AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ಗೆ ಬರ್ತಾರಾ ಈ ಸೂಪರ್​ ಸ್ಟಾರ್​? ಜೋರಾಗಿ ಹಬ್ಬಿದೆ ಗುಸುಗುಸು

ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಕಿರುತೆರೆಯ ಮಂದಿ ಮಾತ್ರವಲ್ಲದೇ ಸಿನಿಮಾದವರು ಕೂಡ ಈ ಶೋ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಈ ರಿಯಾಲಿಟಿ ಶೋನ ರೋಚಕತೆ ಹೆಚ್ಚಾಗುತ್ತಿದೆ. ಬಗೆಬಗೆಯ ಟಾಸ್ಕ್​ಗಳನ್ನು ನೀಡುವ ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸಲಾಗುತ್ತಿದೆ.

ಬಿಗ್​ ಬಾಸ್​ಗೆ ಬರ್ತಾರಾ ಈ ಸೂಪರ್​ ಸ್ಟಾರ್​? ಜೋರಾಗಿ ಹಬ್ಬಿದೆ ಗುಸುಗುಸು
ಬಿಗ್​ ಬಾಸ್​
Follow us
ಮದನ್​ ಕುಮಾರ್​
|

Updated on: Dec 14, 2023 | 11:58 AM

ಕಿರುತೆರೆ ಪ್ರೇಕ್ಷಕರಿಗೆ ಬಿಗ್ ಬಾಸ್​ (Bigg Boss) ಕಾರ್ಯಕ್ರಮದ ಬಗ್ಗೆ ಹೆಚ್ಚು ಆಸಕ್ತಿ ಇದೆ. ಈಗ ಒಟಿಟಿ ಕ್ಷೇತ್ರಕ್ಕೂ ಬಿಗ್ ಬಾಸ್​ ಖ್ಯಾತಿ ವ್ಯಾಪಿಸಿದೆ. ಅನೇಕ ಸಿನಿಮಾ ಸೆಲೆಬ್ರಿಟಿಗಳು ದೊಡ್ಮನೆಗೆ ಬಂದು ಅಭಿಮಾನಿಗಳನ್ನು ರಂಜಿಸಿದ್ದಾರೆ. ಇನ್ನು ಕೆಲವರು ಸಿನಿಮಾದ ಪ್ರಚಾರದ ಸಲುವಾಗಿ ಬಿಗ್​ ಬಾಸ್​ ರಿಯಾಲಿಟಿ ಶೋಗೆ ಆಗಮಿಸಿದ್ದುಂಟು. ಈಗ ಮಹೇಶ್​ ಬಾಬು (Mahesh Babu) ಕೂಡ ಬಿಗ್ ಬಾಸ್​ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತಿದೆ. ‘ಗುಂಟೂರು ಖಾರಂ’ (Guntur Kaaram) ಚಿತ್ರದ ಪ್ರಚಾರದ ಸಲುವಾಗಿ ಅವರು ತೆಲುಗು ಬಿಗ್​ ಬಾಸ್​ ವೇದಿಕೆಗೆ ಬರುತ್ತಾರೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಹೇಳಿಕೆ ಹೊರಬರಬೇಕಿದೆ.

ನಟ ಅಕ್ಕಿನೇನಿ ನಾಗಾರ್ಜುನ ಅವರು ‘ಬಿಗ್​ ಬಾಸ್​ ತೆಲುಗು ಸೀಸನ್​ 7’ ನಡೆಸಿಕೊಡುತ್ತಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಈ ಶೋ ಅಂತ್ಯವಾಗಲಿದೆ. ಇದರ ಫಿನಾಲೆ ಎಪಿಸೋಡ್​ನಲ್ಲಿ ಮಹೇಶ್​ ಬಾಬು ಅವರು ‘ಗುಂಟೂರು ಖಾರಂ’ ಸಿನಿಮಾ ತಂಡದ ಜೊತೆ ಬಿಗ್​ ಬಾಸ್​ ವೇದಿಕೆ ಏರುವ ಸಾಧ್ಯತೆ ಇದೆ. ಈ ಸಿನಿಮಾ 2024ರ ಜನವರಿ 12ರಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯ ವಸ್ತುಗಳು ಚೆಲ್ಲಾಪಿಲ್ಲಿ; ಏನೂ ಮಾಡಲಾಗದೇ ಅಸಹಾಯಕ ಸ್ಥಿತಿಗೆ ತಲುಪಿದ ವಿನಯ್​

‘ಗುಂಟೂರು ಖಾರಂ’ ಸಿನಿಮಾದಲ್ಲಿ ಮಹೇಶ್​ ಬಾಬು ಜೊತೆ ಮೀನಾಕ್ಷಿ ಚೌದರಿ, ಶ್ರೀಲೀಲಾ, ರಮ್ಯಾ ಕೃಷ್ಣ, ಪ್ರಕಾಶ್​ ರಾಜ್​, ಜಗಪತಿ ಬಾಬು ಮುಂತಾದವರು ನಟಿಸಿದ್ದಾರೆ. ತ್ರಿವಿಕ್ರಮ್​ ಶ್ರೀನಿವಾಸ್​ ಅವರು ನಿರ್ದೇಶನ ಮಾಡಿದ್ದಾರೆ. ಸಖತ್​ ಮಾಸ್​ ಆಗಿ ಈ ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಪ್ರಮೋಷನ್​ ಚಟುವಟಿಕೆಗಳಿಗೆ ಚಿತ್ರತಂಡದವರು ಚಾಲನೆ ನೀಡಿದ್ದಾರೆ. ಈ ಸಿನಿಮಾಗಾಗಿ ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: ಈವರೆಗೆ ಯಾರೂ ನೋಡಿರದ ಬಿಗ್​ ಬಾಸ್​ ಈ ರೀತಿ ಇದ್ದಾರಾ? ಬಯಲಾಗಿದೆ ಸ್ಕೆಚ್​

ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ 2022ರ ಜನವರಿಯಲ್ಲಿ ತೆರೆಕಂಡಿತ್ತು. 2023ರಲ್ಲಿ ಅವರ ಯಾವುದೇ ಸಿನಿಮಾ ಬಿಡುಗಡೆ ಆಗಲಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಎರಡು ವರ್ಷಗಳ ಬಳಿಕ, ಅಂದರೆ 2024ರ ಜನವರಿ 12ರಂದು ಮಹೇಶ್ ಬಾಬು ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಲಿರುವುದರಿಂದ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಲರ್ಟ್​
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು
ಸುದೀಪಣ್ಣ, ಶಿವಣ್ಣ ನನಗೆ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ ನಾನಿ ಮುಕ್ತ ಮಾತು