AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಸ್ಪರ್ಧಿಗಳ ಹರಾಜು ಯಾರಿಗೆ ಎಷ್ಟು ಹಣ?

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್​ 10ರಲ್ಲಿ ಸ್ಪರ್ಧಿಗಳ ಹರಾಜು ನಡೆದಿದೆ. ಯಾರಿಗೆ ಹೆಚ್ಚು ಹಣ ನೀಡಲಾಗಿದೆ? ಯಾರಿಗೆ ಕಡಿಮೆ? ಇಲ್ಲಿದೆ ಮಾಹಿತಿ...

ಬಿಗ್​ಬಾಸ್ ಸ್ಪರ್ಧಿಗಳ ಹರಾಜು ಯಾರಿಗೆ ಎಷ್ಟು ಹಣ?
ಬಿಗ್​ಬಾಸ್
ಮಂಜುನಾಥ ಸಿ.
|

Updated on: Dec 21, 2023 | 11:16 PM

Share

ಐಪಿಎಲ್ (IPL) ಹರಾಜು ಮುಗಿದು ಕೆಲವು ದಿನಗಳಷ್ಟೆ ಆಗಿದೆ. ಇದರ ನಡುವೆ ಬಿಗ್​ಬಾಸ್ (BiggBoss) ಮನೆಯಲ್ಲಿಯೂ ಹರಾಜು ನಡೆದಿದೆ. ಲೀಡರ್ ಆಗಿದ್ದ ತನಿಷಾ ಹಾಗೂ ಸಂಗೀತಾ ಅವರುಗಳು ತಮಗೆ ನೀಡಲಾದ 11 ಸಾವಿರ ಮೊತ್ತದಲ್ಲಿ ಕೆಲವು ಸ್ಪರ್ಧಿಗಳನ್ನು ಖರೀದಿ ಮಾಡಿದ್ದರು. ಕೆಲವರಿಗೆ ಹೆಚ್ಚು ಕೆಲವರಿಗೆ ಕಡಿಮೆ ಮೊತ್ತ ನೀಡಲಾಗಿತ್ತು. ಇದು ಹಲವು ಸ್ಪರ್ಧಿಗಳಿಗೆ ಅಸಮಾಧಾನ ತಂದಿತ್ತು. ಅದನ್ನು ಸರಿ ಮಾಡಲು ಗುರುವಾರದ ಎಪಿಸೋಡ್​ನಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಯ್ತು.

ಸಂಗೀತಾ ಹಾಗೂ ತನಿಷಾ ಅವರುಗಳಿಗೆ ತಲಾ ಎಂಟು ಸಾವಿರ ಪಾಯಿಂಟ್ಸ್ ನೀಡಿದ ಬಿಗ್​ಬಾಸ್ ಹರಾಜು ಕೂಗುವಂತೆ ಹೇಳಿದರು. ಈ ವೇಳೆ ಸಂಗೀತಾ ತಂಡದ ಮುಖ್ಯ ಆಟಗಾರ್ತಿ ನಮ್ರತಾ ಹಾಗೂ ತನಿಷಾ ತಂಡದ ವಿನಯ್ ಅವರನ್ನು ಹೊರತುಪಡಿಸಿ ಹರಾಜು ಕೂಗಬೇಕಿತ್ತು. ಅವರಿಬ್ಬರಿಗೂ ಬಿಗ್​ಬಾಸ್ ಸ್ವತಃ ಹೆಚ್ಚುವರಿ ಪಾಯಿಂಟ್ಸ್ ನೀಡಿದ್ದರು.

ಮೊದಲಿಗೆ ಬಂದ ಡ್ರೋನ್ ಪ್ರತಾಪ್​ಗೆ ತನಿಷಾ ಹರಾಜು ಕೂಗಲಿಲ್ಲ ಹಾಗಾಗಿ ಅವರನ್ನು ಕೇವಲ 100 ಪಾಯಿಂಟ್ಸ್​ಗೆ ಸಂಗೀತಾ ಖರೀದಿ ಮಾಡಿದರು. ಅದಾದ ಬಳಿಕ ಬಂದ ತುಕಾಲಿ ಸಂತುಗೆ ತನಿಷಾ ಹಾಗೂ ಸಂಗೀತಾ ತಲಾ 100 ಪಾಯಿಂಟ್ಸ್ ನೀಡಿದರು. ಬಳಿಕ ಅದನ್ನು ಸಂಗೀತಾ 150ಕ್ಕೆ ಏರಿಸಿದರು. ತುಕಾಲಿ, ಸಂಗೀತಾ ತಂಡ ಸೇರಿದರು. ಬಳಿಕ ಬಂದ ಕಾರ್ತಿಕ್​ಗೆ ತನಿಷಾ ಹಾಗೂ ಸಂಗೀತಾ ಇಬ್ಬರೂ ಹರಾಜು ಕರೆಯಲಿಲ್ಲ.

ಇದನ್ನೂ ಓದಿ:ತೆಲುಗು ಬಿಗ್​ಬಾಸ್ ಗೆದ್ದ ಪ್ರಶಾಂತ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?

ಮೈಖಲ್​ಗೆ ಭಾರಿ ಡಿಮ್ಯಾಂಡ್ ಬರಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ತಲೆ ಉಪಯೋಗಿಸಿದ ನಮ್ರತಾ ಹಾಗೂ ಸಂಗೀತಾ, ಮೈಖಲ್​ಗೆ ಹರಾಜು ಕೂಗಲಿಲ್ಲ. ಈಗಾಗಲೇ ಅವರ ಬಳಿ ಹೆಚ್ಚು ಪಾಯಿಂಟ್ಸ್ ಇದ್ದು, ಈಗ ಅವರಿಗೆ ಹರಾಜಿನಲ್ಲಿ ಹೆಚ್ಚು ಪಾಯಿಂಟ್ಸ್ ನೀಡಿದರೆ ಅವರು ಕ್ಯಾಪ್ಟೆನ್ಸಿ ಟಾಸ್ಕ್​ಗೆ ಬಂದು ಬಿಡುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಹರಾಜು ಕೂಗಲಾಗಲಿಲ್ಲ ಸಂಗೀತಾ, ಹಾಗಾಗಿ ಕೇವಲ 100 ಪಾಯಿಂಟ್ಸ್​ಗೆ ಮೈಖಲ್ ತನಿಷಾ ತಂಡಕ್ಕೆ ಸೇಲ್ ಆದರು.

ಬಳಿಕ ಬಂದ ಸಿರಿ ಅವರಿಗೆ ಸಂಗೀತಾ ಹಾಗೂ ತನಿಷಾ ಇಬ್ಬರೂ ಭರಪೂರವಾಗಿ ಹರಾಜು ಕೂಗಿದರು. ಬರೋಬ್ಬರಿ 800 ಪಾಯಿಂಟ್ಸ್​ಗೆ ಸಂಗೀತಾ ತಂಡಕ್ಕೆ ಸೇಲ್ ಆದರು ಸಿರಿ. ಬಳಿಕ ಬಂದ ವರ್ತೂರು ಸಂತುಗೆ ಇಬ್ಬರೂ ಹರಾಜು ಕೂಗಲಿಲ್ಲ. ಕೊನೆಗೆ ಬಿಗ್​ಬಾಸ್ ಆದೇಶದಂತೆ ತನಿಷಾ ಅವರೇ ಕೇವಲ 100 ಪಾಯಿಂಟ್ಸ್​ ಗೆ ವರ್ತೂರು ಅವರನ್ನು ಖರೀದಿ ಮಾಡಿದರು. ಇಷ್ಟವಿಲ್ಲದಿದ್ದರೂ ತನಿಷಾ ತಂಡಕ್ಕೆ ಹೋದರು ವರ್ತೂರು ಸಂತು. ಎರಡೂ ತಂಡಗಳ ಬಳಿ ತಲಾ ನಾಲ್ಕು ಆಟಗಾರರು ಆದರು. ಕಾರ್ತಿಕ್ ಯಾರಿಗೂ ಸೇಲ್ ಆಗದೆ ಉಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ