ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ಮದುವೆಯ ಸೀರೆಯುಟ್ಟು ಬಂದ ಆಲಿಯಾ ಭಟ್​; ಫ್ಯಾನ್ಸ್ ಏನಂದ್ರು?

ಅವಾರ್ಡ್ ಫಂಕ್ಷನ್ ಎಂದಾಗ ಸೆಲೆಬ್ರಿಟಿಗಳು ಹೊಸ ಬಟ್ಟೆ ಖರೀದಿಸಲು ಆದ್ಯತೆ ನೀಡುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಸುರಿಯುತ್ತಾರೆ. ಕೆಲವೊಮ್ಮೆ ಚಿತ್ರ ವಿಚಿತ್ರ ಬಟ್ಟೆ ಧರಿಸಿ ಸುದ್ದಿ ಆಗಿದ್ದೂ ಇದೆ. ಆದರೆ, ಬಾಲಿವುಡ್​ ಬೆಡಗಿ ಆಲಿಯಾ ಭಟ್​ ಅವರು ಮದುವೆ ದಿನ ಧರಿಸಿದ್ದ ಸೀರೆಯನ್ನೇ ಮತ್ತೆ ಧರಿಸಿ ಬಂದಿದ್ದಾರೆ.

ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ಮದುವೆಯ ಸೀರೆಯುಟ್ಟು ಬಂದ ಆಲಿಯಾ ಭಟ್​; ಫ್ಯಾನ್ಸ್ ಏನಂದ್ರು?
ಆಲಿಯಾ ಭಟ್​
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Oct 19, 2023 | 5:10 PM

ನಟಿ ಆಲಿಯಾ ಭಟ್ (Alia Bhatt) ಅವರು ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ನಟನೆಗೆ ಅವರಿಗೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಅವರು ನ್ಯಾಷನಲ್​ ಫಿಲ್ಮ್​ ಅವಾರ್ಡ್​ (National Film Award) ಸ್ವೀಕರಿಸುವಾಗ ಧರಿಸಿದ್ದ ಸೀರೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ಹಾಗಂತ ಸೀರೆಯ ಬೆಲೆಯ ವಿಚಾರಕ್ಕೋ ಅಥವಾ ಆ ಸೀರೆಯ ಲುಕ್ ಬೇರೆಯ ರೀತಿ ಇದೆ ಎಂಬ ಕಾರಣಕ್ಕೋ ಅವರ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಮದುವೆ ದಿನ ಯಾವ ಸೀರೆ (Alia Bhatt Wedding Saree) ಉಟ್ಟಿದ್ದರೋ ಅದೇ ಸೀರೆಯನ್ನು ಆಲಿಯಾ ಧರಿಸಿದ್ದರು.

ರಾಷ್ಟ್ರ ಪ್ರಶಸ್ತಿ ಪಡೆಯೋದು ಎಂದರೆ ಅದು ಸಣ್ಣ ಮಾತೇನೂ ಅಲ್ಲ. ಆಲಿಯಾಗೆ ಇಂಥ ಅವಾರ್ಡ್ ಸಿಕ್ಕಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ಆಲಿಯಾ ಉತ್ತಮ ನಟನೆ ತೋರಿದ್ದರು. ಇದನ್ನು ಗುರುತಿಸಿ ಅವರಿಗೆ ಅವಾರ್ಡ್ ನೀಡಲಾಗಿದೆ. ಇತ್ತೀಚೆಗೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅವಾರ್ಡ್ ಸ್ವೀಕರಿಸಿದ್ದಾರೆ. ಅವಾರ್ಡ್ ಫಂಕ್ಷನ್ ಎಂದಾಗ ಸೆಲೆಬ್ರಿಟಿಗಳು ಹೊಸ ಬಟ್ಟೆ ಖರೀದಿಸಲು ಆದ್ಯತೆ ನೀಡುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಸುರಿಯುತ್ತಾರೆ. ಕೆಲವೊಮ್ಮೆ ಚಿತ್ರ ವಿಚಿತ್ರ ಬಟ್ಟೆ ಧರಿಸಿ ಸುದ್ದಿ ಆಗಿದ್ದೂ ಇದೆ. ಆದರೆ, ಆಲಿಯಾ ಅವರು ಮದುವೆ ದಿನ ಧರಿಸಿದ್ದ ಸೀರೆಯನ್ನೇ ಮತ್ತೆ ಧರಿಸಿ ಬಂದಿದ್ದಾರೆ. ಈ ಫೋಟೋನ ಹೋಲಿಕೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಆಲಿಯಾ ಅವರನ್ನು ಅನೇಕರು ಪ್ರಶಂಸಿಸಿದ್ದಾರೆ.

ಗಂಗೂಬಾಯಿ ಕಾಠಿಯಾವಾಡಿ ಅವರ ಜೀವನ ಆಧರಿಸಿ ಹುಸೇನ್ ಜೈದ್ ಅವರು ‘ಕ್ವೀನ್ ಆಫ್ ಮುಂಬೈ’ ಪುಸ್ತಕ ಬರೆದಿದ್ದರು. ಸಾಮಾನ್ಯ ಹುಡುಗಿ ಗಂಗೂಬಾಯಿ ಸೆಕ್ಸ್ ರಾಕೆಟ್​ಗೆ ಸಿಲುಕುತ್ತಾರೆ. ಆ ಜೀವನವನ್ನು ಅವರು ಒಪ್ಪಿಕೊಳ್ಳುವುದು ಅನಿವಾರ್ಯ ಆಗುತ್ತದೆ. ದೊಡ್ಡವಳಾದ ಬಳಿಕ ಬಡ ಮಕ್ಕಳ ಶಿಕ್ಷಣಕ್ಕಾಗಿ ಅವರು ಶ್ರಮಿಸುತ್ತಾರೆ. ಈ ರೀತಿಯ ಕಥೆಯನ್ನು ಈ ಸಿನಿಮಾ ಹೊಂದಿದೆ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್​ನಲ್ಲಿ 129 ಕೋಟಿ ರೂಪಾಯೊ ಗಳಿಕೆ ಮಾಡಿತ್ತು.

ಇದನ್ನೂ ಓದಿ: ವಿವೇಕ್ ಅಗ್ನಿಹೋತ್ರಿಗೆ ಆಲಿಯಾ ಭಟ್​ನ ಕಂಡರೆ ಸಖತ್ ಇಷ್ಟ; ಕಾರಣ ತಿಳಿಸಿದ ನಿರ್ದೇಶಕ

ಆಲಿಯಾ ಭಟ್ ಅವರಿಗೆ ಈ ವರ್ಷ ಸಾಕಷ್ಟು ವಿಶೇಷ ಎನಿಸಿಕೊಂಡಿದೆ. ಅವರ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಚಿತ್ರಕ್ಕೆ ಕರಣ್ ಜೋಹರ್ ನಿರ್ದೇಶನ ಇದೆ. ರಣವೀರ್ ಸಿಂಗ್​ಗೆ ಜೊತೆಯಾಗಿ ಆಲಿಯಾ ಕಾಣಿಸಿಕೊಂಡಿದ್ದರು. ‘ಹಾರ್ಟ್ ಆಫ್ ಸ್ಟೋನ್’ ಸಿನಿಮಾ ಮೂಲಕ ಅವರು ಹಾಲಿವುಡ್​ಗೂ ಕಾಲಿಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.