ತೆಲುಗು ಬಿಗ್​ಬಾಸ್ ಗೆದ್ದ ಪ್ರಶಾಂತ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?

Bigg Boss: ತೆಲುಗು ಬಿಗ್​ಬಾಸ್ ಸೀಸನ್ 7 ಇತ್ತೀಚೆಗಷ್ಟೆ ಮುಗಿದಿದೆ, ರೈತ ಯುವಕ ಪಲ್ಲವಿ ಪ್ರಶಾಂತ್ ಗೆದ್ದಿದ್ದಾರೆ. ಅಂದಹಾಗೆ ಅವರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ತೆಲುಗು ಬಿಗ್​ಬಾಸ್ ಗೆದ್ದ ಪ್ರಶಾಂತ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?
Follow us
ಮಂಜುನಾಥ ಸಿ.
|

Updated on: Dec 19, 2023 | 5:44 PM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಚಾಲ್ತಿಯಲ್ಲಿದೆ. ಫಿನಾಲೆಗೆ ಇನ್ನು ಸುಮಾರು 30 ದಿನಗಳು ಬಾಕಿ ಇದೆ. ತೆಲುಗು ಬಿಗ್​ಬಾಸ್ ಕಳೆದ ಶನಿವಾರವಷ್ಟೆ ಮುಗಿದಿದ್ದು, ಯುವ ರೈತ ಪಲ್ಲವಿ ಪ್ರಶಾಂತ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸೀಸನ್ ಪ್ರಾರಂಭವಾದಾಗಿನಿಂದಲೂ ಜನರನ್ನು ರಂಜಿಸುತ್ತಾ, ಟಾಸ್ಕ್​ಗಳಲ್ಲಿ ಜೀವವನ್ನೇ ಒತ್ತೆ ಇಟ್ಟು ಆಡುತ್ತಿದ್ದ ಪಲ್ಲವಿ ಪ್ರಶಾಂತ್​ ವೀಕ್ಷಕರ ಮನ ಗೆದ್ದಿದ್ದರು, ಕೋಟ್ಯಂತರ ಮಂದಿ ರೈತರು, ರೈತರ ಮಕ್ಕಳು ಪಲ್ಲವಿ ಪ್ರಶಾಂತ್ ಅನ್ನು ತಮ್ಮ ಪ್ರತಿನಿಧಿ ಎಂದೇ ನಂಬಿದ್ದರು, ಕೊನೆಗೆ ಪಲ್ಲವಿ ಪ್ರಶಾಂತ್ ಗೆದ್ದಿದ್ದಾರೆ.

ಫಿನಾಲೆ ದಿನ ಬರೋಬ್ಬರಿ ಆರು ಮಂದಿ ಉಳಿದುಕೊಂಡಿದ್ದರು. ಅವರಲ್ಲಿ ಇಬ್ಬರು ಮೊದಲಿಗೆ ಎಲಿಮಿನೇಟ್ ಆದರು. ಬಳಿಕ ನಾಲ್ಕು ಮಂದಿ ಉಳಿದಿದ್ದರು. ಅವರಲ್ಲಿ ಒಬ್ಬರು ಗೋಲ್ಡನ್ ಸೂಟ್​ಕೇಸ್​ ತೆಗೆದುಕೊಂಡು ಶೋನಿಂದ ಹೊರಗೆ ಬಂದರು. ಉಳಿದ ಮೂವರಲ್ಲಿ, ಶಿವಾಜಿ ಸಹ ಎಲಿಮಿನೇಟ್ ಆದರು. ಕೊನೆಗೆ ಅಮರ್​ದೀಪ್ ಹಾಗೂ ಪ್ರಶಾಂತ್ ಉಳಿದಿದ್ದು, ಪಲ್ಲವಿ ಪ್ರಶಾಂತ್ ವಿಜೇತ ಎನಿಸಿಕೊಂಡರು.

ಇದನ್ನೂ ಓದಿ:ತೆಲುಗು ಬಿಗ್​ಬಾಸ್ ವಿನ್ನರ್-ರನ್ನರ್ ಅಪ್ ಅಭಿಮಾನಿಗಳ ನಡುವೆ ಗಲಾಟೆ, ಕಾರು, ಬಸ್ಸುಗಳು ಜಖಂ

ಫಿನಾಲೆ ಗೆದ್ದ ಪಲ್ಲವಿ ಪ್ರಶಾಂತ್​ಗೆ ಬರೋಬ್ಬರಿ 35 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯ್ತು. ಅಸಲಿಗೆ ಪ್ರೈಜ್ ಮನಿ 50 ಲಕ್ಷ ರೂಪಾಯಿಗಳಾಗಿತ್ತು. ಆದರೆ ಗೋಲ್ಡನ್ ಸೂಟ್​ಕೇಸ್​ನಲ್ಲಿ ಯಾವರ್​ಗೆ 15 ಲಕ್ಷ ಹಣ ನೀಡಲಾಯ್ತು. ಹಾಗಾಗಿ 50 ಲಕ್ಷ ರೂಪಾಯಿ ಹಣದ ಬದಲಿಗೆ ಪಲ್ಲವಿ ಪ್ರಶಾಂತ್​ಗೆ 35 ಲಕ್ಷ ರೂಪಾಯಿ ನೀಡಲಾಯ್ತು.

ರನ್ನರ್ ಅಪ್ ಅಮರ್​ದೀಪ್​ಗೆ ಯಾವುದೇ ಬಹುಮಾನದ ಹಣ ನೀಡಲಾಗಲಿಲ್ಲ ಆದರೆ ಆತನಿಗೆ ಅವರ ಅತ್ಯಂತ ಅಚ್ಚುಮೆಚ್ಚಿನ ನಟ ರವಿತೇಜ ಅವರ ಮುಂದಿನ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿತು. ಸ್ವತಃ ರವಿತೇಜ ವೇದಿಕೆ ಮೇಲೆ ಬಂದು ತಮ್ಮ ಮುಂದಿನ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದರು. ಎರಡನೇ ರನ್ನರ್ ಅಪ್ ಆದ ಶಿವಾಜಿ ಅವರಿಗೆ ಯಾವುದೇ ಬಹುಮಾನದ ಹಣ ಸಿಗಲಿಲ್ಲವಾದರೂ, ಇಡೀ ಬಿಗ್​ಬಾಸ್​ನಲ್ಲಿ ಅತಿ ಹಚ್ಚು ಸಂಭಾವನೆ ಶಿವಾಜಿ ಅವರಿಗೆ ದೊರಕಿತು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್