AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ’ ಪ್ರೀಕ್ವೆಲ್​ನಲ್ಲಿ ನಟಿಸಲು ಕೋರಿ ಸಲ್ಲಿಕೆ ಆಗಿದೆ 25 ಸಾವಿರ ಅರ್ಜಿ

kantara.film ವೆಬ್​ಸೈಟ್​ಗೆ ಭೇಟಿ ನೀಡಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕಿತ್ತು. 14 ಡಿಸೆಂಬರ್​ವರೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇತ್ತು. ಈಗ ಬರೋಬ್ಬರಿ 25 ಸಾವಿರ ಅರ್ಜಿಗಳು ಬಂದಿವೆ.  

‘ಕಾಂತಾರ’ ಪ್ರೀಕ್ವೆಲ್​ನಲ್ಲಿ ನಟಿಸಲು ಕೋರಿ ಸಲ್ಲಿಕೆ ಆಗಿದೆ 25 ಸಾವಿರ ಅರ್ಜಿ
ರಿಷಬ್
TV9 Web
| Edited By: |

Updated on: Dec 22, 2023 | 12:47 PM

Share

‘ಕಾಂತಾರ: ಚಾಪ್ಟರ್ 1’ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಈ ಸಿನಿಮಾದ ಪೂಜಾ ಕೆಲಸಗಳನ್ನು ತಂಡ ಸಿಂಪಲ್ ಆಗಿ ನೆರವೇರಿಸಿತ್ತು. ಇತ್ತೀಚೆಗೆ ತಂಡ ಕಲಾವಿದರ ಆಯ್ಕೆಗೆ ಅರ್ಜಿ ಸಲ್ಲಿಕೆ ಮಾಡಲು ಹೊಂಬಾಳೆ ಫಿಲ್ಮ್ಸ್ ಅವಕಾಶ ನೀಡಿತ್ತು. ಇದಕ್ಕೆ ಬರೋಬ್ಬರಿ 25 ಸಾವಿರ ಅರ್ಜಿಗಳು ಬಂದಿವೆ. ‘ಕಾಂತಾರ: ಚಾಪ್ಟರ್ 1’ (Kantara Chapter 1) ಹೈಪ್ ಎಷ್ಟಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಈ ಪೈಕಿ ಯಾರೆಲ್ಲ ಆಯ್ಕೆ ಆಗುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

‘ಕಲಾವಿದರು ಬೇಕಾಗಿದ್ದಾರೆ’ ಎಂದು ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಪೋಸ್ಟ್ ಮಾಡಿತ್ತು. ಪುರುಷ ಕಲಾವಿದರ ವಯಸ್ಸು 30ರಿಂದ 60 ವರ್ಷ ಅಂತರದಲ್ಲಿ ಇರಬೇಕು ಎಂದಿದ್ದರು. ಮಹಿಳಾ ಕಲಾವಿದರ ವಯಸ್ಸು 18ರಿಂದ 60 ವರ್ಷ ಅಂತರದಲ್ಲಿ ಇರಬೇಕು ಎಂದು ಹೊಂಬಾಳೆ ಹೇಳಿತ್ತು. kantara.film ವೆಬ್​ಸೈಟ್​ಗೆ ಭೇಟಿ ನೀಡಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕಿತ್ತು. 14 ಡಿಸೆಂಬರ್​ವರೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇತ್ತು. ಈಗ ಬರೋಬ್ಬರಿ 25 ಸಾವಿರ ಅರ್ಜಿಗಳು ಬಂದಿವೆ.

2022ರಲ್ಲಿ ರಿಲೀಸ್ ಆದ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದರು ರಿಷಬ್ ಶೆಟ್ಟಿ. ಈ ಚಿತ್ರದಿಂದ ಹೊಂಬಾಳೆ ಫಿಲ್ಮ್ಸ್ ದೊಡ್ಡ ಲಾಭ ಮಾಡಿದೆ. ಈಗ ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ರಿಷಬ್ ಶೆಟ್ಟಿ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಫಸ್ಟ್ ಪೋಸ್ಟರ್ ಸಾಕಷ್ಟು ಸದ್ದು ಮಾಡಿದೆ.

ಇದನ್ನೂ ಓದಿ: ‘ಕಾಂತಾರ ಪ್ರೀಕ್ವೆಲ್​ನಲ್ಲಿ ನಟಿಸಲು ಅವಕಾಶ ಕೊಡಿ’; ರಿಷಬ್​ ಶೆಟ್ಟಿ ಬಳಿ ಚಾನ್ಸ್​ ಕೇಳಿದ ಖ್ಯಾತ ನಟಿ

ಇತ್ತೀಚೆಗೆ ನಟಿ ಪಾಯಲ್ ರಜಪೂತ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ನಟಿಸಲು ಅವಕಾಶ ಕೋರಿದ್ದರು. ಪಂಜಾಬಿ, ಕನ್ನಡ, ಹಿಂದಿ, ತೆಲುಗು, ಸಿನಿಮಾಗಳಲ್ಲಿ ನಟಿಸಿ ಪಾಯಲ್​ ರಜಪೂತ್​ ಫೇಮಸ್​ ಆಗಿದ್ದಾರೆ. ಕನ್ನಡದ ‘ಹೆಡ್​ಬುಷ್’ ಚಿತ್ರದಲ್ಲಿ ಅಭಿನಯಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ