ಗೆಟ್ ಔಟ್ ಎಂದ ಕಿಚ್ಚ ಸುದೀಪ್: ಮನೆ ಮಂದಿಗೆ ಕಾದಿದೆ ಗ್ರಹಚಾರ
Kichcha Sudeep: ನಟ ಕಿಚ್ಚ ಸುದೀಪ್ ಶನಿವಾರದ ಎಪಿಸೋಡ್ ಅನ್ನು ಸಿಟ್ಟಿನಿಂದಲೇ ಆರಂಭ ಮಾಡಿದ್ದಾರೆ. ಮನೆಯ ಸದಸ್ಯರಿಗೆ ಗೆಟೌಟ್ ಅಂದಿದ್ದಾರೆ.
ಬಿಗ್ಬಾಸ್ (BiggBoss) ಕನ್ನಡ ಸೀಸನ್ 10ರ ಮತ್ತೊಂದು ವೀಕೆಂಡ್ ಪಂಚಾಯ್ತಿ ಬಂದಿದೆ. ಸುದೀಪ್, ಪ್ರತಿಬಾರಿಯಂತೆ ಸಖತ್ ಸ್ಲೈಟಿಷ್ ಆಗಿ ವೇದಿಕೆ ಮೇಲೆ ಬಂದಿದ್ದಾರೆ. ಸುದೀಪ್ ಪ್ರತಿಬಾರಿ ವೇದಿಕೆಗೆ ಬಂದಾಗ ಮನೆಯ ಸದಸ್ಯರು ಲಿವಿಂಗ್ ಏರಿಯಾದಲ್ಲಿನ ಟಿವಿ ಮುಂದೆ ಕುಳಿತಿರುತ್ತಾರೆ, ಸುದೀಪ್ ಬಂದ ಕೂಡಲೇ ಎದ್ದು ನಿಂತು ಎಲ್ಲರೂ ಸಾಮೂಹಿಕಾಗಿ ಚಪ್ಪಾಳೆ ತಟ್ಟುತ್ತಾರೆ. ಆದರೆ ಈ ಶನಿವಾರ ಬೇರೆಯದ್ದೇ ನಡೆದಿದೆ.
ಸುದೀಪ್ ಸಖತ್ ಸ್ಟೈಲಿಷ್ ಆದ ಉಡುಪು, ಕನ್ನಡಕ ಧರಿಸಿ ಸ್ಟೈಲಾಗಿ ವೇದಿಕೆ ಮೇಲೆ ಬಂದಿದ್ದಾರೆ. ಮನೆಯ ಒಳಗಿನ ಸದಸ್ಯರೊಟ್ಟಿಗೆ ಮಾತನಾಡಲು ಮನೆಯ ಒಳಗಿನ ಸದಸ್ಯರು ಕಾಣುವ ಸ್ಕ್ರೀನ್ ಆದಾಗ ಸುದೀಪ್ಗೆ ಅಚ್ಚರಿ ಆಗಿದೆ. ಸೋಫಾ ಮೇಲೆ ಕೇವಲ ನಾಲ್ಕು ಜನ ಮಾತ್ರವೇ ಇದ್ದರು. ಉಳಿದವರಲ್ಲಿ ಕೆಲವರು ಇನ್ನೂ ರೆಡಿಯಾಗುತ್ತಿದ್ದರು, ಡ್ರೋನ್ ಪ್ರತಾಪ್ ಅಂತೂ ನಿದ್ದೆ ಮಾಡುತ್ತಿದ್ದರು. ಸುದೀಪ್ ಬಂದಿದ್ದು ಗೊತ್ತಾದ ಕೂಡಲೇ ಎದ್ದೆವೋ-ಬಿದ್ದೆವೋ ಎಂದು ಓಡೋಡಿ ಬಂದು ಸುದೀಪ್ ಎದುರು ನಿಂತರು. ಪ್ರತಾಪ್, ತಮ್ಮ ಮೈಖ್ ಅನ್ನೂ ಮರೆತು ಓಡಿ ಬಂದಿದ್ದರು.
ಮನೆಯವರ ಅಶಿಸ್ತು ಕಂಡು ಸಿಟ್ಟಾದ ಸುದೀಪ್, ಲಾಂಗ್ ಬಜರ್ ಆದಾಗಿನಿಂದಲೂ ನಿಮ್ಮ ಚಟುವಟಿಕೆಗಳನ್ನು ನೋಡುತ್ತಿದ್ದೇನೆ, ಇದು ಸರಿಯಲ್ಲ ಎಂದರು. ವಿನಯ್ ಅನ್ನು ಉದ್ದೇಶಿಸಿ, ಯಾಕೆ ವಿನಯ್ ಶಿಸ್ತು ಹೊರಟು ಹೋಯಿತಾ? ಎಂದು ಪ್ರಶ್ನೆ ಮಾಡಿದರು. ಡ್ರೋನ್ ಪ್ರತಾಪ್ಗೆ ಮೈಖ್ ಎಲ್ಲಿ ಎಂದು ಕೇಳಿದರು. ತಾವು ಮೈಖ್ ಧರಿಸಿಲ್ಲ ಎಂಬುದು ಅರಿವಾಗಿ ಓಡೋಡಿ ಹೋಗಿ ಮೈಖ್ ತೆಗೆದುಕೊಂಡು ಬಂದರು ಡ್ರೋನ್ ಪ್ರತಾಪ್.
ಇದನ್ನೂ ಓದಿ:ಬಿಗ್ಬಾಸ್ ಸೀಸನ್ 10ರ ಟಾಪ್ 5 ಯಾರು? ವಿನ್ನರ್ ಯಾರಾಗ್ತಾರೆ? ಸ್ನೇಹಿತ್ ಕೊಟ್ಟರು ಉತ್ತರ
ಮೈಖಲ್ಗೂ ಸರಿಯಾಗಿ ಕ್ಲಾಸ್ ತೆಗೆದುಕೊಂಡ ನಟ ಸುದೀಪ್, ಒಂದು ಒಳ್ಳೆಯ ವೇದಿಕೆ ಸಿಕ್ಕಿ, ಅಲ್ಲಿ ಒಂದಿಷ್ಟು ಮರ್ಯಾದೆ ಸಿಗುತ್ತಿದ್ದ ಹಾಗೆ ಆ ವೇದಿಕೆಯ ಮರ್ಯಾದೆ ಕಳೆಯುವ, ನಿಯಮಗಳನ್ನು ಗಾಳಿಗೆ ತೂರುವುದು ನಿಮ್ಮ ಸ್ಟೈಲ್ ಅಲ್ಲವೆ? ಎಂದು ಪ್ರಶ್ನೆ ಮಾಡಿದರು. ಮುಂದುವರೆದು, ಈಗಲೇ ಮುಖ್ಯ ದ್ವಾರ ತೆಗೆಸುತ್ತೇನೆ ಗೆಟ್ ಔಟ್ ಎಂದರು ಸುದೀಪ್.
ವಾರಾಂತ್ಯದ ಆರಂಭದಲ್ಲಿಯೇ ಸುದೀಪ್, ಬೇಸರ, ಸಿಟ್ಟಿನಿಂದಲೇ ಎಪಿಸೋಡ್ ಆರಂಭ ಮಾಡಿದ್ದಾರೆ. ಶನಿವಾರದ ಎಪಿಸೋಡ್ನ ಪ್ರೋಮೋ ಮಾತ್ರವೇ ಸದ್ಯಕ್ಕೆ ಹೊರಬಂದಿದೆ. ಎಪಿಸೋಡ್ನಲ್ಲಿ ಸುದೀಪ್ ಯಾರನ್ನೆಲ್ಲ ಬೈಯ್ಯಲಿದ್ದಾರೆ, ಯಾರ ತಪ್ಪಿಗೆ ಏನು ಶಿಕ್ಷೆ ನೀಡಲಿದ್ದಾರೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ