AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸಿದಿದ್ದ ಬಿಗ್​ಬಾಸ್ ಸ್ಪರ್ಧಿಗಳಿಗೆ ಸಖತ್ ಸರ್ಪ್ರೈಸ್ ಕೊಟ್ಟ ಕಿಚ್ಚ ಸುದೀಪ್

Bigg Boss: ಡ್ರೋನ್ ಪ್ರತಾಪ್ ಮುದ್ದೆ ಮಾಡಿದ್ದರಿಂದ ಮನೆಯ ಸದಸ್ಯರೆಲ್ಲ ಹಸಿದು ಕಂಗಾಲಾಗಿದ್ದರು, ಆಗ ಸುದೀಪ್ ಸಖತ್ ಸರ್ಪ್ರೈಸ್ ಒಂದನ್ನು ನೀಡಿದರು.

ಹಸಿದಿದ್ದ ಬಿಗ್​ಬಾಸ್ ಸ್ಪರ್ಧಿಗಳಿಗೆ ಸಖತ್ ಸರ್ಪ್ರೈಸ್ ಕೊಟ್ಟ ಕಿಚ್ಚ ಸುದೀಪ್
ಕಿಚ್ಚ ಸುದೀಪ್
ಮಂಜುನಾಥ ಸಿ.
|

Updated on:Dec 15, 2023 | 11:17 PM

Share

ಟಾಸ್ಕ್​ಗಳ ಶ್ರಮ, ಮನೆಯೊಳಗೆ ನಡೆಯುವ ಜಗಳಗಳಿಂದ ಮಾನಸಿಕವಾಗಿ ಜರ್ಜರಿತವಾಗುವ ಬಿಗ್​ಬಾಸ್ (Bigg Boss) ಮನೆಯ ಸದಸ್ಯರಿಗೆ ಆಗಾಗ್ಗೆ ಉತ್ಸಾಹ ತುಂಬಲು, ಭರವಸೆ ಮೂಡಿಸಲು ಆಗೊಮ್ಮೆ ಈಗೊಮ್ಮೆ ಸರ್ಪ್ರೈಸ್​ಗಳನ್ನು ಬಿಗ್​ಬಾಸ್ ನೀಡುತ್ತಿರುತ್ತಾರೆ. ಕೆಲವೊಮ್ಮೆ ಸೆಲೆಬ್ರಿಟಿಗಳು ಮನೆಗೆ ಬಂದು ಸದಸ್ಯರೊಟ್ಟಿಗೆ ಸಮಯ ಕಳೆಯುತ್ತಾರೆ, ಇನ್ನು ಕೆಲವು ಬಾರಿ ಮನೆಯ ಸದಸ್ಯರ ಸಂದೇಶಗಳು ಬರುತ್ತವೆ, ಮನೆಯ ಸದಸ್ಯರೇ ಬಂದು ಬಿಡುತ್ತಾರೆ, ಆದರೆ ಶುಕ್ರವಾರ ಅದ್ಭುತ ಸರ್ಪ್ರೈಸ್ ಅನ್ನೇ ಸುದೀಪ್ ನೀಡಿದ್ದಾರೆ. ಸುದೀಪ್ (Sudeep) ಕೊಟ್ಟ ಸರ್ಪ್ರೈಸ್​ಗೆ ಮನೆ ಮಂದಿ ಥ್ರಿಲ್ ಆಗಿದ್ದಾರೆ.

ಆಗಿದ್ದಿಷ್ಟು, ಈ ಬಾರಿಯೂ ಮನೆಯ ಸದಸ್ಯರು ಲಕ್ಷುರಿ ಬಜೆಟ್ ಗಳಿಸುವಲ್ಲಿ ವಿಫಲರಾದರು. ಹಾಗಾಗಿ ಕಡಿಮೆ ವಸ್ತುಗಳನ್ನೇ ಬಳಸಿ ಅಡುಗೆ ಮಾಡಬೇಕಿತ್ತು, ಅದು ಸಾಕಾಗುತ್ತಿರಲಿಲ್ಲ. ಆಗ ಡ್ರೋನ್ ಪ್ರತಾಪ್ ಹಾಗೂ ಇನ್ನು ಕೆಲವರು ರಾಗಿ ಹಿಟ್ಟಿದೆ ಮುದ್ದೆ ಮಾಡೋಣ ಎಂದರು. ಆದರೆ ಅದು ಅಂದಿನ ವಾರದ ಬಳಕೆಯ ಪಟ್ಟಿಯಲ್ಲಿರಲಿಲ್ಲ. ರಾಗಿ ಮುದ್ದೆ ಮಾಡುವ ಯೋಜನೆಗೆ ವಿನಯ್, ಸಿರಿ, ನಮ್ರತಾ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದರು. ಆದರೂ ತುಕಾಲಿ ಸಂತು, ಕಾರ್ತಿಕ್, ಮೈಖಲ್ ಬೆಂಬಲದಿಂದ ರಾಗಿ ಮುದ್ದೆ ಮಾಡಿಯೇ ಬಿಟ್ಟರು ಡ್ರೋನ್ ಪ್ರತಾಪ್.

ಆದರೆ ಆ ಬಳಿಕ ಬಿಗ್​ಬಾಸ್, ಗ್ಯಾಸ್ ಒಲೆಯನ್ನು ಆಫ್ ಮಾಡಿದರು. ಆಗ ಶುರುವಾಯ್ತು ಮನೆಯಲ್ಲಿ ಗಲಾಟೆ. ವಿನಯ್, ಡ್ರೋನ್ ಪ್ರತಾಪ್ ಮೇಲೆ ಉಗ್ರಾವತಾರ ತೋರಿದರು. ನನಗೆ ಊಟ ಬೇಕು ಎಂದು ಪಟ್ಟು ಹಿಡಿದರು. ಹಾಲು, ಹಣ್ಣು ಕೊಡುತ್ತೇನೆ ಎಂದರೆ ಅದಕ್ಕೂ ವಿನಯ್ ಒಪ್ಪಲಿಲ್ಲ. ಡ್ರೋನ್ ಪ್ರತಾಪ್ ಪರವಾಗಿ ಮುದ್ದೆ ತಿಂದಿದ್ದ ಕಾರ್ತಿಕ್, ತುಕಾಲಿ, ವರ್ತೂರು ಅವರುಗಳು ನಿಂತರಾದರೂ, ವಿನಯ್​ ಆಗಾಗ್ಗೆ ಪ್ರತಾಪ್​ಗೆ ಬೈಯ್ಯುತ್ತಲೇ ಇದ್ದರು. ಸಿರಿ, ನಮ್ರತಾ, ಇನ್ನಿತರರಿಗೂ ಹೊಟ್ಟೆ ಹಸಿದು, ಆಗಾಗ್ಗೆ ಪ್ರತಾಪ್​ ಮಾಡಿದ ತಪ್ಪನ್ನು ಚುಚ್ಚಿ ಆಡುತ್ತಲೇ ಇದ್ದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ನಗು, ಹಾಡು-ನೃತ್ಯ: ಸ್ಟಾರ್​ ವಿದ್ಯಾರ್ಥಿಗಳಾಗಿದ್ಯಾರು?

ಮನೆಯವರೆಲ್ಲ ಹಸಿದು, ಊಟಕ್ಕಾಗಿ ಕಾಯುತ್ತಿರುವಾಗ, ಮನೆಯ ಸದಸ್ಯರಿಗೆ ಸಂದೇಶಗಳು ಬರಲು ಆರಂಭವಾದವು. ಆ ಸಂದೇಶವನ್ನು ಸ್ವತಃ ಕಿಚ್ಚ ಸುದೀಪ್ ಕಳಿಸಿದ್ದರು. ಎಲ್ಲರಿಗೂ ಅವರವರ ಆಟದ ವೈಖರಿಯನ್ನು ಆಧರಿಸಿ ಸಂದೇಶಗಳನ್ನು ಕಿಚ್ಚ ಸುದೀಪ್ ಬರೆದು ಕಳಿಸಿದ್ದರು. ಸುದೀಪ್​ರಿಂದ ಬಂದ ಸಂದೇಶಗಳು, ಹಸಿದಿದ್ದ ಮನೆಯ ಸದಸ್ಯರಿಗೆ ತುಸು ನೆಮ್ಮದಿ ನೀಡಿತು.

ಬಳಿಕ ಎಲ್ಲರನ್ನೂ ಲಿವಿಂಗ್ ಏರಿಯಾದಲ್ಲಿನ ಸೋಫಾದಲ್ಲಿ ಕೂರಿಸಲಾಯ್ತು. ಜೈಲಿನಲ್ಲಿದ್ದ ಪವಿಯನ್ನೂ ರಿಲೀಸ್ ಮಾಡಲು ಸೂಚನೆ ಬಂತು. ಆಗ ಅಲ್ಲಿದ್ದ ಟಿವಿಯಲ್ಲಿ ಸುದೀಪ್ ಬಂದರು ಸಾಮಾನ್ಯವಾಗಿ ಅಲ್ಲ ಬದಲಿಗೆ ಶೆಫ್ ಆಗಿ! ಶೆಫ್​ ರೀತಿ ಏಪ್ರನ್ ತೊಟ್ಟು ಬಂದ ಸುದೀಪ್, ಮನೆಯವರಿಗಾಗಿ ತಾವು ಮಾಡಿದ ಅಡುಗೆಯ ವಿಡಿಯೋವನ್ನು ಟಿವಿಯಲ್ಲಿ ಪ್ರದರ್ಶಿಸಲಾಯ್ತು. ಸುದೀಪ್ ತಮ್ಮ ಕೈಯ್ಯಾರೆ ಊಟದ ಡಬ್ಬಿಗಳನ್ನು ಪ್ಯಾಕ್ ಮಾಡಿ, ಸಂದೇಶಗಳನ್ನು ಬರೆದು ಮನೆಯವರಿಗಾಗಿ ಕಳಿಸಿದರು.

ಮನೆಯ ಸದಸ್ಯರಿಗೆ ಅವರ ಆಯ್ಕೆಯ ಅನುಸಾರ ಊಟವನ್ನು ಸುದೀಪ್ ಕಳಿಸಿದ್ದರು. ಸಂಗೀತಾ ಅಂತೂ ಊಟ ಮಾಡುತ್ತಾ ಕಣ್ಣೀರು ಹಾಕಿದರು. ಹಸಿದು ಕಂಗಾಲಾಗಿದ್ದ ಮನೆಯ ಸದಸ್ಯರು ನಗು-ನಗುತ್ತಾ ಊಟ ಮಾಡಿದರು. ಮತ್ತೊಂದು ವಿಶೇಷವೆಂದರೆ, ಎಲ್ಲರೂ ಊಟ ಮಾಡುವ ಸಮಯದಲ್ಲಿ ಸ್ವತಃ ಸುದೀಪ್, ಲೈವ್ ಆಗಿ ಮಾತನಾಡಿದ್ದು, ಮನೆಯ ಸದಸ್ಯರಿಗೆ ಇನ್ನಷ್ಟು ಖುಷಿ ಕೊಟ್ಟಿತು. ಸುದೀಪ್ ಊಟದ ಮೇಲೆ ಬರೆದು ಕಳಿಸಿದ್ದ ಸಂದೇಶಗಳನ್ನು ಎಲ್ಲರೂ ಓದಿ-ಓದಿ ಖುಷಿ ಪಟ್ಟರು. ನಾಳೆ ಅಂದರೆ ಶನಿವಾರ ಸುದೀಪ್ ಅವರು ಮನೆಯ ಸದಸ್ಯರನ್ನು ಎದುರುಗೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:16 pm, Fri, 15 December 23

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?