ಬಿಗ್ ಬಾಸ್ ಮನೆಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ; ಪ್ರೋಮೋ ವೈರಲ್
ಮುನಾವರ್ ಅವರ ಅಭಿಮಾನಿಗಳು ಈ ಪ್ರೋಮೋನ ನೋಡಿ ಶಾಕ್ ಆಗಿದ್ದಾರೆ. ಒಂದೊಮ್ಮೆ ಆಯೆಷಾ ಬಿಗ್ ಬಾಸ್ ಮನೆ ಒಳಗೆ ಹೋದರೆ ಇನ್ನೂ ಏನೆಲ್ಲ ಡ್ರಾಮಾ ಆಗಬಹುದು ಎಂದು ಫ್ಯಾನ್ಸ್ ಊಹಿಸಿಕೊಳ್ಳುತ್ತಿದ್ದಾರೆ.
ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ‘ಬಿಗ್ ಬಾಸ್’ ರಿಯಾಲಿಟಿ ಶೋ ಪ್ರಸಾರ ಕಾಣುತ್ತಿದೆ. ಬಿಗ್ ಬಾಸ್ನಲ್ಲಿ ಪ್ರತಿ ಬಾರಿ ವೈಲ್ಡ್ ಕಾರ್ಡ್ ಎಂಟ್ರಿ ಸಾಕಷ್ಟು ಗಮನ ಸೆಳೆಯುತ್ತದೆ. ಈಗಾಗಲೇ ಕನ್ನಡ ಬಿಗ್ ಬಾಸ್ನಲ್ಲಿ (Bigg Boss) ಇಬ್ಬರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅದೇ ರೀತಿ ಹಿಂದಿಯಲ್ಲೂ ಆಗಿದೆ. ಈಗ ಹಿಂದಿ ಬಿಗ್ ಬಾಸ್ ಮನೆಗೆ ಒಬ್ಬರ ಎಂಟ್ರಿ ಆಗುತ್ತಿದೆ. ಅವರ ಹೆಸರು ಆಯೆಷಾ ಖಾನ್. ‘ಮುನಾವರ್ ಫಾರೂಕಿ ನನ್ನನ್ನು ಮದುವೆ ಆಗೋ ಭರವಸೆ ನೀಡಿದ್ದಾರೆ’ ಎಂದು ಅವರು ಹೇಳಿದ್ದಾರೆ. ಇದು ಮುನಾವರ್ ಅಭಿಮಾನಿಗಳಿಗೆ ಶಾಕ್ ನೀಡಿದೆ.
‘ನಾನು ಆಯೆಷಾ ಖಾನ್ ಅನ್ನೋದು ನಿಮಗೆ ಗೊತ್ತು. ಶೋನಲ್ಲಿ ಮುನಾವರ್ ಹೆಸರಿನ ಸ್ಪರ್ಧಿ ಇದ್ದಾರೆ. ನನಗೆ ಅವರ ಜೊತೆ ಲಿಂಕ್ ಇದೆ. ಅವರು ಹೇಗೆ ತೋರಿಸಿಕೊಳ್ಳುತ್ತಿದ್ದಾರೋ ಹಾಗಿಲ್ಲ. ಶೋಗೆ ಹೋಗೋ ಮೊದಲು ಅವರು ನನಗೆ ಐ ಲವ್ ಯೂ, ನಾನು ನಿನ್ನ ಮದುವೆ ಆಗುತ್ತೇನೆ ಎನ್ನುತ್ತಿದ್ದರು. ಅವರು ಹುಡುಗಿಯರನ್ನು ಅಪ್ರೋಚ್ ಮಾಡೋದೆ ಹೀಗೆ. ನನಗೆ ಅವರಿಂದ ಕ್ಷಮೆ ಬೇಕು. ನಾನು ಈ ಶೋಗೆ ಹೋಗೋಕೆ ಅದುವೇ ಮುಖ್ಯ ಕಾರಣ’ ಎಂದಿದ್ದಾರೆ ಆಯೆಷಾ. ಸದ್ಯ ಈ ಪ್ರೋಮೋ ಗಮನ ಸೆಳೆಯುತ್ತಿದೆ.
Wild card entry #biggboss17 #MunawarFaruqui pic.twitter.com/uP2FvNta3N
— WhoBrity (@whobrity) December 15, 2023
ಮುನಾವರ್ ಅವರ ಅಭಿಮಾನಿಗಳು ಈ ಪ್ರೋಮೋನ ನೋಡಿ ಶಾಕ್ ಆಗಿದ್ದಾರೆ. ಒಂದೊಮ್ಮೆ ಆಯೆಷಾ ಬಿಗ್ ಬಾಸ್ ಮನೆ ಒಳಗೆ ಹೋದರೆ ಇನ್ನೂ ಏನೆಲ್ಲ ಡ್ರಾಮಾ ಆಗಬಹುದು ಎಂದು ಫ್ಯಾನ್ಸ್ ಊಹಿಸಿಕೊಳ್ಳುತ್ತಿದ್ದಾರೆ. ‘ಮುನಾವರ್ ಅವರ ತಪ್ಪು ಇಲ್ಲ ಎನಿಸುತ್ತಿದೆ. ಜನಪ್ರಿಯತೆ ಪಡೆಯಲು ಆಯೆಷಾ ಈ ರೀತಿ ಮಾಡುತ್ತಿದ್ದಾರೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಸಿಕ್ಕಿದೆ ಕಿಚ್ಚ ಸುದೀಪ್ ಮಾಡಿದ ಅಡುಗೆ
ಮುನಾವರ್ ಅವರು ಬಿಗ್ ಬಾಸ್ಗೆ ತೆರಳಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚಿದೆ. ಮುನಾವರ್ ಅವರು ಬಿಗ್ ಬಾಸ್ ಗೆಲ್ಲಲಿ ಅನ್ನೋದು ಅನೇಕರ ಕೋರಿಕೆ. ಕಲರ್ಸ್ ಹಾಗೂ ಜಿಯೋ ಸಿನಿಮಾದಲ್ಲಿ ಹಿಂದಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ