ಪಾರ್ಟಿಯಲ್ಲಿ ಐಶ್ವರ್ಯಾಗೆ ಹಗ್ ಮಾಡಿದ ಸಲ್ಮಾನ್ ಖಾನ್? ವೈರಲ್ ಆಗಿದೆ ವಿಡಿಯೋ

ಇತ್ತೀಚೆಗೆ ಬಾಲಿವುಡ್​ನ ಫ್ಯಾಷನ್ ಡಿಸೈನರ್ ಮನಿಷ್​ ಮಲ್ಹೋತ್ರಾ ಅವರು ದೀಪಾವಳಿ ಪಾರ್ಟಿ ಆಯೋಜನೆ ಮಾಡಿದ್ದರು. ಪಾಪರಾಜಿಗಳನ್ನು ಅವರು ದೂರವೇ ಇಟ್ಟಿದ್ದರು. ಆದಾಗ್ಯೂ ಕೆಲವು ವಿಡಿಯೋಗಳು ವೈರಲ್ ಆಗಿವೆ.

ಪಾರ್ಟಿಯಲ್ಲಿ ಐಶ್ವರ್ಯಾಗೆ ಹಗ್ ಮಾಡಿದ ಸಲ್ಮಾನ್ ಖಾನ್? ವೈರಲ್ ಆಗಿದೆ ವಿಡಿಯೋ
ಸಲ್ಮಾನ್-ಐಶ್ವರ್ಯಾ
Follow us
ರಾಜೇಶ್ ದುಗ್ಗುಮನೆ
|

Updated on:Nov 08, 2023 | 10:53 AM

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ (Aishwarya Rai) ಎರಡು ದಶಕಗಳ ಹಿಂದೆ ಡೇಟಿಂಗ್ ನಡೆಸುತ್ತಿದ್ದರು. ಸಲ್ಮಾನ್ ಖಾನ್ ನಡೆ ಐಶ್ವರ್ಯಾಗೆ ಇಷ್ಟ ಆಗಲಿಲ್ಲ. ಆ ಬಳಿಕ ಇವರ ಸಂಬಂಧ ಮುರಿದು ಬಿತ್ತು. ಈ ಬಗ್ಗೆ ಆರಂಭದಲ್ಲಿ ಐಶ್ವರ್ಯಾ ಮಾತನಾಡಿದ್ದರು. ಆ ಬಳಿಕ ಅವರು ಈ ವಿಚಾರದಲ್ಲಿ ಮೌನ ವಹಿಸಿದರು. ಐಶ್ವರ್ಯಾ ಹಾಗೂ ಸಲ್ಮಾನ್ ಖಾನ್ ಇದನ್ನು ಮರೆತಿರಬಹುದು. ಆದರೆ, ಇದು ಅಭಿಮಾನಿಗಳಿಗೆ ಮರೆತು ಹೋಗುವ ವಿಚಾರ ಅಲ್ಲವೇ ಅಲ್ಲ. ಒಂದಲ್ಲ ಒಂದು ಕಾರಣಕ್ಕೆ ಸಲ್ಮಾನ್ ಹಾಗೂ ಐಶ್ವರ್ಯಾ ಅವರನ್ನು ಎಳೆದು ತರಲಾಗುತ್ತದೆ. ಈಗ ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಹಗ್ ಮಾಡಿಕೊಂಡಿದ್ದಾರೆ ಎಂದು ಫೋಟೋ ಒಂದನ್ನು ಹರಿಬಿಡಲಾಗಿದೆ.

ಇತ್ತೀಚೆಗೆ ಬಾಲಿವುಡ್​ನ ಫ್ಯಾಷನ್ ಡಿಸೈನರ್ ಮನಿಷ್​ ಮಲ್ಹೋತ್ರಾ ಅವರು ದೀಪಾವಳಿ ಪಾರ್ಟಿ ಆಯೋಜನೆ ಮಾಡಿದ್ದರು. ಪಾಪರಾಜಿಗಳನ್ನು ಅವರು ದೂರವೇ ಇಟ್ಟಿದ್ದರು. ಆದಾಗ್ಯೂ ಕೆಲವು ವಿಡಿಯೋಗಳು ವೈರಲ್ ಆಗಿವೆ. ವೈರಲ್ ಆಗಿರೋ ವಿಡಿಯೋದಲ್ಲಿ ಸಲ್ಮಾನ್ ಖಾನ್ ಅವರು ಕೆಂಪು ಬಣ್ಣದ ಬಟ್ಟೆ ಧರಿಸಿ ಮಹಿಳೆಯನ್ನು ಹಗ್ ಮಾಡೋದು ಕಂಡಿದೆ.

ಈ ಪಾರ್ಟಿಗೆ ಐಶ್ವರ್ಯಾ ರೈ ಅವರು ಕೆಂಪು ಬಣ್ಣದ ಉಡುಗೆಯಲ್ಲೇ ಹಾಜರಿ ಹಾಕಿದ್ದರು. ಸಲ್ಮಾನ್ ಖಾನ್ ಹಗ್ ಮಾಡಿದ್ದು ಐಶ್ವರ್ಯಾ ರೈ ಅವರನ್ನೇ ಎಂದು ಎಲ್ಲರೂ ಭಾವಿಸಿದರು. ಆದರೆ, ಇದು ಸೂರಜ್ ಪಾಂಚೋಲಿ ಅವರ ಸಹೋದರಿ ಸಾರಾ ಪಾಂಚೋಲಿ ಅನ್ನೋದು ಬಳಿಕ ಗೊತ್ತಾಗಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ ಜತೆ ಕ್ಲ್ಯಾಶ್​ ಮಾಡಿಕೊಳ್ಳಲು ಯಾರೂ ಸಿದ್ಧರಿಲ್ಲ; ‘ಟೈಗರ್​ 3’ ಚಿತ್ರದ ಹವಾ ಇದು

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಅವರು 2000ನೇ ಇಸ್ವಿಯ ಆರಂಭದಲ್ಲಿ ಡೇಟ್ ಮಾಡುತ್ತಿದ್ದರು. ನಂತರ ಇಬ್ಬರೂ ಬೇರೆ ಆದರು. ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಹಲವು ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಆದರೆ, ಒಬ್ಬರಿಗೊಬ್ಬರು ಇವರು ಮಾತುಕತೆ ನಡೆಸಿಲ್ಲ. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮದುವೆ ಆಗಿ ಹಲವು ವರ್ಷ ಕಳೆದಿದೆ. ಇವರಿಗೆ ಆರಾಧ್ಯಾ ಹೆಸರಿನ ಮಗಳಿದ್ದಾಳೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:43 am, Wed, 8 November 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ