AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಾಪ ಅಂತ ಸುಮ್ಮನಿದ್ದೆ, ನಮ್ಮ ಬುಡಕ್ಕೆ ಬಂದರೆ ಹೊಡೆಯಲೇಬೇಕು’: ಸಂಗೀತಾ ಬಗ್ಗೆ ಕಾರ್ತಿಕ್​ ಕಿಡಿ

ಕಾರ್ತಿಕ್​ ಮಹೇಶ್​ ಮತ್ತು ವಿನಯ್​ ಗೌಡ ಅವರು ಈಗ ಸ್ನೇಹ ಬೆಳೆಸಿಕೊಂಡಿದ್ದಾರೆ. ಅವರಿಬ್ಬರು ಕೈ ಜೋಡಿಸಿರುವುದಕ್ಕೆ ಸಂಗೀತಾ ಶೃಂಗೇರಿ ಅವರು ಒಂಟಿ ಆದಂತೆ ಆಗಿದೆ. ಸದ್ಯ ಅವರ ಡ್ರೋನ್​ ಪ್ರತಾಪ್​ ಜೊತೆ ಸೇರಿಕೊಂಡಿದ್ದಾರೆ. ವಿನಯ್​ ಗೌಡ ಅವರು ರಾಜಕೀಯ ಮಾಡುವುದನ್ನು ಮುಂದುವರಿಸಿದ್ದಾರೆ.

‘ಪಾಪ ಅಂತ ಸುಮ್ಮನಿದ್ದೆ, ನಮ್ಮ ಬುಡಕ್ಕೆ ಬಂದರೆ ಹೊಡೆಯಲೇಬೇಕು’: ಸಂಗೀತಾ ಬಗ್ಗೆ ಕಾರ್ತಿಕ್​ ಕಿಡಿ
ಕಾರ್ತಿಕ್​ ಮಹೇಶ್​, ಸಂಗೀತಾ ಶೃಂಗೇರಿ
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ|

Updated on:Dec 19, 2023 | 6:58 AM

Share

ಕಾರ್ತಿಕ್​ ಮಹೇಶ್​ ಮತ್ತು ಸಂಗೀತಾ ಶೃಂಗೇರಿ (Sangeetha Sringeri) ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋನಲ್ಲಿ ಸಖತ್​ ಕ್ಲೋಸ್​ ಆಗಿದ್ದರು. ಆದರೆ ದಿನ ಕಳೆದಂತೆ ಎಲ್ಲವೂ ಬದಲಾಗಿದೆ. ಈಗ ಅವರ ನಡುವೆ ಯಾವುದೂ ಮೊದಲಿನಂತೆ ಇಲ್ಲ. ಕಾರ್ತಿಕ್​ ಮಹೇಶ್​ (Karthik Mahesh) ಅವರನ್ನು ಬಿಟ್ಟು ಸಂಗೀತಾ ದೂರ ಸರಿದಿದ್ದಾರೆ. ಈಗ ಅವರು ಡ್ರೋನ್​ ಪ್ರತಾಪ್​ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಅಲ್ಲದೇ ಇತ್ತೀಚೆಗಿನ ಎಪಿಸೋಡ್​ನಲ್ಲಿ ಕಾರ್ತಿಕ್​ ಅವರು ಸಂಗೀತಾ ಅವರ ಪ್ರತಿಕೃತಿಗೆ ಸುತ್ತಿಗೆಯಿಂದ ಹೊಡೆದಿದ್ದರು. ಆ ಬಳಿಕ ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ವಾತಾವರಣ ಬದಲಾಗಿದೆ. ಅದರ ಬಗ್ಗೆ ವಿನಯ್​ ಗೌಡ ಮತ್ತು ಕಾರ್ತಿಕ್​ ಮಹೇಶ್​ ಚರ್ಚೆ ಮಾಡಿದ್ದಾರೆ.

ಕಾರ್ತಿಕ್​ ಮಹೇಶ್​ ಅವರು ಸಂಗೀತಾ ಅವರ ಪ್ರತಿಕೃತಿಯ ಮಡಿಕೆಗೆ ಫೋಟೋವನ್ನು ಅಂಟಿಸಿ ಒಡೆದಿದ್ದರ ಪರಿಣಾಮ ಯಾವ ರೀತಿ ಆಗಿದೆ ಎಂಬುದನ್ನು ವಿನಯ್​ ಗೌಡ ವಿವರಿಸಿದರು. ‘ಮಡಕೆ ಒಡೆದು ದಾರಿಯಲ್ಲಿ ಇರುವ ಹಾವನ್ನು ಬಿಟ್ಟುಕೊಂಡಂತೆ ಆಗಿದೆ. ಅದು ಬರೀ ಹಾವಲ್ಲ, ಅನಾಗೊಂಡ’ ಎಂದರು ವಿನಯ್​. ಅದಕ್ಕೆ ಕಾರ್ತಿಕ್​ ಮಹೇಶ್​ ತಮ್ಮ ಅನಿಸಿಕೆ ತಿಳಿಸಿದರು.

ಇದನ್ನೂ ಓದಿ: ಸಂಗೀತಾ ಶೃಂಗೇರಿಗೆ ಈ ವಾರ ತುಂಬ ಕಷ್ಟ ಆಗಲಿದೆ ಬಿಗ್​ ಬಾಸ್​ ಆಟ

‘ಪಾಪ ಅಂತ ಸುಮ್ಮನೆ ಇದ್ದೆ. ಆದರೆ ನಮ್ಮ ಬುಡಕ್ಕೆ ಬಂದಾಗ ಹೊಡೆಯಲೇ ಬೇಕು’ ಎಂದು ಕಾರ್ತಿಕ್​ ಮಹೇಶ್​ ಹೇಳಿದ್ದಾರೆ. ಆರಂಭದ ವಾರಗಳಲ್ಲಿ ಸಂಗೀತಾ ಶೃಂಗೇರಿ ಜೊತೆ ಕಾರ್ತಿಕ್​ ಸ್ನೇಹ ಬೆಳೆಸಿದ್ದರು. ಇಬ್ಬರೂ ಸದಾ ಕಾಲ ಜೊತೆಯಾಗಿ ಸಮಯ ಕಳೆಯುತ್ತಿದ್ದರು. ದಿನ ಕಳೆದಂತೆ ಆ ಸ್ನೇಹ ಗಟ್ಟಿ ಆಯಿತು. ಇಬ್ಬರೂ ಸೇರಿಕೊಂಡು ವಿನಯ್​ ವಿರುದ್ಧ ತಿರುಗಿ ಬಿದ್ದಿದ್ದರು. ಈಗ ಎಲ್ಲವೂ ಉಲ್ಟಾ ಆಗಿದೆ.

ಇದನ್ನೂ ಓದಿ: ‘ಬಿಗ್​ ಬಾಸ್​ ಫಿನಾಲೆಯ ಟಾಪ್​ 2 ಸ್ಥಾನಕ್ಕೆ ಸಂಗೀತಾ ಬರಲ್ಲ’: ಪವಿ ಪೂವಪ್ಪ ನೇರ ಅಭಿಪ್ರಾಯ

ಕಾರ್ತಿಕ್​ ಮಹೇಶ್​ ಮತ್ತು ವಿನಯ್​ ಗೌಡ ಅವರು ಈಗ ಒಡನಾಟ ಬೆಳೆಸಿಕೊಂಡಿದ್ದಾರೆ. ಅವರಿಬ್ಬರು ಕೈ ಜೋಡಿಸಿರುವುದಕ್ಕೆ ಸಂಗೀತಾ ಶೃಂಗೇರಿ ಅವರು ಒಂಟಿ ಆದಂತೆ ಆಗಿದೆ. ಸದ್ಯ ಅವರ ಡ್ರೋನ್​ ಪ್ರತಾಪ್​ ಜೊತೆ ಸೇರಿಕೊಂಡಿದ್ದಾರೆ. ವಿನಯ್​ ಗೌಡ ಅವರು ರಾಜಕೀಯ ಮಾಡುವುದನ್ನು ಮುಂದುವರಿಸಿದ್ದಾರೆ. ‘ಇನ್ಮೇಲೆ ರಾಜಕೀಯ ಮಾಡೋಣ’ ಎಂದು ಅವರು ನಮ್ರತಾ ಗೌಡ ಮತ್ತು ತನಿಷಾ ಕುಪ್ಪಂಡ ಜೊತೆ ಸೇರಿ ನಿರ್ಧಾರ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:42 pm, Mon, 18 December 23

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್