​ಗಳಿಂದ ಅವರಿಗೆ ಹಣ ಹರಿದು ಬರುತ್ತಿದೆ.

ಪ್ರತಿ ಚಿತ್ರದ ಸಂಭಾವನೆ?

ಪ್ರತಿ ಚಿತ್ರಕ್ಕೆ ಶಾರುಖ್ ಖಾನ್ ಅವರು 100-150 ಕೋಟಿ ರೂಪಾಯಿ ಪಡೆಯುತ್ತಾರೆ. ಇಷ್ಟೇ ಅಲ್ಲ ಕೆಲವು ಸಿನಿಮಾಗಳಲ್ಲಿ ಬರುವ ಲಾಭದಲ್ಲಿ ಅವರಿಗೂ ಪಾಲಿದೆ. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಶಾರುಖ್ ಕೂಡ ಒಬ್ಬರು. ಅವರ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡುತ್ತದೆ ಎನ್ನುವ ಕಾರಣಕ್ಕೆ ಅವರು ಕೇಳಿದಷ್ಟು ಹಣ ನೀಡಲು ನಿರ್ಮಾಪಕರು ರೆಡಿ ಇರುತ್ತಾರೆ.

ಬ್ರ್ಯಾಂಡ್ ಪ್ರಚಾರ

ಶಾರುಖ್ ಖಾನ್ ಅವರು ಹಲವು ಕಂಪನಿಗಳ ಪ್ರಚಾರ ರಾಯಭಾರಿ ಆಗಿದ್ದಾರೆ. ಅವರು ಪ್ರತಿ ಬ್ರ್ಯಾಂಡ್​ ಪ್ರಚಾರಕ್ಕೆ ಹತ್ತು ಕೋಟಿ ರೂಪಾಯಿ ಪಡೆಯುತ್ತಾರೆ.

ರೆಡ್ ಚಿಲ್ಲೀಸ್

ಶಾರುಖ್ ಖಾನ್ ಅವರು ರೆಡ್​ ಚಿಲ್ಲೀಸ್​ ಎಂಟರ್​ಟೇನ್​ಮೆಂಟ್ ಕಂಪನಿ ಹೊಂದಿದ್ದಾರೆ. ಈ ನಿರ್ಮಾಣ ಸಂಸ್ಥೆಗಳ ಮೂಲಕ ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದರಿಂದ ಶಾರುಖ್ ಖಾನ್​ಗೆ ಪ್ರತಿ ವರ್ಷ 500 ಕೋಟಿ ರೂಪಾಯಿಗೂ ಅಧಿಕ ಲಾಭ ಆಗುತ್ತದೆ.

ಐಪಿಎಲ್ ಟೀಮ್

ಶಾರುಖ್ ಖಾನ್ ಅವರು ಐಪಿಎಲ್​ ತಂಡ ‘ಕೋಲ್ಕತ್ತ ನೈಟ್ ರೈಡರ್ಸ್​​’ನ ಒಡೆತನ ಹೊಂದಿದ್ದಾರೆ. ಈ ತಂಡದ ಮೌಲ್ಯ 9,017 ಕೋಟಿ ರೂಪಾಯಿಗೂ ಅಧಿಕವಾಗಿದೆ.

ಶಾರುಖ್ ಖಾನ್ ಕಾರ್ ಕಲೆಕ್ಷನ್

ಶಾರುಖ್ ಖಾನ್ ಅವರು ಅವರು ಲಕ್ಷುರಿ ಕಾರ್ ಕಲೆಕ್ಷನ್ ಹೊಂದಿದ್ದಾರೆ. ಹಲವು ಬೆಲೆ ಬಾಳುವ ಕಾರು ಅವರ ಬಳಿ ಇವೆ. ಅವರ ಕಾರಿನ ಕಲೆಕ್ಷನ್ ಬೆಲೆ 31 ಕೋಟಿ ರೂಪಾಯಿಗೂ ಅಧಿಕವಾಗಿದೆ. ಬುಗಾಟಿ, ಬೆಂಟ್ಲಿ, ರೋಲ್ಸ್ ರಾಯ್ಸ್ ಸೇರಿದಂತೆ ಅನೇಕ ಬ್ರ್ಯಾಂಡೆಡ್ ಕಾರುಗಳು ಇವರ ಬಳಿ ಇವೆ. ಶಾರುಖ್ ಖಾನ್ ಅವರ ಬಳಿ ಅಭಿಮಾನಿಗಳು ಟ್ವಿಟರ್​ನಲ್ಲಿ ಪ್ರಶ್ನೆ ಒಂದನ್ನು ಕೇಳಿದ್ದರು. ‘ನಿಮ್ಮ ಬಳಿ ಇರುವ ಕೂಲ್ ಕಾರು ಯಾವುದು ಎಂದು’ ಕೇಳಿದ್ದಾರೆ. ‘ನನ್ನ ಬಳಿ ಹುಂಡೈ ಬಿಟ್ಟು ಬೇರೆ ಯಾವುದೇ ಕಾರು ಇಲ್ಲ’ ಎಂದಿದ್ದರು.

ವ್ಯಾನಿಟಿ ವ್ಯಾನ್

ಶಾರುಖ್ ಖಾನ್ ಬಳಿ ಲಕ್ಷುರಿ ವ್ಯಾನಿಟಿ ವ್ಯಾನ್ ಇದೆ. ಇದರ ಬೆಲೆ 4 ಕೋಟಿ ರೂಪಾಯಿಗೂ ಅಧಿಕವಾಗಿದೆ. ಶೂಟಿಂಗ್ ಸ್ಥಳದಲ್ಲಿ ಅವರು ಇದನ್ನು ಬಳಕೆ ಮಾಡುತ್ತಾರೆ. ಇದರಲ್ಲಿ ಮಲಗೋಕೆ ಜಾಗ, ಕಿಚನ್, ವಾಶ್​ರೂಂ ಇತ್ಯಾದಿ ಸೌಕರ್ಯ ಇದೆ.

ಇದನ್ನೂ ಓದಿ: ಸಖತ್ ಅದ್ದೂರಿಯಾಗಿರಲಿದೆ ಶಾರುಖ್ ಖಾನ್ ಬರ್ತ್​ಡೇ ಪಾರ್ಟಿ; ಯಾರಿಗೆಲ್ಲ ಆಹ್ವಾನ?

ಶಾರುಖ್ ಖಾನ್ ಸದ್ಯದ ಸಿನಿಮಾ

ಶಾರುಖ್ ಖಾನ್ ಅವರು ‘ಟೈಗರ್ 3’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಇದಲ್ಲದೆ. ‘ಡಂಕಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ರಾಜ್​ಕುಮಾರ್ ಹಿರಾನಿ ನಿರ್ದೇಶನ ಇದೆ.

ಭರ್ಜರಿ ಪಾರ್ಟಿ

ಶಾರುಖ್ ಖಾನ್ ಅವರ ನಟನೆಯ ‘ಪಠಾಣ್’ ಹಾಗೂ ‘ಜವಾನ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಕಾರಣಕ್ಕೆ ಶಾರುಖ್ ಖಾನ್ ಅವರು ಇಂದು ಭರ್ಜರಿ ಪಾರ್ಟಿ ಆಯೋಜನೆ ಮಾಡಿದ್ದಾರೆ. ಮುಂಬೈನಲ್ಲಿ ಈ ಪಾರ್ಟಿ ನಡೆಯಲಿದ್ದು, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ ಸೇರಿ ಅನೇಕರು ಇದರಲ್ಲಿ ಭಾಗಿ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:37 am, Thu, 2 November 23

ಒಂದು ದೇಶ ಒಂದು ಚುನಾವಣೆ ಬಗ್ಗೆ ಬಹಳಷ್ಟು ಚರ್ಚೆ ಆಗಬೇಕಿದೆ: ಪರಮೇಶ್ವರ್
ಒಂದು ದೇಶ ಒಂದು ಚುನಾವಣೆ ಬಗ್ಗೆ ಬಹಳಷ್ಟು ಚರ್ಚೆ ಆಗಬೇಕಿದೆ: ಪರಮೇಶ್ವರ್
ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ
ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ
ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್
ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್
ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ
ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ
Live: ಬೆಳಗಾವಿ ಅಧಿವೇಶನದ ಐದನೇ ದಿನದ ಕಲಾಪ ನೇರ ಪ್ರಸಾರ
Live: ಬೆಳಗಾವಿ ಅಧಿವೇಶನದ ಐದನೇ ದಿನದ ಕಲಾಪ ನೇರ ಪ್ರಸಾರ
ಅಂಜನಾದ್ರಿ ಬೆಟ್ಟದಲ್ಲಿ ನೆರೆದಿದ್ದಾರೆ ಮಾಲೆ ಧರಿಸಿರುವ ಸಾವಿರಾರು ಭಕ್ತರು
ಅಂಜನಾದ್ರಿ ಬೆಟ್ಟದಲ್ಲಿ ನೆರೆದಿದ್ದಾರೆ ಮಾಲೆ ಧರಿಸಿರುವ ಸಾವಿರಾರು ಭಕ್ತರು
ಮೈಸೂರು ಜಯಲಕ್ಷ್ಮಿ ವಿಲಾಸ ಅರಮನೆ ಕಾಯಕಲ್ಪಕ್ಕೆ ಅಮೆರಿಕ ನೆರವು
ಮೈಸೂರು ಜಯಲಕ್ಷ್ಮಿ ವಿಲಾಸ ಅರಮನೆ ಕಾಯಕಲ್ಪಕ್ಕೆ ಅಮೆರಿಕ ನೆರವು
ಹೇಗಿದೆ ನೋಡಿ ನಟಿ ಶ್ರುತಿ ಹೊಸ ಮನೆ; ಪ್ರಶಸ್ತಿ ಇಡಲು ಪ್ರತ್ಯೇಕ ಶೋಕೇಸ್
ಹೇಗಿದೆ ನೋಡಿ ನಟಿ ಶ್ರುತಿ ಹೊಸ ಮನೆ; ಪ್ರಶಸ್ತಿ ಇಡಲು ಪ್ರತ್ಯೇಕ ಶೋಕೇಸ್
ಧನರಾಜ್ ಮೇಲೆ ಕೈ ಮಾಡಿ ಹೊರ ಹೋದ್ರಾ ರಜತ್?
ಧನರಾಜ್ ಮೇಲೆ ಕೈ ಮಾಡಿ ಹೊರ ಹೋದ್ರಾ ರಜತ್?
ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ