‘ಬಿಗ್ ಬಾಸ್ ಫಿನಾಲೆಯ ಟಾಪ್ 2 ಸ್ಥಾನಕ್ಕೆ ಸಂಗೀತಾ ಬರಲ್ಲ’: ಪವಿ ಪೂವಪ್ಪ ನೇರ ಅಭಿಪ್ರಾಯ
‘ಸಂಗೀತಾ ಶೃಂಗೇರಿ ಅವರ ಮನಸ್ಸು ಆಟದಲ್ಲಿ ಇಲ್ಲ. ಮೂರು ವಾರದಿಂದ ಅವರ ಆಟ ಡಲ್ ಆಗಿದೆ. ಅವರು ಬೇರೆ ಎಲ್ಲೋ ಕಳೆದು ಹೋಗಿರುತ್ತಾರೆ. ಮನೆಯಲ್ಲಿ ಇದ್ದವರಿಗೆ ಇದು ಗೊತ್ತಾಗುತ್ತಿದೆ’ ಎಂದು ಪವಿ ಪೂವಪ್ಪ ಅವರು ಹೇಳಿದ್ದಾರೆ. ಟಾಪ್ 2 ಸ್ಥಾನಕ್ಕೆ ಬರುವ ಸ್ಪರ್ಧಿಗಳು ಯಾರು ಎಂಬ ಬಗ್ಗೆಯೂ ಅವರು ಮಾತನಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ರಿಯಾಲಿಟಿ ಶೋನಿಂದ ಪವಿ ಪೂವಪ್ಪ ಅವರು ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ಅವರು ಸಂದರ್ಶನ ನೀಡಿದ್ದಾರೆ. ಬಿಗ್ ಬಾಸ್ ಫಿನಾಲೆಗೆ ಬರುವ ಸ್ಪರ್ಧಿಗಳು ಯಾರು ಎಂಬ ಬಗ್ಗೆ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಮೂರು ವಾರದಿಂದ ಸಂಗೀತಾ ಶೃಂಗೇರಿ (Sangeetha Sringeri) ಆಟ ಡಲ್ ಆಗಿದೆ. ಹಾಗಾಗಿ ಅವರು ಟಾಪ್ 3 ಸ್ಥಾನದಲ್ಲಿ ಕೂಡ ಇರಲ್ಲ. ವಿನಯ್ ಗೌಡ ಮತ್ತು ಕಾರ್ತಿಕ್ ಮಹೇಶ್ ಅವರು ಟಾಪ್ 2 ಸ್ಥಾನಕ್ಕೆ ಬರುತ್ತಾರೆ. ಸಂಗೀತಾ ಅವರ ಮನಸ್ಸು ಆಟದಲ್ಲಿ ಇಲ್ಲ. ಅವರು ಬೇರೆ ಎಲ್ಲೋ ಕಳೆದು ಹೋಗಿರುತ್ತಾರೆ. ಇಡೀ ದಿನ ಬಾತ್ರೂಮ್ನಲ್ಲಿ ಕುಳಿತಿರುತ್ತಾರೆ. ಮನೆಯಲ್ಲಿ ಇದ್ದವರಿಗೆ ಇದು ಗೊತ್ತಾಗುತ್ತಿದೆ’ ಎಂದು ಪವಿ (Pavi Poovappa) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
