AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈವರೆಗೆ ಯಾರೂ ನೋಡಿರದ ಬಿಗ್​ ಬಾಸ್​ ಈ ರೀತಿ ಇದ್ದಾರಾ? ಬಯಲಾಗಿದೆ ಸ್ಕೆಚ್​

ಈವರೆಗೆ ಯಾರೂ ನೋಡಿರದ ಬಿಗ್​ ಬಾಸ್​ ಈ ರೀತಿ ಇದ್ದಾರಾ? ಬಯಲಾಗಿದೆ ಸ್ಕೆಚ್​

ಮದನ್​ ಕುಮಾರ್​
|

Updated on: Dec 13, 2023 | 6:32 PM

Share

ಬಿಗ್​ ಬಾಸ್​ ಎಂದರೆ ಯಾರು ಎಂಬುದು ಯಾರಿಗೂ ತಿಳಿದಿಲ್ಲ. ಅವರ ಧ್ವನಿ ಕೇಳಿಸುತ್ತದೆ. ಆದರೆ ಅವರು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಬಿಗ್​ ಬಾಸ್​ ಹೇಗಿದ್ದಾರೆ ಎಂಬುದನ್ನು ದೊಡ್ಮನೆಯ ಸದಸ್ಯರು ಊಹಿಸಿಕೊಂಡಿದ್ದಾರೆ. ತಮ್ಮ ಮನಸ್ಸಿನಲ್ಲಿ ಇರುವ ಕಲ್ಪನೆಯನ್ನು ಕಾಗದದ ಮೇಲೆ ಬರೆದು ತೋರಿಸಿದ್ದಾರೆ.

ಬಿಗ್​ ಬಾಸ್​ (BBK 10) ಶೋ ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಅಷ್ಟಕ್ಕೂ ಬಿಗ್​ ಬಾಸ್​ ಎಂದರೆ ಯಾರು ಎಂಬುದು ಯಾರಿಗೂ ತಿಳಿದಿಲ್ಲ. ಅವರ ಧ್ವನಿ ಕೇಳಿಸುತ್ತದೆ. ಆದರೆ ಅವರು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಬಿಗ್​ ಬಾಸ್​ (Bigg Boss) ಹೇಗಿದ್ದಾರೆ ಎಂಬುದನ್ನು ದೊಡ್ಮನೆಯ ಸದಸ್ಯರು ಊಹಿಸಿಕೊಂಡಿದ್ದಾರೆ. ತಮ್ಮ ಮನಸ್ಸಿನಲ್ಲಿ ಇರುವ ಕಲ್ಪನೆಯನ್ನು ಕಾಗದದ ಮೇಲೆ ಬರೆದು ತೋರಿಸಿದ್ದಾರೆ. ವರ್ತೂರು ಸಂತೋಷ್​, ಸಂಗೀತಾ ಶೃಂಗೇರಿ (Sangeetha Sringeri), ಡ್ರೋನ್​ ಪ್ರತಾಪ್​, ವಿನಯ್​ ಗೌಡ ಸೇರಿದಂತೆ ಅನೇಕರು ಸ್ಕೆಚ್ ಬರೆದಿದ್ದಾರೆ. ಒಬ್ಬೊಬ್ಬರ ಕಲ್ಪನೆಯಲ್ಲಿ ಬಿಗ್​ ಬಾಸ್​ ಭಾವಚಿತ್ರ ಒಂದೊಂದು ರೀತಿಯಲ್ಲಿ ಮೂಡಿಬಂದಿದೆ. ಈ ಸಂಚಿಕೆ ಡಿಸೆಂಬರ್​ 13ರ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ನೇರವಾಗಿ ವೀಕ್ಷಿಸಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More