Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಬಿಗ್​ಬಾಸ್ ಫೈನಲಿಸ್ಟ್​ಗಳಿವರು: ರೈತನ ಮಗ ಚಾಂಪಿಯನ್

Bigg Boss Telugu: ಬಿಗ್​ಬಾಸ್ ತೆಲುಗು ಸೀಸನ್ 7ರ ಫೈನಲಿಸ್ಟ್​ಗಳು ಯಾರ್ಯಾರು? ಅಂತಿಮವಾಗಿ ಗೆದ್ದಿದ್ದು ಯಾರು?

ತೆಲುಗು ಬಿಗ್​ಬಾಸ್ ಫೈನಲಿಸ್ಟ್​ಗಳಿವರು: ರೈತನ ಮಗ ಚಾಂಪಿಯನ್
ಬಿಗ್​ಬಾಸ್ ತೆಲುಗು
Follow us
ಮಂಜುನಾಥ ಸಿ.
|

Updated on: Dec 17, 2023 | 7:17 PM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಪ್ರಾರಂಭವಾಗಿ 60 ದಿನಗಳಿಗೂ ಹೆಚ್ಚು ಸಮಯವಾಗಿದೆ. ಕನ್ನಡ ಬಿಗ್​ಬಾಸ್ ಸೀಸನ್ 10 ಪ್ರಾರಂಭವಾಗುವುದಕ್ಕೂ ಮುನ್ನ, ತೆಲುಗು ಬಿಗ್​ಬಾಸ್ ಆರಂಭವಾಗಿತ್ತು. ಇದೀಗ ತೆಲುಗು ಬಿಗ್​ಬಾಸ್ ಕ್ಲೈಮ್ಯಾಕ್ಸ್​ಗೆ ಬಂದಿದೆ. ತೆಲುಗು ಬಿಗ್​ಬಾಸ್ ತೆಲುಗು ಸೀಸನ್ 7ರಲ್ಲಿ ಬರೋಬ್ಬರಿ 19 ಸ್ಪರ್ಧಿಗಳು ಭಾಗಿಯಾಗಿದ್ದರು. ಆದರೆ ಅಂತಿಮವಾಗಿ ಆರು ಮಂದಿ ಸ್ಪರ್ಧಿಗಳು ಫೈನಲಿಸ್ಟ್​ಗಳಾಗಿ ಉಳಿದಿದ್ದಾರೆ.

ಸೆಪ್ಟೆಂಬರ್ 3 ರಂದು ತೆಲುಗು ಬಿಗ್​ಬಾಸ್ ಸೀಸನ್ 7 ಆರಂಭವಾಗಿತ್ತು. ಬರೋಬ್ಬರಿ 19 ಮಂದಿ ಸ್ಪರ್ಧಿಗಳು ಶೋನಲ್ಲಿ ಭಾಗಿಯಾಗಿದ್ದರು. ಅವರಲ್ಲೇ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಬಂದಿದ್ದರು. ಅಲ್ಲಿಗೆ ಒಟ್ಟು 21 ಸ್ಪರ್ಧಿಗಳು ಈ ಬಾರಿಯ ಬಿಗ್​ಬಾಸ್ ತೆಲುಗು ಸೀಸನ್ 7ರಲ್ಲಿ ಆಡಿದರು. ಇಂದು (ಡಿಸೆಂಬರ್ 17) ಕ್ಕೆ ಫಿನಾನೆ ಎಪಿಸೋಡ್ ಪ್ರಸಾರವಾಗಲಿದ್ದು, ಆರು ಮಂದಿ ಫೈನಲಿಸ್ಟ್​ಗಳು ಗೆಲುವಿಗೆ ಹತ್ತಿರದಲ್ಲಿದ್ದಾರೆ.

ಅಮರ್​ದೀಪ್, ಪ್ರಶಾಂತ್, ಅರ್ಜುನ್, ಶಿವಾಜಿ, ಯವರ್, ಪ್ರಿಯಾಂಕಾ ಅವರುಗಳು ಫೈನಲ್​ಗೆ ಬಂದಿದ್ದಾರೆ. ಇವರಲ್ಲಿ ಒಬ್ಬರು ಆರಂಭದಲ್ಲಿಯೇ ಎಲಿಮಿನೇಟ್ ಆಗಲಿದ್ದಾರೆ. ಇನ್ನುಳಿದ ಐವರಲ್ಲಿ ಮತ್ತಿಬ್ಬರು ಎಲಿಮಿನೇಟ್ ಆಗಿ ಅಂತಿಮವಾಗಿ ಮೂವರು ಉಳಿಯಲಿದ್ದಾರೆ. ಅದರಲ್ಲಿ ಇಬ್ಬರು ಮಾತ್ರವೇ ಮನೆಯಿಂದ ಹೊರಗೆ ವೇದಿಕೆ ಮೇಲೆ ಬರಲಿದ್ದಾರೆ. ಆ ಇಬ್ಬರಲ್ಲಿ ಒಬ್ಬರನ್ನು ವಿನ್ನರ್ ಆಗಿ ನಟ ನಾಗಾರ್ಜುನ ಘೋಷಿಸಲಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಪಾಸ್ ಯಾರು? ಫೇಲ್ ಯಾರು? ಜಸ್ಟ್ ಪಾಸ್ ಆದವರ್ಯಾರು?

ಭಾನುವಾರದ ಎಪಿಸೋಡ್​ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಹರಿದಾಡುತ್ತಿರುವ ಕೆಲವು ಸುದ್ದಿಗಳ ಪ್ರಕಾರ, ಬಿಗ್​ಬಾಸ್ ಮನೆಯಲ್ಲಿದ್ದ ರೈತ ಯುವಕ ಪ್ರಶಾಂತ್ ಈ ಬಾರಿಯ ಬಿಗ್​ಬಾಸ್ ತೆಲುಗು ವಿನ್ನರ್ ಆಗಿದ್ದಾನೆ ಎನ್ನಲಾಗುತ್ತಿದೆ. ಪ್ರಶಾಂತ್ ಬಹಳ ಅಮಾಯಕ, ಪಕ್ಕಾ ಹಳ್ಳಿ ಯುವಕ, ಆದರೆ ಟಾಸ್ಕ್​ಗೆ ಇಳಿದರೆ ರಾಕ್ಷಸನಂತೆ ಆಡುತ್ತಿದ್ದ. ಆತನ ಅಮಾಯಕತೆ, ಟಾಸ್ಕ್​ ಗೆಲ್ಲಲು ಜೀವವನ್ನೇ ಒತ್ತೆ ಇಡುವ ನಿಷ್ಠೆ, ಯಾರಿಗೂ ಕೇಡು ಬಯಸದೇ ಆಡುತ್ತಿದ್ದ ರೀತಿಗೆ ಮನಸೋತು, ತೆಲುಗು ಬಿಗ್​ಬಾಸ್ ವೀಕ್ಷಕರು ಪ್ರಶಾಂತ್​ನನ್ನು ಗೆಲ್ಲಿಸಿದ್ದಾರೆ.

ಹಿರಿಯ ನಟ ಶಿವಾಜಿ ಸಹ ಈ ಬಾರಿ ಗೆಲ್ಲುವ ಸ್ಪರ್ಧಿ ಎನ್ನಲಾಗಿತ್ತು. ಬಹಳ ಚೆನ್ನಾಗಿಯೇ ಶಿವಾಜಿ ಆಡಿಕೊಂಡು ಬಂದಿದ್ದರು. ಶಿವಾಜಿ, ಮನೆಯ ಸದಸ್ಯರನ್ನು ಹಿರಿಯಣ್ಣನಂತೆ ಬೆಂಬಲಿಸಿ, ಎಲ್ಲರೊಟ್ಟಿಗೂ ಚೆನ್ನಾಗಿದ್ದರು. ಬಿಗ್​ಬಾಸ್​ನ ಅತ್ಯುತ್ತಮ ಕ್ಯಾಪ್ಟನ್ ಎನ್ನಿಸಕೊಂಡಿದ್ದರು ಸಹ. ಆದರೆ ಅಂತಿಮವಾಗಿ ಪ್ರಶಾಂತ್ ಗೆದ್ದಿದ್ದಾರೆ ಎನ್ನಲಾಗುತ್ತಿದೆ. ಗೆದ್ದವರಿಗೆ ಎಷ್ಟು ಹಣ ಸಿಕ್ಕಿತು, ರನ್ನರ್​ ಅಪ್​ಗೆ ಯಾವ ಉಡುಗೊರೆಗಳು ಸಿಕ್ಕವು ಎಂಬುದು ಇಂದಿನ ಎಪಿಸೋಡ್​ ಮುಗಿದ ಬಳಿಕ ತಿಳಿದು ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ