ಬಕೆಟ್ ಹಿಡಿತೀಯ ಎಂದಿದ್ದ ಸಂಗೀತಾಗೆ ಕಾರ್ತಿಕ್ ಸುತ್ತಿಗೆ ಏಟು; ಬಿಗ್ ಬಾಸ್ ಸದಸ್ಯರಿಗೆ ದೊಡ್ಡ ಶಾಕ್
‘ವಿನಯ್ಗೆ ಕಾರ್ತಿಕ್ ಬಕೆಟ್ ಹಿಡಿಯುತ್ತಾನೆ’ ಎಂದು ಸಂಗೀತಾ ಶೃಂಗೇರಿ ಅವರು ಈ ಮೊದಲು ಹೇಳಿದ್ದರು. ಅದಕ್ಕೆ ಕಾರ್ತಿಕ್ ಕೋಪಗೊಂಡಿದ್ದಾರೆ. ಕಿಚ್ಚ ಸುದೀಪ್ ಎದುರಲ್ಲೇ ಕಾರ್ತಿಕ್ ಮಹೇಶ್ ಕೋಪ ತೋರಿಸಿದ್ದಾರೆ. ಸುತ್ತಿಗೆ ಹಿಡಿದುಕೊಂಡು ಸಂಗೀತಾ ವಿರುದ್ಧ ಅವರು ಆರ್ಭಟಿಸಿದ್ದ ನೋಡಿ ಎಲ್ಲರಿಗೂ ಶಾಕ್ ಆಗಿದೆ.
‘777 ಚಾರ್ಲಿ’ ಸಿನಿಮಾ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಬಿಗ್ ಬಾಸ್ ಮನೆಯಲ್ಲಿ ನಟ ಕಾರ್ತಿಕ್ ಮಹೇಶ್ ಜೊತೆ ಕ್ಲೋಸ್ ಆಗಿದ್ದರು. ಆದರೆ 10ನೇ ವಾರದಲ್ಲಿ ಅವರ ನಡುವೆ ಬಿರುಕು ಮೂಡಿದೆ. ಸಂಗೀತಾ ಇಲ್ಲದೇ ಕಾರ್ತಿಕ್ ಮಹೇಶ್ (Karthik Mahesh) ಇಲ್ಲ ಎಂದು ಕೆಲವರು ಆಡಿಕೊಂಡ ಮಾತನ್ನು ಸುಳ್ಳು ಮಾಡುವ ಸಲುವಾಗಿ ಕಾರ್ತಿಕ್ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ‘ವಿನಯ್ಗೆ ಕಾರ್ತಿಕ್ ಬಕೆಟ್ ಹಿಡಿಯುತ್ತಾನೆ’ ಎಂದು ಸಂಗೀತಾ ಈ ಮೊದಲು ಹೇಳಿದ್ದರು. ಅದಕ್ಕೆ ಕಾರ್ತಿಕ್ ಕೋಪಗೊಂಡಿದ್ದಾರೆ. ಸಂಗೀತಾ ಅವರ ಪ್ರತಿಕೃತಿಗೆ ಸುತ್ತಿಗೆಯಿಂದ ಹೊಡೆಯುವ ಮೂಲಕ ಕಾರ್ತಿಕ್ ಕೋಪ ತೀರಿಸಿಕೊಂಡಿದ್ದಾರೆ. ಇದರಿಂದ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಇರುವ ಎಲ್ಲ ಸ್ಪರ್ಧಿಗಳಿಗೆ ಶಾಕ್ ಆಗಿದೆ. ಈ ಸಂಚಿಕೆ ಡಿಸೆಂಬರ್ 17ರಂದು ರಾತ್ರಿ 9 ಗಂಟೆಗೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕವೂ ಶೋ ವೀಕ್ಷಿಸಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು

