AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಿಮಲ್’ ಸಿನಿಮಾದ ಅವಧಿ ನೋಡಿ ಅಭಿಮಾನಿಗಳಿಗೆ ಆತಂಕ; ಇರಲಿದೆ ಎರಡು ಇಂಟರ್​ವಲ್​?

ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಅರ್ಜುನ್ ರೆಡ್ಡಿ’ ಚಿತ್ರದಲ್ಲಿ ನಾಯಕನಿಗೆ ಎರಡು ಶೇಡ್​ನ ಪಾತ್ರವಿತ್ತು. ಎರಡೂ ಶೇಡ್ ಹುಟ್ಟಲು ಕಾರಣ ಏನು ಎಂಬುದನ್ನು ನಿರ್ದೇಶಕರು ವಿವರವಾಗಿ ಹೇಳಿದ್ದರು. ‘ಅನಿಮಲ್’ ಚಿತ್ರದಲ್ಲೂ ಕಥಾ ನಾಯಕನಿಗೆ ಎರಡು ಶೇಡ್ ಇದೆ ಎಂಬುದು ಟೀಸರ್​​ನಲ್ಲಿ ಗೊತ್ತಾಗಿದೆ.

‘ಅನಿಮಲ್’ ಸಿನಿಮಾದ ಅವಧಿ ನೋಡಿ ಅಭಿಮಾನಿಗಳಿಗೆ ಆತಂಕ; ಇರಲಿದೆ ಎರಡು ಇಂಟರ್​ವಲ್​?
ಅನಿಮಲ್ ಸಿನಿಮಾ ಪೋಸ್ಟರ್
ರಾಜೇಶ್ ದುಗ್ಗುಮನೆ
|

Updated on: Oct 31, 2023 | 7:07 AM

Share

ಕಥೆ ಸ್ವಲ್ಪ ವಿಸ್ತ್ರತವಾಗಿದ್ದರೂ ಸಾಕು, ಎರಡು ಪಾರ್ಟ್​​ನಲ್ಲಿ ಸಿನಿಮಾ ಮಾಡಲು ನಿರ್ದೇಶಕರು ಆಸಕ್ತಿ ತೋರುತ್ತಾರೆ. ಆದರೆ, ಕೆಲವು ನಿರ್ದೇಶಕರಿಗೆ ಈ ಮೆಥಡ್ ಇಷ್ಟವಾಗುವುದಿಲ್ಲ. ಸಿನಿಮಾದ ಅವಧಿ ಅದೆಷ್ಟೇ ದೀರ್ಘವಾಗಿದ್ದರೂ ಒಂದೇ ಪಾರ್ಟ್​​ನಲ್ಲಿ ಸಿನಿಮಾನ ರಿಲೀಸ್ ಮಾಡೋಕೆ ಇಷ್ಟಪಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗ. ಇವರು ‘ಅನಿಮಲ್’ ಸಿನಿಮಾ (Animal Movie) ನಿರ್ದೇಶನ ಮಾಡಿದ್ದಾರೆ. ಚಿತ್ರದ ಅವಧಿ ನೋಡಿ ಅಭಿಮಾನಿಗಳಿಗೇ ಆತಂಕ ಆಗಿದೆ.

ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಅರ್ಜುನ್ ರೆಡ್ಡಿ’ ಚಿತ್ರದಲ್ಲಿ ನಾಯಕನಿಗೆ ಎರಡು ಶೇಡ್​ನ ಪಾತ್ರವಿತ್ತು. ಎರಡೂ ಶೇಡ್ ಹುಟ್ಟಲು ಕಾರಣ ಏನು ಎಂಬುದನ್ನು ನಿರ್ದೇಶಕರು ವಿವರವಾಗಿ ಹೇಳಿದ್ದರು. ‘ಅನಿಮಲ್’ ಚಿತ್ರದಲ್ಲೂ ಕಥಾ ನಾಯಕನಿಗೆ ಎರಡು ಶೇಡ್ ಇದೆ ಎಂಬುದು ಟೀಸರ್​​ನಲ್ಲಿ ಗೊತ್ತಾಗಿದೆ. ಪಾತ್ರ ಪರಿಚಯಕ್ಕೆ, ಅವುಗಳ ಬಗೆಗಿನ ವಿವರಣೆಗೆ ನಿರ್ದೇಶಕರು ಹೆಚ್ಚು ಒತ್ತು ಕೊಟ್ಟಂತೆ ಇದೆ. ಈ ಕಾರಣದಿಂದಲೇ ‘ಅನಿಮಲ್’ ಸಿನಿಮಾದ ಅವಧಿ ಮೂರು ಗಂಟೆ ಮೀರಿದೆ.

ಮೂಲಗಳ ಪ್ರಕಾರ ‘ಅನಿಮಲ್’ ಸಿನಿಮಾ ರನ್ ಟೈಮ್​ 190 ನಿಮಿಷಕ್ಕೂ ಅಧಿಕವಾಗಿದೆ. ಅಂದರೆ ಮೂರು ಗಂಟೆ 18 ನಿಮಿಷ ಈ ಸಿನಿಮಾ ಇರಲಿದೆ. ಇತ್ತೀಚಿನ ವರ್ಷಗಳಲ್ಲಿ ರಿಲೀಸ್ ಆದ ಸಿನಿಮಾಗಳಲ್ಲೇ ಅತೀ ದೀರ್ಘ ಅವಧಿಯ ಚಿತ್ರ ಎಂಬ ಖ್ಯಾತಿ ‘ಅನಿಮಲ್​’ಗೆ ಸಿಗೋ ಸಾಧ್ಯತೆ ಇದೆ. ಈ ಕಾರಣದಿಂದ ಚಿತ್ರಕ್ಕೆ ಎರಡು ಮಧ್ಯಂತರ ಇಡಲು ನಿರ್ಧರಿಸಲಾಗಿದೆ. ಆಮಿರ್ ಖಾನ್ ನಟನೆಯ ‘ಲಗಾನ್’, ಸಲ್ಮಾನ್ ಖಾನ್ ನಟನೆಯ ‘ಹಮ್ ಆಪ್ಕೆ ಹೈ ಕೌನ್’ ಸೇರಿ ಅನೇಕ ಸಿನಿಮಾಗಳಿಗೆ ಎರಡು ಇಂಟರ್​ವಲ್ ನೀಡಲಾಗಿತ್ತು.

ಇದನ್ನೂ ಓದಿ: ಮತ್ತೆ ಮುಂದುವರಿದ ಕಿಸ್ಸಿಂಗ್ ಸರಣಿ; ‘ಅನಿಮಲ್’ ಹೊಸ ಹಾಡಿನಲ್ಲಿ ರಣಬೀರ್-ರಶ್ಮಿಕಾ ಲಿಪ್ ಲಾಕ್

‘ಅನಿಮಲ್’ ಸಿನಿಮಾದಲ್ಲಿ ಕಥಾ ನಾಯಕ ರಣಬೀರ್ ಕಪೂರ್ ಪತ್ನಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಅನಿಲ್ ಕಪೂರ್, ಬಾಬಿ ಡಿಯೋಲ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಬೋಲ್ಡ್ ದೃಶ್ಯಗಳು ಸಿನಿಮಾದಲ್ಲಿ ಸಾಕಷ್ಟು ಇದೆ ಎನ್ನಲಾಗಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ