AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ವಿಜಯ್​ ದೇವರಕೊಂಡ ಅವರ ಶರ್ಟ್​ ಧರಿಸಿ ಓಡಾಡುತ್ತಿದ್ದಾರಾ ರಶ್ಮಿಕಾ ಮಂದಣ್ಣ? ವಿಡಿಯೋ ವೈರಲ್​

Vijay Devarakonda: ವಿಜಯ್​ ದೇವರಕೊಂಡ ಮಾತ್ರವಲ್ಲದೇ ಅವರ ಫ್ಯಾಮಿಲಿ ಜೊತೆಗೂ ರಶ್ಮಿಕಾ ಮಂದಣ್ಣ ಅವರಿಗೆ ಒಡನಾಟ ಇದೆ. ಇಬ್ಬರ ನಡುವಿನ ಆಪ್ತತೆ ಈಗ ಇನ್ನಷ್ಟು ಹೆಚ್ಚಾಗಿದೆ.

Rashmika Mandanna: ವಿಜಯ್​ ದೇವರಕೊಂಡ ಅವರ ಶರ್ಟ್​ ಧರಿಸಿ ಓಡಾಡುತ್ತಿದ್ದಾರಾ ರಶ್ಮಿಕಾ ಮಂದಣ್ಣ? ವಿಡಿಯೋ ವೈರಲ್​
ವಿಜಯ್​ ದೇವರಕೊಂಡ, ರಶ್ಮಿಕಾ ಮಂದಣ್ಣ
ಮದನ್​ ಕುಮಾರ್​
|

Updated on: Jul 26, 2023 | 6:56 PM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್​ ದೇವರಕೊಂಡ ನಡುವೆ ಆತ್ಮೀಯತೆ ಇದೆ. ಅನೇಕ ಸಂದರ್ಭದಲ್ಲಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಇಬ್ಬರ ನಡುವಿನ ಆಪ್ತತೆ ಹೆಚ್ಚಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಹೊಸ ಫೋಟೋ ವೈರಲ್​ ಆಗಿದೆ. ಇತ್ತೀಚೆಗೆ ಏರ್​ಪೋರ್ಟ್​ನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರು ಧರಿಸಿದ್ದ ಶರ್ಟ್​ ಗಮನ ಸೆಳೆದಿದೆ. ರಶ್ಮಿಕಾ ಧರಿಸಿರುವುದು ವಿಜಯ್​ ದೇವರಕೊಂಡ ಅವರ ಶರ್ಟ್​ (Vijay Deverakonda Shirt) ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಈ ಮೊದಲು ವಿಜಯ್​ ದೇವರಕೊಂಡ ಅವರು ಇದೇ ಶರ್ಟ್​ ಧರಿಸಿ ಕಾಣಿಸಿಕೊಂಡಿದ್ದರು. ಎರಡೂ ಫೋಟೋಗಳನ್ನು ಒಟ್ಟಿಗೆ ಜೋಡಿಸಿ ವೈರಲ್ ಮಾಡಲಾಗುತ್ತಿದೆ. ಈ ಬಗ್ಗೆ ವಿಜಯ್​ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ ಮಂದಣ್ಣ ಅವರು ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕು.

‘ಡಿಯರ್​ ಕಾಮ್ರೇಡ್​’, ‘ಗೀತ ಗೋವಿಂದಂ’ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿರುವ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದು ಜನರ ಗುಮಾನಿ. ತಮ್ಮ ನಡುವೆ ಸ್ನೇಹದ ಹೊರತು ಬೇರೇನೂ ಇಲ್ಲ ಎಂದು ಈ ಸೆಲೆಬ್ರಿಟಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ ನೆಟ್ಟಿಗರಿಗೆ ಅನುಮಾನ ಪರಿಹಾರ ಆಗಿಲ್ಲ. ಈಗ ವಿಜಯ್​ ದೇವರಕೊಂಡ ಬಳಿ ಇರುವ ರೀತಿಯ ಅಂಗಿಯನ್ನೇ ರಶ್ಮಿಕಾ ಮಂದಣ್ಣ ಕೂಡ ಧರಿಸಿರುವುದರಿಂದ ಅನುಮಾನ ಇನ್ನಷ್ಟು ಹೆಚ್ಚಾಗಿದೆ.

ಮೊದಲು ಆಪ್ತವಾಗಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ನಡುವೆ ನಂತರದ ದಿನಗಳಲ್ಲಿ ಬಿರುಕು ಮೂಡಿತ್ತು ಎಂಬ ಸುದ್ದಿ ಹಬ್ಬಿತ್ತು. ಆದರೆ ಅದು ನಿಜವಲ್ಲ. ಇಬ್ಬರೂ ಈಗಲೂ ಆತ್ಮೀಯವಾಗಿಯೇ ಇದ್ದಾರೆ. ಪರಸ್ಪರ ತಮ್ಮ ಸಿನಿಮಾಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಇಬ್ಬರಿಗೂ ಒಳ್ಳೊಳ್ಳೆಯ ಆಫರ್​ಗಳು ಹರಿದುಬರುತ್ತಿವೆ. ರಶ್ಮಿಕಾ ಅವರು ಬಾಲಿವುಡ್​ನಲ್ಲೂ ಮಿಂಚುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ರಿಲೀಸ್​ಗೂ ಮುನ್ನ 32 ಕೋಟಿ ರೂ. ಬಿಸ್ನೆಸ್​ ಮಾಡಿದ ರಶ್ಮಿಕಾ ಮಂದಣ್ಣ ಸಿನಿಮಾ? ಸಮಂತಾ ದಾಖಲೆ ಉಡೀಸ್​

ವಿಜಯ್​ ದೇವರಕೊಂಡ ಮಾತ್ರವಲ್ಲದೇ ಅವರ ಫ್ಯಾಮಿಲಿ ಜೊತೆಗೂ ರಶ್ಮಿಕಾ ಮಂದಣ್ಣ ಅವರಿಗೆ ಒಡನಾಟ ಇದೆ. ವಿಜಯ್​ ದೇವರಕೊಂಡ ಅವರ ಸಹೋದರ ಆನಂದ್​ ದೇವರಕೊಂಡ ನಟಿಸಿದ್ದ ‘ಬೇಬಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಆ ಚಿತ್ರದ ಪ್ರೀಮಿಯರ್ ಶೋಗೆ ರಶ್ಮಿಕಾ ಮಂದಣ್ಣ ಆಗಮಿಸಿದ್ದರು. ಆ ಮೂಲಕ ಆನಂದ್​ ದೇವರಕೊಂಡ ಅವರ ವೃತ್ತಿಜೀವನಕ್ಕೆ ರಶ್ಮಿಕಾ ಬೆಂಬಲ ನೀಡಿದರು. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮವಾಗಿ ಕಮಾಯಿ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ