ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಸಿಕ್ಕಿದೆ ಕಿಚ್ಚ ಸುದೀಪ್ ಮಾಡಿದ ಅಡುಗೆ

ಸುದೀಪ್ ಅವರು ಬಿಗ್ ಬಾಸ್ ಸ್ಪರ್ಧಿಗಳಿಗೂ ತಮ್ಮ ಕೈರುಚಿ ತೋರಿಸಿದ್ದಾರೆ. ಈ ಮೊದಲು ಹಲವು ಸೀಸನ್​ಗಳಲ್ಲಿ ಅವರು ಸ್ಪರ್ಧಿಗಳಿಗೆ ಅಡುಗೆ ಮಾಡಿ ಕೊಟ್ಟಿದ್ದರು.

ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಸಿಕ್ಕಿದೆ ಕಿಚ್ಚ ಸುದೀಪ್ ಮಾಡಿದ ಅಡುಗೆ
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Dec 15, 2023 | 11:02 AM

ಬಿಗ್ ಬಾಸ್ ಸ್ಪರ್ಧಿಗಳನ್ನು ಕಿಚ್ಚ ಸುದೀಪ್ (Kichcha Sudeep) ಅವರು ಮನೆಯವರಂತೆ ಪರಿಗಣಿಸುತ್ತಾರೆ. ಪ್ರತಿ ಹಂತದಲ್ಲೂ ಅವರ ಬಗ್ಗೆ ಕೇರ್ ಮಾಡುತ್ತಾರೆ. ಬಿಗ್​ ಬಾಸ್​ನ ಪ್ರತಿ ಸೀಸನ್​ನಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಅಡುಗೆ ಮಾಡಿ ಕಳುಹಿಸುತ್ತಾರೆ. ಈ ಬಾರಿಯೂ ಅದು ಮುಂದುವರಿದಿದೆ. ಸುದೀಪ್ ಮಾಡಿದ ಅಡುಗೆ ಬಿಗ್ ಬಾಸ್ ಮನೆ ಸೇರಿದೆ ಎಂದು ವರದಿ ಆಗಿದೆ. ಇಂದಿನ (ಡಿಸೆಂಬರ್ 15) ಎಪಿಸೋಡ್​ನಲ್ಲಿ ಇದು ಪ್ರಸಾರ ಆಗುವ ಸಾಧ್ಯತೆ ಇದೆ.

ಬಿಗ್ ಬಾಸ್​ನಲ್ಲಿ ಇಂದು ಪ್ರೋಮೋ ಒಂದನ್ನು ಬಿಡುಗಡೆ ಮಾಡಲಾಗಿದೆ. ಪ್ರತಾಪ್ ಅವರು ಮಧ್ಯಾಹ್ನಕ್ಕೆ ಮುದ್ದೆ ಮಾಡಿದ್ದರು. ಆದರೆ ರಾತ್ರಿಗೆ ಗ್ಯಾಸ್ ಬರಲೇ ಇಲ್ಲ. ಇದು ಪ್ರತಾಪ್ ಅವರದ್ದೇ ತಪ್ಪು ಎಂದು ಎಲ್ಲರೂ ಕೂಗಾಡಿದ್ದಾರೆ. ಆದರೆ, ಅಲ್ಲಿ ಅಸಲಿ ಕಥೆ ಬೇರೆಯದೇ ಇದೆ ಎನ್ನಲಾಗುತ್ತಿದೆ. ಸುದೀಪ್ ಮಾಡಿರೋ ಅಡುಗೆ ಬರುವುದರಲ್ಲಿದೆ. ಹೀಗಾಗಿ, ಗ್ಯಾಸ್ ಹಚ್ಚೋಕೆ ಬಿಗ್ ಬಾಸ್ ಅವಕಾಶ ನೀಡಿಲ್ಲ.

ಸುದೀಪ್ ಅವರು ನಟನೆಯ ಜೊತೆಗೆ ಕ್ರಿಕೆಟ್ ಹಾಗೂ ಅಡುಗೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆ. ತಮ್ಮ ಮನೆಯ ಟೆರೇಸ್​ನಲ್ಲಿ ವಿಶೇಷ ಕಿಚನ್​​ನ ಅವರು ಹೊಂದಿದ್ದಾರೆ. ಮನೆಗೆ ಬರುವ ಗೆಳೆಯರಿಗೆ, ಆಪ್ತರಿಗೆ ಅವರು ಅಡುಗೆ ಮಾಡಿ ಬಡಿಸುತ್ತಾರೆ. ಈಗ ಅವರು ಬಿಗ್ ಬಾಸ್ ಸ್ಪರ್ಧಿಗಳಿಗೂ ತಮ್ಮ ಕೈರುಚಿ ತೋರಿಸಿದ್ದಾರೆ. ಈ ಮೊದಲು ಹಲವು ಸೀಸನ್​ಗಳಲ್ಲಿ ಅವರು ಸ್ಪರ್ಧಿಗಳಿಗೆ ಅಡುಗೆ ಮಾಡಿ ಕೊಟ್ಟಿದ್ದರು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ನಡೆಯುತ್ತಿದೆ ಬ್ರೋ ಕೋಡ್​; ವಿನಯ್​ನ ಸೇವ್​ ಮಾಡೋದೇ ಉದ್ದೇಶ?

ಕನ್ನಡ ಬಿಗ್ ಬಾಸ್ ಟಿವಿ ಸೀಸನ್, ಒಟಿಟಿ ಸೀಸನ್ ಹಾಗೂ ಒಂದು ಮಿನಿ ಸೀಸನ್​ನ ಸುದೀಪ್ ನಡೆಸಿಕೊಟ್ಟಿದ್ದಾರೆ. ಸದ್ಯ 10ನೇ ಸೀಸನ್​ ಅವರ ನಿರೂಪಣೆಯಲ್ಲೇ ಮೂಡಿಬರುತ್ತಿದೆ.. ಪ್ರತಿ ಪರಿಸ್ಥಿತಿಯನ್ನು ಅವರು ಸಮರ್ಥವಾಗಿ ನಿರ್ವಹಿಸುತ್ತಾರೆ. ಈ ಕಾರಣಕ್ಕೆ ಸುದೀಪ್ ಅನೇಕರಿಗೆ ಇಷ್ಟ ಆಗುತ್ತಾರೆ. ಈ ಬಾರಿಯ ಬಿಗ್ ಬಾಸ್ ಜಿಯೋ ಸಿನಿಮಾ ಹಾಗೂ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. 24 ಗಂಟೆ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು