AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ‘ಈ ದಿನ ನಿಮಗೆ ಮತ್ತೆ ಸಿಗಲ್ಲ’; ಸ್ಪರ್ಧಿಗಳಿಗೆ ಕಿಚ್ಚನ ಕಿವಿಮಾತು

‘ಈ ವಾರ ಮುಗಿದು ಹೋಯ್ತು. ಇನ್ನು ಮುಂದಿನ ವಾರಗಳಲ್ಲಿ ಮತ್ತೆ ಅಗ್ರೆಸ್ಸಿವ್ ಟಾಸ್ಕ್​ ಬರುತ್ತದೆ. ಕಿತ್ತಾಟ ನಡೆಯುತ್ತದೆ. ಏಳು-ಬೀಳು ಇರುತ್ತದೆ. ಆಗ ನೀವು ಈ ವಾರನ ಮುಂದೆ ತುಂಬಾನೇ ಮಿಸ್ ಮಾಡಿಕೊಳ್ತೀರಿ. ಅನೇಕರಿಗೆ ಶಾಲೆಯ ಟಾಸ್ಕ್ ಅರ್ಥ ಆಗಲೇ ಇಲ್ಲ’ ಎಂದರು ಕಿಚ್ಚ ಸುದೀಪ್.

Bigg Boss Kannada: ‘ಈ ದಿನ ನಿಮಗೆ ಮತ್ತೆ ಸಿಗಲ್ಲ’; ಸ್ಪರ್ಧಿಗಳಿಗೆ ಕಿಚ್ಚನ ಕಿವಿಮಾತು
ಕಿಚ್ಚ ಸುದೀಪ್​
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​|

Updated on:Dec 17, 2023 | 12:04 PM

Share

ಈ ವಾರ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸ್ಕೂಲ್​ ಟಾಸ್ಕ್​ ನೀಡಲಾಯಿತು. ಈ ಟಾಸ್ಕ್​ನಲ್ಲಿ ಎಲ್ಲರೂ ಭಾಗಿ ಆಗಿರಲಿಲ್ಲ. ತುಕಾಲಿ ಸಂತೋಷ್ (Thukali Santhosh) ಅವರು ಮಾತ್ರ ಸಖತ್ ಆ್ಯಕ್ಟೀವ್ ಆಗಿ ನಡೆದುಕೊಂಡರು. ಉಳಿದ ಒಂದೆರಡು ಸ್ಪರ್ಧಿಗಳು ಆಸಕ್ತಿ ತೋರಿಸಿದರು. ಉಳಿದಂತೆ ಎಲ್ಲಾ ಸ್ಪರ್ಧಿಗಳು ಅಷ್ಟಾಗಿ ಆ್ಯಕ್ಟೀವ್ ಆಗಿ ಭಾಗಿ ಆಗಲೇ ಇಲ್ಲ. ಈ ವಿಚಾರವನ್ನು ಸುದೀಪ್ (Kichcha Sudeep) ಅವರು ವಿಕೆಂಡ್​ನಲ್ಲಿ ಚರ್ಚೆ ಮಾಡಿದ್ದಾರೆ. ಕಳೆದು ಹೋದ ಈ ಸಮಯ ಮತ್ತೆ ಸಿಗಲ್ಲ ಎಂದು ಕಿವಿಮಾತು ಹೇಳಿದ್ದಾರೆ. ಮನೆ ಮಂದಿಗೂ ಇದು ಹೌದು ಎನಿಸಿದೆ.

‘ರಾಕ್ಷಸರು ಹಾಗೂ ಗಂಧರ್ವರು ಟಾಸ್ಕ್​ನ ಗಂಭೀರವಾಗಿ ಸ್ವೀಕರಿಸಿದ್ರಿ. ಆದರೆ, ಶಾಲೆ ಟಾಸ್ಕ್ ಬಂದಾಗ ಬಹುತೇಕರು ಫೇಲ್ ಆದ್ರಿ. ಎಷ್ಟು ಅದ್ಭುತವಾಗಿ ಮಾಡಬಹುದಿತ್ತು. ಕಿರುಚಿದ್ರೆ ಮಾತ್ರ ಎಲ್ಲವನ್ನೂ ಹೊರಹಾಕಿದಂತಾ? ನಕ್ಕರೆ ಎಲ್ಲವನ್ನೂ ಹೊರಹಾಕಿದಂತೆ ಆಗುವುದಿಲ್ಲವೇ? ಕೆಲವರು ಎಷ್ಟೋ ಸೀಸನ್ ನೋಡಿ ಇಲ್ಲಿಗೆ ಬಂದಿದ್ದೀರಿ. ಸ್ಕೂಲ್ ಟಾಸ್ಕ್ ಅಂತ ಬಂದಾಗ ಹೇಗಿರುತ್ತದೆ ಅನ್ನೋದು ನಿಮಗೆ ಗೊತ್ತಿತ್ತು. ಮೊದಲ ಸೀಸನ್​​ ಸ್ಪರ್ಧಿಗಳಿಗೆ ಬಿಗ್ ಬಾಸ್ ಅನ್ನೋದು ಏನು ಎಂದೇ ಗೊತ್ತಿರಲಿಲ್ಲ. ಈ ಟಾಸ್ಕ್​ನ ಅವರು ಒಳ್ಳೆಯ ರೀತಿಯಲ್ಲಿ ನಿರ್ವಹಿಸಿದ್ದರು’ ಎಂದರು ಸುದೀಪ್.

ಇದನ್ನೂ ಓದಿ:  ಬಕೆಟ್​ ಹಿಡಿತೀಯ ಎಂದಿದ್ದ ಸಂಗೀತಾಗೆ ಕಾರ್ತಿಕ್​ ಸುತ್ತಿಗೆ ಏಟು; ಬಿಗ್ ಬಾಸ್​ ಸದಸ್ಯರಿಗೆ ದೊಡ್ಡ ಶಾಕ್​

‘ಬಿಗ್ ಬಾಸ್ ಇತಿಹಾಸದಲ್ಲಿ ಹೆಚ್ಚು ಸಕ್ಸಸ್​ಫುಲ್ ಟಾಸ್ಕ್​ ಅನ್ನೋದು ಇದ್ದರೆ ಅದು ಸ್ಕೂಲ್ ಟಾಸ್ಕ್​. ನಿಮ್ಮ ಮುಗ್ದತೆ ಬೇಕಿತ್ತು. ಈಗ ಮುಗಿದು ಹೋಯ್ತು. ಬೇಕು ಅಂದರೂ ಶಾಲೆ ಸಮವಸ್ತ್ರ ಸಿಗಲ್ಲ. ಬೇಕೂ ಅಂದರೂ ನೀವು ಮಕ್ಕಳು ಆಗೋಕೆ ಆಗಲ್ಲ. ಸ್ಟುಡೆಂಟ್ ಹೀರೋಗಳಾದ ಉದಾಹರಣೆ ಇದೆ. ಎಲ್ಲರೂ ಸ್ಟಾರ್ಸ್ ಬಗ್ಗೆ ಗಮನ ಹರಿಸುತ್ತಿದ್ದರು. ಸಂಗೀತಾ ಅವರೇ ನೀವು ಒಳ್ಳೆಯ ಆರ್ಟಿಸ್ಟ್ ಅಲ್ವಾ? ವಿನಯ್ ನಿಮಗೆ ನಟನೆ ಬರಲ್ವ’ ಎಂದು ಸುದೀಪ್ ಪ್ರಶ್ನೆ ಮಾಡಿದರು. ಈ ವೇಳೆ ಇಡೀ ಮನೆ ಸೈಲೆಂಟ್ ಆಗಿತ್ತು.

ಇದನ್ನೂ ಓದಿ: ‘ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲೇ ಪುಣ್ಯಭೂಮಿ ಆಗ್ಬೇಕು’: ವಿಷ್ಣು ಸ್ಮಾರಕದ ಬಗ್ಗೆ ಸುದೀಪ್​ ಪ್ರತಿಕ್ರಿಯೆ

‘ಈ ವಾರ ಮುಗಿದು ಹೋಯ್ತು. ಇನ್ನು ಮುಂದಿನ ವಾರಗಳಲ್ಲಿ ಮತ್ತೆ ಅಗ್ರೆಸ್ಸಿವ್ ಟಾಸ್ಕ್​ ಬರುತ್ತದೆ. ಕಿತ್ತಾಟ ನಡೆಯುತ್ತದೆ. ಏಳು-ಬೀಳು ಇರುತ್ತದೆ. ಆಗ ನೀವು ಈ ವಾರನ ಮುಂದೆ ತುಂಬಾನೇ ಮಿಸ್ ಮಾಡಿಕೊಳ್ತೀರಿ. ಅನೇಕರಿಗೆ ಶಾಲೆಯ ಟಾಸ್ಕ್ ಅರ್ಥ ಆಗಲೇ ಇಲ್ಲ’ ಎಂದರು ಸುದೀಪ್. ಬಿಗ್ ಬಾಸ್​ನಲ್ಲಿ ಕಳೆದ ವಾರ ಸಾಕಷ್ಟು ಕಿತ್ತಾಟಗಳು ನಡೆದಿದ್ದವು. ಪ್ರತಾಪ್ ಹಾಗೂ ಸಂಗೀತಾ ಕಣ್ಣಿಗೆ ಹಾನಿ ಆಗುವಷ್ಟು ಎಲ್ಲರೂ ಅಗ್ರೆಸಿವ್​ ಆಗಿದ್ದರು. ಆದರೆ, ಈ ಬಾರಿ ಆ ಅಗ್ರೆಷನ್ ಕಡಿಮೆ ಆಗಿತ್ತು. ಸ್ಕೂಲ್ ಟಾಸ್ಕ್ ಆಗಿದ್ದರಿಂದ ಎಲ್ಲರೂ ಕೂಲ್ ಆಗಿದ್ದರು. ಆದರೆ, ಅಂದುಕೊಂಡ ರೀತಿಯಲ್ಲಿ ಟಾಸ್ಕ್​ ವೀಕ್ಷಕರಿಗೆ ಖುಷಿ ನೀಡಿಲ್ಲ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:04 pm, Sun, 17 December 23

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್