ತೆಲುಗು ಬಿಗ್​ಬಾಸ್ ವಿನ್ನರ್-ರನ್ನರ್ ಅಪ್ ಅಭಿಮಾನಿಗಳ ನಡುವೆ ಗಲಾಟೆ, ಕಾರು, ಬಸ್ಸುಗಳು ಜಖಂ

Bigg Boss: ತೆಲುಗು ಬಿಗ್​ಬಾಸ್​ ವಿನ್ನರ್ ಪಲ್ಲವಿ ಪ್ರಶಾಂತ್ ಅಭಿಮಾನಿಗಳು, ರನ್ನರ್ ಅಪ್ ಅಮರ್​ದೀಪ್​ರ ಕಾರಿನ ಮೇಲೆ ದಾಳಿ ನಡೆಸಿ ಜಖಂ ಗೊಳಿಸಿದ್ದಾರೆ. ಆರು ಬಸ್ಸುಗಳಿಗೂ ಈ ವೇಳೆ ಹಾನಿ ಮಾಡಲಾಗಿದೆ.

ತೆಲುಗು ಬಿಗ್​ಬಾಸ್ ವಿನ್ನರ್-ರನ್ನರ್ ಅಪ್ ಅಭಿಮಾನಿಗಳ ನಡುವೆ ಗಲಾಟೆ, ಕಾರು, ಬಸ್ಸುಗಳು ಜಖಂ
ಬಿಗ್​ಬಾಸ್
Follow us
|

Updated on: Dec 19, 2023 | 3:55 PM

ತೆಲುಗು ಬಿಗ್​ಬಾಸ್ (BiggBoss) ಗ್ರ್ಯಾಂಡ್ ಫಿನಾಲೆ ಇದೇ ಶನಿವಾರ ನಡೆದಿದೆ. 105 ದಿನಗಳ ಕಾಲ ನಡೆದ ರಿಯಾಲಿಟಿ ಶೋನಲ್ಲಿ ಅಂತಿಮವಾಗಿ ರೈತ ಯುವಕ ಪಲ್ಲವಿ ಪ್ರಶಾಂತ್ ಗೆದ್ದಿದ್ದಾರೆ. ಪಲ್ಲವಿ ಪ್ರಶಾಂತ್ ಆಡಿದ ರೀತಿಯನ್ನು ತೆಲುಗು ಪ್ರೇಕ್ಷಕರು ಸಖತ್ ಮೆಚ್ಚಿಕೊಂಡಿದ್ದರು. ರೈತ ಯುವಕ, ಬಡ ಮಧ್ಯಮ ವರ್ಗದ ಯುವಕನಾಗಿದ್ದ ಪಲ್ಲವಿ ಪ್ರಶಾಂತ್ ಜೊತೆ ಕೋಟ್ಯಂತರ ಮಂದಿ ಪ್ರೇಕ್ಷಕರು ಕನೆಕ್ಟ್ ಆಗಿದ್ದರು. ಆದರೆ ಅದೇ ಶೋನ ರನ್ನರ್ ಅಪ್ ಆದ ಅನುದೀಪ್ ಹಾಗೂ ವಿನ್ನರ್ ಪಲ್ಲವಿ ಪ್ರಶಾಂತ್ ನಡುವೆ ಮನೆಯಲ್ಲಿ ಆಗಾಗ್ಗೆ ಜಗಳಗಳು ನಡೆದಿದ್ದವು. ವಿನ್ನರ್ ಹಾಗೂ ರನ್ನರ್ ಅಪ್​ ಹೆಸರುಗಳನ್ನು ಘೋಷಿಸಿದ ಬಳಿಕ ಹೊರಗಡೆ ಪಲ್ಲವಿ ಪ್ರಶಾಂತ್ ಹಾಗೂ ಅನುದೀಪ್ ಅವರ ಅಭಿಮಾನಿಗಳ ನಡುವೆ ಜೋರು ಗಲಾಟೆ ನಡೆದಿದ್ದು, ಅನುದೀಪ್ ಕಾರಿನ ಮೇಲೆ ಪಲ್ಲವಿ ಪ್ರಶಾಂತ್ ಅಭಿಮಾನಿಗಳು ದಾಳಿ ನಡೆಸಿ ಜಖಂ ಗೊಳಿಸಿದ್ದಾರೆ. ಮಾತ್ರವಲ್ಲದೆ ಹಲವು ಬಸ್ಸುಗಳ ಮೇಲೂ ಕಲ್ಲು ತೂರಾಟ ಮಾಡಲಾಗಿದೆ.

ಅನ್ನಪೂರ್ಣ ಸ್ಟುಡಿಯೋನಲ್ಲಿ ಬಿಗ್​ಬಾಸ್ ಫಿನಾಲೆ ನಡೆಯಿತು. ಪಲ್ಲವಿ ಪ್ರಶಾಂತ್ ವಿನ್ನರ್ ಎಂದು ಘೋಷಣೆ ಆದ ಬಳಿಕ ಹೊರಗಡೆ ಹಾಜರಿದ್ದ ನೂರಾರು ಪಲ್ಲವಿ ಪ್ರಶಾಂತ್ ಅಭಿಮಾನಿಗಳು ಅತ್ಯುತ್ತಾಹಗೊಂಡರು. ರನ್ನರ್ ಅಪ್ ಅಮರ್​ದೀಪ್ ಹಾಗೂ ಅವರ ಕುಟುಂಬ ಕಾರಿನಲ್ಲಿ ತೆರಳುವಾಗ ಕೆಲವು ಅಭಿಮಾನಿಗಳು ಕಾರನ್ನು ಅಡ್ಡಹಾಕಿದರಲ್ಲದೆ ಕಾರಿನ ಮೇಲೆ ಕಲ್ಲುಗಳನ್ನು ತೂರಿ, ಅವಾಚ್ಯ ಶಬ್ದಗಳಿಂದ ಅಮರ್​ದೀಪ್ ಅನ್ನು ನಿಂದಿಸಿದರು. ಅಮರ್​ದೀಪ್​ರ ಫೋರ್ಡ್ ಕಾರಿನ ಹಿಂಬದಿಯ ಗಾಜುಗಳನ್ನು ಒಡೆದರು. ಬಳಿಕ ಪಾರ್ಕಿಂಗ್​ನಲ್ಲಿ ನಿಂತಿದ್ದ ಮತ್ತೊಬ್ಬ ಸ್ಪರ್ಧಿ ಪ್ರಿಯಾಂಕಾರ ದುಬಾರಿ ಕಾರಿನ ಎರಡೂ ಬದಿಯ ಗಾಜುಗಳನ್ನು ಒಡೆದಿದ್ದಾರೆ.

ವಿನ್ನರ್ ಪಲ್ಲವಿ ಪ್ರಶಾಂತ್ ಅನ್ನು ಅದ್ಧೂರಿಯಾಗಿ ಮೆರವಣಿಗೆಯನ್ನೂ ಸಹ ಅಭಿಮಾನಿಗಳು ಮಾಡಿದ್ದಾರೆ. ಈ ವೇಳೆ ಕೆಲವು ಪುಂಡ ಅಭಿಮಾನಿಗಳು ಸರ್ಕಾರಿ ಬಸ್ಸುಗಳ ಮೇಲೆ ಕಲ್ಲು ತೂರಿದ್ದು ಇದರಿಂದಾಗಿ ಸುಮಾರು ಆರು ಬಸ್ಸಿಗಳಿಗೆ ಹಾನಿ ಆಗಿದೆ. ಈ ವೇಳೆ ಪೊಲೀಸರು ಲಾಠಿ ಪ್ರಹಾರ ಸಹ ನಡೆಸಿದ್ದಾರೆ.

ಇದನ್ನೂ ಓದಿ:ತೆಲುಗು ಬಿಗ್​ಬಾಸ್ ಫೈನಲಿಸ್ಟ್​ಗಳಿವರು: ರೈತನ ಮಗ ಚಾಂಪಿಯನ್

ಹಾನಿ ಆಗಿರುವ ಬಸ್ಸುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆರ್​ಟಿಸಿ ಉನ್ನತಾಧಿಕಾರಿ ವಿಸಿ ಸಜ್ಜನರ್, ‘‘ಬಿಗ್ ಬಾಸ್ 7 ರ ಫಿನಾಲೆ ವೇಳೆ, ಹೈದರಾಬಾದ್‌ನ ಕೃಷ್ಣನಗರ ಅನ್ನಪೂರ್ಣ ಸ್ಟುಡಿಯೋ ಬಳಿ ಭಾನುವಾರ ರಾತ್ರಿ ಕೆಲವರು ಟಿಎಸ್​ಆರ್​ಟಿಸಿ ಬಸ್‌ಗಳ ಮೇಲೆ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ 6 ಬಸ್‌ಗಳಿಗೆ ಹಾನಿಯಾಗಿದೆ. ಘಟನೆ ಕುರಿತು ಆರ್‌ಟಿಸಿ ಅಧಿಕಾರಿಗಳು ಜುಬ್ಲಿ ಹಿಲ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿದೆ. ದೂರಿನನ್ವಯ ಪೊಲೀಸರು ಎಫ್‌ಐಆರ್ ಕೂಡ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ’’ ಎಂದಿದ್ದಾರೆ.

ಮುಂದುವರೆದು, ‘‘ಅಭಿಮಾನದ ಹೆಸರಿನಲ್ಲಿ ಮಾಡುವ ಹುಚ್ಚುತನ ಸಮಾಜಕ್ಕೆ ಒಳ್ಳೆಯದಲ್ಲ. ಜನರನ್ನು ಸುರಕ್ಷಿತವಾಗಿ ಅವರ ಸ್ಥಳಗಳಿಗೆ ಕರೆದೊಯ್ಯುವ ಆರ್‌ಟಿಸಿ ಬಸ್‌ಗಳ ಮೇಲೆ ದಾಳಿ ಮಾಡುವುದು ಸಮಾಜದ ಮೇಲಿನ ದಾಳಿಯಾಗಿದೆ. ಇಂತಹ ಘಟನೆಗಳನ್ನು ಟಿಎಸ್‌ಆರ್‌ಟಿಸಿ ಆಡಳಿತ ಸಹಿಸುವುದಿಲ್ಲ. ಟಿಎಸ್​ಆರ್​ಟಿಸಿ ಬಸ್ಸುಗಳು ಸಾರ್ವಜನಿಕ ಆಸ್ತಿ. ಅವರನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ