ಬಿಗ್​ಬಾಸ್ ಮನೆಯಲ್ಲಿ ಪಾಸ್ ಯಾರು? ಫೇಲ್ ಯಾರು? ಜಸ್ಟ್ ಪಾಸ್ ಆದವರ್ಯಾರು?

Bigg Boss: ಬಿಗ್​ಬಾಸ್​ ಮನೆಯ ಪರೀಕ್ಷೆಯಲ್ಲಿ ಪಾಸ್ ಆದವರು ಯಾರು, ಫೇಲ್ ಆದವರು ಯಾರು, ಜಸ್ಟ್ ಪಾಸ್ ಮಾತ್ರ ಆದವರ್ಯಾರು?

ಬಿಗ್​ಬಾಸ್ ಮನೆಯಲ್ಲಿ ಪಾಸ್ ಯಾರು? ಫೇಲ್ ಯಾರು? ಜಸ್ಟ್ ಪಾಸ್ ಆದವರ್ಯಾರು?
Follow us
ಮಂಜುನಾಥ ಸಿ.
|

Updated on: Dec 16, 2023 | 11:50 PM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರಲ್ಲಿ ವಾರವೆಲ್ಲ ಶಾಲೆಯ ವಾತಾವರಣವನ್ನು ಮರುಸೃಷ್ಠಿಸಲಾಗಿತ್ತು. ಮನೆಯ ಸ್ಪರ್ಧಿಗಳು ವಿದ್ಯಾರ್ಥಿಗಳಾಗಿ, ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದರು. ಶಿಕ್ಷಕರಾದವರು ಗಂಭೀರವಾಗಿದ್ದು ವಿದ್ಯಾರ್ಥಿಗಳು ಮಾಡುವ ತಲೆಹರಟೆಗಳನ್ನು ಸಹಿಸಿಕೊಂಡು ಅವರಿಗೆ ನೀಡಲಾಗಿದ್ದ ವಿಷಯವನ್ನು ಬೋಧಿಸಬೇಕಿತ್ತು, ವಿದ್ಯಾರ್ಥಿಗಳಾಗಿದ್ದವರು ತರಲೆ ಮಾಡುತ್ತಾ, ಕ್ರಿಯಾಶೀಲವಾಗಿ ವರ್ತಿಸಬೇಕಿತ್ತು. ಈ ಟಾಸ್ಕ್​ನಲ್ಲಿ ಮನೆಯ ಎಲ್ಲ ಸ್ಪರ್ಧಿಗಳು ಭಾಗಿಯಾಗಿದ್ದರು, ಆದರೆ ಕೆಲವರು ಮಾತ್ರವೇ ಚೆನ್ನಾಗಿ ಪ್ರದರ್ಶನ ನೀಡಿದರು.

ಶನಿವಾರದಂದು ವಾರದ ಪಂಚಾಯಿತಿಗೆ ಆಗಮಿಸಿದ್ದ ನಟ ಕಿಚ್ಚ ಸುದೀಪ್, ಮನೆಯ ಸದಸ್ಯರು ಈ ಟಾಸ್ಕ್ ಅನ್ನು ಆಡಿದ ರೀತಿಯನ್ನು ಟೀಕಿಸಿದರು. ರಾಕ್ಷಸರು-ಗಂಧರ್ವರು ಟಾಸ್ಕ್​ ಅನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಜಗಳವಾಡಿದ್ದ, ಕಿತ್ತಾಡಿದ್ದ ನೀವುಗಳು, ಇದೊಂದು ಕ್ರಿಯಾಶೀಲವಾದ ಟಾಸ್ಕ್ ಅನ್ನು ಯಾಕೆ ಗಂಭೀರವಾಗಿ ಪರಿಗಣಿಸಲಿಲ್ಲ ಎಂಬ ಪ್ರಶ್ನೆ ಕೇಳಿದರು. ಬಹಳ ನಿರ್ಲಕ್ಷ್ಯದಿಂದ ಈ ಟಾಸ್ಕ್​ ಅನ್ನು ಆಡಿದಿರಿ, ಮನೆಯ ಎಷ್ಟೋ ಸದಸ್ಯರಿಗೆ ಟಾಸ್ಕ್​ ಸರಿಯಾಗಿ ಅರ್ಥವೂ ಆಗಲಿಲ್ಲ ಎಂದು ಜರಿದರು. ಅಲ್ಲದೆ, ಇಂಥಹಾ ಒಂದು ಬಹಳ ಒಳ್ಳೆಯ ಅವಕಾಶವನ್ನು ನೀವು ಮಿಸ್ ಮಾಡಿಕೊಂಡಿರಿ ಎಂದರು ಸಹ.

ಅಂತಿಮವಾಗಿ ಬೋರ್ಡ್ ಒಂದನ್ನು ಇಟ್ಟು, ಬಿಗ್​ಬಾಸ್ ಮನೆಯಲ್ಲಿ ಯಾರು ಪಾಸ್, ಯಾರು ಫೇಲ್ ಹಾಗೂ ಯಾರು ಜಸ್ಟ್ ಪಾಸ್ ಎಂದು ಮನೆಯ ಸದಸ್ಯರು ನಿರ್ಣಯಿಸುವಂತೆ ಹೇಳಿದರು. ಮನೆಯ ಸದಸ್ಯರೆಲ್ಲ ಬೋರ್ಡ್​ ಬಳಿ ಬಂದು ಪಾಸ್, ಫೇಲ್ ಹಾಗೂ ಜಸ್ಟ್ ಪಾಸ್ ಕಾಲಂಗಳಲ್ಲಿ ಚಿತ್ರಗಳನ್ನು ಅಂಟಿಸಿದರು. ಅದರ ಪ್ರಕಾರ, ಮನೆಯಲ್ಲಿ ಪಾಸ್ ಆಗಿರುವುದು ತುಕಾಲಿ ಸಂತು, ಜಸ್ಟ್ ಪಾಸ್ ಹಂತದಲ್ಲಿರುವುದು ಡ್ರೋನ್ ಪ್ರತಾಪ್, ಫೇಲ್ ಆಗಿರುವುದು ಅವಿ ಮತ್ತು ಪವಿ.

ಇದನ್ನೂ ಓದಿ:ಬಿಗ್​ಬಾಸ್ ಸೀಸನ್ 10ರ ಟಾಪ್ 5 ಯಾರು?​ ವಿನ್ನರ್ ಯಾರಾಗ್ತಾರೆ? ಸ್ನೇಹಿತ್ ಕೊಟ್ಟರು ಉತ್ತರ

ಫಲಿತಾಂಶದ ಬಳಿಕ ಮಾತನಾಡಿದ ಕಿಚ್ಚ ಸುದೀಪ್, ಇದೇ ರೀತಿಯ ಚಟುವಟಿಕೆಯೊಂದನ್ನು ಕೆಲವು ವಾರಗಳ ಹಿಂದೆ ಮಾಡಿದ್ದಾಗ ಅದರಲ್ಲಿ ತುಕಾಲಿಯ ಹೆಸರೇ ಬಂದಿರಲಿಲ್ಲ ಆದರೆ ಈಗ ಅವರು ಟಾಪ್ ಆಗಿದ್ದಾರೆ. ಡ್ರೋನ್ ಪ್ರತಾಪ್ ಟಾಪ್​ನಲ್ಲಿದ್ದವರು ಜಸ್ಟ್​ ಪಾಸ್​ ಆಗಲೂ ಕಷ್ಟಪಟ್ಟಿದ್ದಾರೆ. ಕಾರ್ತಿಕ್ ಹಾಗೂ ವಿನಯ್ ಪೂರ್ಣ ಪಾಸ್-ಪೂರ್ಣ ಫೇಲ್ ಅನ್ನಿಸಿಕೊಂಡಿಲ್ಲ. ನಮ್ರತಾ ಹೆಸರು ಪಾಸ್, ಫೇಲ್, ಜಸ್ಟ್ ಪಾಸ್ ಮೂರರಲ್ಲೂ ಇಲ್ಲ ಹಾಗಾಗಿ ಅವರೇ ಈ ಬಗ್ಗೆ ಹೆಚ್ಚಾಗಿ ಯೋಚಿಸಬೇಕಿದೆ ಎಂದರು.

ಈ ವಾರ ನಾಮಿನೇಟ್ ಆದವರಲ್ಲಿ ವಿನಯ್ ಅನ್ನು ಹೊರತುಪಡಿಸಿ ಇನ್ಯಾರನ್ನೂ ಸಹ ಸುದೀಪ್ ಸೇವ್ ಮಾಡಲಿಲ್ಲ. ಸಂಗೀತಾ, ಡ್ರೋನ್ ಪ್ರತಾಪ್, ಅವಿ, ಪವಿ, ಮೈಕಲ್, ಕಾರ್ತಿಕ್ ಅವರುಗಳಲ್ಲಿ ಯಾರು ಹೊರಗೆ ಹೋಗಲಿದ್ದಾರೆ ಎಂಬುದು ನಾಳೆ ಗೊತ್ತಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ