ಪರಸ್ಪರರ ತಲೆ ಒಡೆದ ಸ್ಪರ್ಧಿಗಳು, ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?
Bigg Boss Kannada: ಬಿಗ್ಬಾಸ್ ಸ್ಪರ್ಧಿಗಳು ಪರಸ್ಪರರ ತಲೆ ಒಡೆದುಕೊಂಡರು. ಅಂದಹಾಗೆ ಅತಿ ಹೆಚ್ಚು ಏಟು ಬಿದ್ದಿದ್ದು ಯಾರಿಗೆ?
ಬಿಗ್ಬಾಸ್ (Bigg Boss) ಮನೆಯಲ್ಲಿ ಜಗಳ, ಕೂಗಾಟ, ಅರಚಾಟ, ಚಾಡಿ, ದೂರುಗಳೇ ಹೆಚ್ಚು. ಆದರೆ ಕಳೆದ ವಾರದ ಟಾಸ್ಕ್ ಇದಕ್ಕೆಲ್ಲ ಹೆಚ್ಚು ಅವಕಾಶ ಕೊಟ್ಟಿರಲಿಲ್ಲ. ಶಾಲೆಯ ವಾತಾವರಣ ಮರುಸೃಷ್ಟಿ ಮಾಡುವ ಟಾಸ್ಕ್ ಆದ್ದರಿಂದ ಸ್ಪರ್ಧಿಗಳೆಲ್ಲ ಮಕ್ಕಳಂತೆ ವರ್ತಿಸಿ, ಅಗ್ರೆಷನ್ಗೆ ಅವಕಾಶ ಇರಲಿಲ್ಲ. ಇದು ವಿನಯ್ ಹಾಗೂ ಇನ್ನೂ ಕೆಲವರಿಗೆ ಬೇಸರವೂ ಆಯಿತು. ಹಾಗಾಗಿ ವೀಕೆಂಡ್ನಲ್ಲಿ ಸುದೀಪ್ ಅವರು ಒಂದು ವಿಶೇಷ ಆಟ ಆಡಿಸಿದರು. ಆ ಆಟದಲ್ಲಿ ಮನೆಯ ಸ್ಪರ್ಧಿಗಳು ತಮ್ಮ ಕೋಪವನ್ನು ಪ್ರದರ್ಶಿಸಿದರು, ತಮಗಾಗದವರ ತಲೆ ಒಡೆದರು.
ಒಂದು ಬೆದುರು ಬೊಂಬೆಯನ್ನು ಮನೆಯಲ್ಲಿ ನಿಲ್ಲಿಸಲಾಗಿತ್ತು, ಅದರ ಮುಖದ ಭಾಗಕ್ಕೆ ಮಡಕೆಯೊಂದನ್ನು ಹಾಕಲಾಗಿತ್ತು. ಮನೆಯ ಎಲ್ಲ ಸ್ಪರ್ಧಿಗಳ ಚಿತ್ರಗಳನ್ನು ಅದರ ಪಕ್ಕದಲ್ಲಿಯೇ ಟ್ರೇ ನಲ್ಲಿ ಇಡಲಾಗಿತ್ತು. ಯಾರಿಗೆ ಯಾರ ಬಗ್ಗೆ ಸಿಟ್ಟು ಇದೆಯೋ ಅವರ ಚಿತ್ರವನ್ನು ಬೆದರ ಬೊಂಬೆಯ ಮಡಿಕೆ ಮುಖಕ್ಕೆ ಹಾಕಿ ಅದನ್ನು ಸುತ್ತಿಗೆಯಿಂದ ಒಡೆಯಬೇಕಿತ್ತು. ಒಬ್ಬ ಸ್ಪರ್ಧಿಗಳು ತಲಾ ಇಬ್ಬರು ಸ್ಪರ್ಧಿಗಳ ತಲೆ ಒಡೆಯಬಹುದಾಗಿತ್ತು.
ಇದನ್ನೂ ಓದಿ:ಬಕೆಟ್ ಹಿಡಿತೀಯ ಎಂದಿದ್ದ ಸಂಗೀತಾಗೆ ಕಾರ್ತಿಕ್ ಸುತ್ತಿಗೆ ಏಟು; ಬಿಗ್ ಬಾಸ್ ಸದಸ್ಯರಿಗೆ ದೊಡ್ಡ ಶಾಕ್
ವಿನಯ್ ಯಥಾವತ್ತು, ಸಂಗೀತಾ ಹಾಗೂ ಡ್ರೋನ್ ಪ್ರತಾಪ್ರ ತಲೆ ಒಡೆದರು. ನಮ್ರತಾ ಸಹ ಅದನ್ನೇ ಮಾಡಿದರು. ಸಂಗೀತಾ, ವಿನಯ್ ಹಾಗೂ ತುಕಾಲಿ ಅವರ ಚಿತ್ರಗಳನ್ನು ಅಂಟಿಸಿ ಮಡಿಕೆ ಒಡೆದರು. ಡ್ರೋನ್ ಪ್ರತಾಪ್ ಸಹ ವಿನಯ್ ಹಾಗೂ ಮೈಖಲ್ರ ಚಿತ್ರ ಅಂಟಿಸಿ ಒಡೆದರು. ತುಕಾಲಿ ಸಂತು, ಡ್ರೋನ್ ಪ್ರತಾಪ್ ಹಾಗೂ ಸಂಗೀತಾರ ಮಡಿಕೆ ಒಡೆದರು. ವರ್ತೂರು ಸಂತು, ಕಾರ್ತಿಕ್ ಹಾಗೂ ವಿನಯ್ರ ಮಡಿಕೆ ಒಡೆದರು. ಅವಿ ಅವರು ನಮ್ರತಾ ಹಾಗೂ ವಿನಯ್ರ ಮಡಿಕೆ ಒಡೆದರು. ಕೊನೆಗೆ ಪವಿ, ತುಕಾಲಿ ಒಬ್ಬರದ್ದೇ ಮಡಿಕೆ ಒಡೆದರು. ವಿಶೇಷವಾಗಿ ಕಂಡಿದ್ದೆಂದರೆ ಕಾರ್ತಿಕ್, ತಮ್ಮ ಆತ್ಮೀಯರಾಗಿದ್ದ ಸಂಗೀತಾರ ಚಿತ್ರ ಅಂಟಿಸಿ ಮಡಿಕೆ ಒಡೆದರು. ಮನೆ ಮಂದಿಗೆ ಇದು ಶಾಕಿಂಗ್ ಎನಿಸಿತು.
ಸಂಗೀತಾ ಮತ್ತು ಡ್ರೋನ್ ಪ್ರತಾಪ್ರಿಗೆ ತಲಾ ಐದು ಬಾರಿ ಏಟು ಬಿದ್ದಿತು. ಮನೆಯಲ್ಲಿ ಅತಿ ಹೆಚ್ಚು ಏಟು ಬಿದ್ದಿದ್ದು ಅವರಿಗೆ. ನಂತರದ ಸ್ಥಾನ ವಿನಯ್ ಹಾಗೂ ಮೈಖಲ್ ಅವರಿಗೆ. ಅವರಿಬ್ಬರಿಗೂ ತಲಾ ನಾಲ್ಕು ಏಟು ಬಿತ್ತು. ತುಕಾಲಿ, ಕಾರ್ತಿಕ್ಗೆ ಎರಡು ಏಟು ಬಿತ್ತು.ತನಿಷಾಗೆ ಒಂದು ಬಿತ್ತು. ಅವಿ, ಪವಿ, ಸಿರಿ ಅವರಿಗೆ ಯಾವುದೇ ಏಟು ಬೀಳಲಿಲ್ಲ. ಆದರೆ ಈ ಪ್ರಕ್ರಿಯೆಯಿಂದ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಇದ್ದ ಗೆಳೆತನ ಸಂಪೂರ್ಣವಾಗಿ ಮುಗಿದಂತೆ ಕಾಣುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ