ಬಿಗ್ ಬಾಸ್ ಮನೆಯ ವಸ್ತುಗಳು ಚೆಲ್ಲಾಪಿಲ್ಲಿ; ಏನೂ ಮಾಡಲಾಗದೇ ಅಸಹಾಯಕ ಸ್ಥಿತಿಗೆ ತಲುಪಿದ ವಿನಯ್
ಮೊದಲೆಲ್ಲ ಬೇರೆಯವರ ತಪ್ಪು ಕಂಡಾಗ ಕೂಗಾಡುತ್ತಿದ್ದ ವಿನಯ್ ಗೌಡ ಅವರು ಈಗ ಸುಮ್ಮನಾಗಿದ್ದಾರೆ. ಇಡೀ ಬಿಗ್ ಬಾಸ್ ಮನೆಯ ವಸ್ತುಗಳು ಚೆಲ್ಲಾಪಿಲ್ಲಿ ಆಗಿವೆ. ಹಾಗಿದ್ದರೂ ಕೂಡ ವಿನಯ್ ಗೌಡ ಕೈ ಕಟ್ಟಿ ಸುಮ್ಮನೆ ನೋಡಬೇಕಾದ ಪರಿಸ್ಥಿತಿ ಬಂದಿದೆ. ಅದಕ್ಕೆ ಸಾಕ್ಷಿ ಒದಗಿಸುವ ಪ್ರೋಮೋ ಇಲ್ಲಿದೆ..
‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ಶೋನಲ್ಲಿ ಹೊಸ ಟಾಸ್ಕ್ ನೀಡಲಾಗಿದೆ. ರಾಕ್ಷಸರು ಮತ್ತು ಗಂಧರ್ವರು ಎಂದು ಎರಡು ಗುಂಪು ಮಾಡಲಾಗಿದೆ. ರಾಕ್ಷಸರು ಮಾಡಿದ ಎಲ್ಲ ಕೆಡುಕುಗಳನ್ನು ಗಂಧರ್ವರು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ವಿನಯ್ ಗೌಡ (Vinay Gowda) ಅವರು ಗಂಧರ್ವರ ಟೀಮ್ನಲ್ಲಿ ಇದ್ದಾರೆ. ರಾಕ್ಷಸರ ಟೀಮ್ನಲ್ಲಿ ಇರುವ ಕಾರ್ತಿಕ್ ಮಹೇಶ್ (Karthik Mahesh), ಸಂಗೀತಾ ಶೃಂಗೇರಿ ಮುಂತಾದವರು ಮಾಡಿದ ಕಿರಿಕ್ಗಳನ್ನು ವಿನಯ್ ಗೌಡ ಮುಂತಾದವರು ಸಹಿಸಿಕೊಳ್ಳಬೇಕಾಗಿದೆ. ಏನೂ ಮಾಡಲಾಗದ ಅಸಹಾಯಕ ಸ್ಥಿತಿಗೆ ಅವರು ತಲುಪಿದ್ದಾರೆ. ಈ ಸಂಚಿಕೆ ಡಿಸೆಂಬರ್ 5ರಂದು ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಬಿತ್ತರ ಆಗಲಿದೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ಬಿಗ್ ಬಾಸ್ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

