Baby Movie Collection: ‘ಅರ್ಜುನ್​ ರೆಡ್ಡಿ’ ಚಿತ್ರದ ಲೈಫ್​ಟೈಮ್​ ಗಳಿಕೆ ಮೀರಿಸಿದ ‘ಬೇಬಿ’; ಅಣ್ಣನ ರೀತಿಯೇ ಮಿಂಚಿದ ಆನಂದ್​ ದೇವರಕೊಂಡ

Anand Deverakonda: ಬಾಕ್ಸ್​ ಆಫೀಸ್​ನಲ್ಲಿ ‘ಬೇಬಿ’ ಸಿನಿಮಾಗೆ ಸಖತ್​ ಲಾಭ ಆಗುತ್ತಿದೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Baby Movie Collection: ‘ಅರ್ಜುನ್​ ರೆಡ್ಡಿ’ ಚಿತ್ರದ ಲೈಫ್​ಟೈಮ್​ ಗಳಿಕೆ ಮೀರಿಸಿದ ‘ಬೇಬಿ’; ಅಣ್ಣನ ರೀತಿಯೇ ಮಿಂಚಿದ ಆನಂದ್​ ದೇವರಕೊಂಡ
ವೈಷ್ಣವಿ ಚೈತನ್ಯ, ವಿಜಯ್​ ದೇವರಕೊಂಡ, ಆನಂದ್​ ದೇವರಕೊಂಡ
Follow us
ಮದನ್​ ಕುಮಾರ್​
|

Updated on: Jul 28, 2023 | 7:19 PM

ನಟ ಆನಂದ್​ ದೇವರಕೊಂಡ (Anand Deverakonda) ಅವರು ಇಂಥದ್ದೊಂದು ಗೆಲುವಿಗಾಗಿ ಕಾದಿದ್ದರು. ಅವರು ನಟಿಸಿದ ‘ಬೇಬಿ’ ಸಿನಿಮಾ ಸೂಪರ್ ಹಿಟ್​ ಆಗಿದೆ. ತ್ರಿಕೋನ ಪ್ರೇಮಕಥೆ ಹೊಂದಿರುವ ಈ ಚಿತ್ರಕ್ಕೆ ಜನರು ಫಿದಾ ಆಗಿದ್ದಾರೆ. ವಿಮರ್ಶಕರಿಂದಲೂ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಬಿಡುಗಡೆಯಾಗಿ 12 ದಿನ ಕಳೆದಿದ್ದರೂ ಕೂಡ ‘ಬೇಬಿ’ (Baby Movie) ಸಿನಿಮಾದ ಹವಾ ಕಡಿಮೆ ಆಗಿಲ್ಲ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಬಂಪರ್​ ಬೆಳೆ ತೆಗೆದಿದೆ. ವಿಶ್ವಾದ್ಯಂತ 70 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿರುವುದು ಈ ಸಿನಿಮಾದ ಹೆಚ್ಚುಗಾರಿಕೆ. ಇಷ್ಟು ದಿನ ವಿಜಯ್​ ದೇವರಕೊಂಡ (Vijay Deverakonda) ಅವರ ತಮ್ಮ ಎಂದು ಗುರುತಿಸಿಕೊಳ್ಳುತ್ತಿದ್ದ ಆನಂದ್​ ದೇವರಕೊಂಡ ಅವರು ಈಗ ‘ಬೇಬಿ’ ಸಿನಿಮಾದ ಗೆಲುವಿನಿಂದ ಸ್ವಂತ ಐಡೆಂಟಿಟಿ ಪಡೆದುಕೊಂಡಿದ್ದಾರೆ.

ವಿಜಯ್​ ದೇವರಕೊಂಡ ಅವರಿಗೆ ‘ಅರ್ಜುನ್​ ರೆಡ್ಡಿ’ ಸಿನಿಮಾ ಸಾಕಷ್ಟು ಖ್ಯಾತಿ ತಂದು ಕೊಟ್ಟಿತ್ತು. ಸಂದೀಪ್​ ರೆಡ್ಡಿ ವಂಗ ಅವರು ನಿರ್ದೇಶನ ಮಾಡಿದ್ದ ಆ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿತ್ತು. ಆದರೆ ಈಗ ಆ ಸಿನಿಮಾದ ಲೈಫ್​ಟೈಮ್​ ಗಳಿಕೆಯನ್ನೂ ಮೀರಿಸಿ ‘ಬೇಬಿ’ ಸಿನಿಮಾ ಕಲೆಕ್ಷನ್​ ಮಾಡಿದೆ. ಇದರಿಂದ ಆನಂದ್​ ದೇವಕೊಂಡ ಅವರ ವೃತ್ತಿಬದುಕಿಗೆ ಹೊಸ ಮೈಲೇಜ್​ ಸಿಕ್ಕಂತೆ ಆಗಿದೆ. ಇನ್ನೂ ಅನೇಕ ದಿನಗಳ ಕಾಲ ಚಿತ್ರಮಂದಿರದಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣಲಿದೆ.

ಕಡಿಮೆ ಬಜೆಟ್​ನಲ್ಲಿ ಸಿದ್ಧಗೊಂಡ ‘ಬೇಬಿ’ ಸಿನಿಮಾಗೆ ಸಖತ್​ ಲಾಭ ಆಗುತ್ತಿದೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್​ ಸೇರಿದಂತೆ ಅನೇಕರು ಭೇಷ್​ ಎಂದಿದ್ದಾರೆ. ಸಿನಿಮಾದ ಸಕ್ಸಸ್​ ಮೀಟ್​ಗೆ ಅತಿಥಿಯಾಗಿ ಆಗಮಿಸಿದ್ದ ಅಲ್ಲು ಅರ್ಜುನ್​ ಅವರು ವೇದಿಕೆ ಮೇಲೆ 30 ನಿಮಿಷಕ್ಕೂ ಹೆಚ್ಚು ಕಾಲ ‘ಬೇಬಿ’ ಬಗ್ಗೆ ಮಾತನಾಡಿದರು. ಆಂಧ್ರ, ತೆಲಂಗಾಣ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲೂ ಈ ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ವಿಜಯ್​ ದೇವರಕೊಂಡ ಅವರ ಶರ್ಟ್​ ಧರಿಸಿ ಓಡಾಡುತ್ತಿದ್ದಾರಾ ರಶ್ಮಿಕಾ ಮಂದಣ್ಣ? ವಿಡಿಯೋ ವೈರಲ್​

ಸಾಯಿ ರಾಜೇಶ್​ ಅವರು ‘ಬೇಬಿ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಆನಂದ್​ ದೇವರಕೊಂಡ ಜೊತೆ ವೈಷ್ಣವಿ ಚೈತನ್ಯ ನಟಿಸಿದ್ದು, ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿದೆ. ನಟ ವಿರಾಜ್​ ಅಶ್ವಿನ್​ ಕೂಡ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಶ್ರೀನಿವಾಸ್​ ಕುಮಾರ್​ ನಾಯ್ಡು (ಎಸ್​ಕೆಎನ್​) ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಹೊಸ ಸಿನಿಮಾಗಳ ರಿಲೀಸ್​ ನಡುವೆಯೂ ‘ಬೇಬಿ’ ಚಿತ್ರ ಉತ್ತಮವಾಗಿ ಕಲೆಕ್ಷನ್​ ಮಾಡುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.