‘ಐ ಡೋಂಟ್ ಗಿವ್ ಎ ಡ್ಯಾಮ್’: ಬಿಗ್​ಬಾಸ್ ಮನೆಯಲ್ಲೀಗ ಇಬ್ಬರು ವಿನಯ್?

Michel: ಬಿಗ್​ಬಾಸ್ ಮನೆಯಲ್ಲಿ ತಮ್ಮ ಕಠಿಣ ಮಾತು, ಒಮ್ಮೊಮ್ಮೆ ಅಹಂಕಾರದ ವರ್ತನೆಯಿಂದ ವಿನಯ್ ಅಗ್ರೆಸ್ಸಿವ್ ಆಟಗಾರ ಎಂದು ಕುಖ್ಯಾತಿ ಗಳಿಸಿದ್ದಾರೆ. ಆದರೆ ಈಗ ಮನೆಯಲ್ಲಿ ಇನ್ನೊಬ್ಬ ವಿನಯ್ ಹುಟ್ಟಿಕೊಂಡಿದ್ದಾರೆ! ಯಾರದು?

‘ಐ ಡೋಂಟ್ ಗಿವ್ ಎ ಡ್ಯಾಮ್’: ಬಿಗ್​ಬಾಸ್ ಮನೆಯಲ್ಲೀಗ ಇಬ್ಬರು ವಿನಯ್?
ವಿನಯ್
Follow us
|

Updated on: Dec 14, 2023 | 11:24 PM

ಬಿಗ್​ಬಾಸ್ (BiggBoss) ಮನೆಯಲ್ಲಿ ಸಖತ್ ಅಗ್ರೆಸಿವ್ ಆಟಗಾರ ಎಂದರೆ ಅದು ವಿನಯ್. ನಮ್ರತಾ ಅವರನ್ನು ಹೊರತುಪಡಿಸಿ ಮನೆಯ ಬಹುತೇಕ ಸದಸ್ಯರು ಅವರ ಕೋಪಕ್ಕೆ ಒಮ್ಮೆಯಲ್ಲ ಒಮ್ಮೆ ತುತ್ತಾಗಿದ್ದಾರೆ. ಮೈಖಲ್ ಸಹ ಕಳೆದ ವಾರ ವಿನಯ್ ಕೋಪಕ್ಕೆ ಗುರಿಯಾಗಿದ್ದರು. ಆದರೆ ಕಳೆದ ವಾರದ ಗಂಧರ್ವರು-ರಾಕ್ಷಸರು ಟಾಸ್ಕ್​ನ ಬಳಿಕ ನಡೆದ ವಾರದ ಪಂಚಾಯ್ತಿಯಲ್ಲಿ ಸುದೀಪ್ ಬುದ್ಧಿಮಾತು ಕೇಳಿದ ಬಳಿಕ ವಿನಯ್ ಈ ವಾರ ತುಸು ಸೌಮ್ಯವಾಗಿ ನಡೆದುಕೊಂಡರು, ಆಗಾಗ್ಗೆ ಮಾತಿನಲ್ಲಿ ಕಠೋರತೆ ತೋರಿದರಾದರು ಕಳೆದ ವಾರದಷ್ಟು ಅಲ್ಲ. ಆದರೆ ಈ ವಾರ ಅವರ ಶೂ ಒಳಗೆ ಇನ್ನೊಬ್ಬರು ಕಾಲು ತೂರಿಸಿದಂತೆ ವರ್ತಿಸಿದರು, ಅವರೇ ಮೈಖಲ್.

ಮೈಖಲ್ ಮೊದಲಿನಿಂದಲೂ ಆಟಕ್ಕೆ ನಿಷ್ಟವಾಗಿದ್ದವರು, ಅವರು ಆಡುವ ರೀತಿಗೆ, ಅಭಿಪ್ರಾಯಗಳನ್ನು ನಿಷ್ಪಕ್ಷಪಾತವಾಗಿ ನೀಡುತ್ತಿದ್ದ ರೀತಿಗೆ ‘ಜಂಟಲ್​ಮ್ಯಾನ್’ ಎಂದು ಕರೆಸಿಕೊಂಡಿದ್ದರು. ಕಲಾವಿದನಲ್ಲದ, ಕನ್ನಡಿಗರಿಗೆ ಹೆಚ್ಚು ಪರಿಚಯವೇ ಇಲ್ಲದೇ ಇದ್ದರೂ ಸಹ ಅವರ ಆಟದ ರೀತಿ, ವ್ಯಕ್ತಿತ್ವವನ್ನು ಕಂಡು ಪ್ರೇಕ್ಷಕರು ಹಾಗೂ ಮನೆಯ ಸದಸ್ಯರು ಅವರನ್ನು ಉಳಿಸಿಕೊಳ್ಳುತ್ತಲೇ ಸಾಗಿದ್ದರು. ಆದರೆ ಮೈಖಲ್ ಈ ವಾರ ತೋರಿದ ವರ್ತನೆ, ಅವರ ಹಿಂದಿನ ವಾರಗಳ ವರ್ತನೆಗೂ ಅಜಗಜಾಂತರ ಅಂತರವಿತ್ತು.

ಮನೆಯ ವಾತಾವರಣ ತಿಳಿ ಮಾಡಲು ತುಸು ಲೈಟ್ ಆದ ಟಾಸ್ಕ್ ಅನ್ನು ಬಿಗ್​ಬಾಸ್ ನೀಡಿದ್ದರು. ಶಾಲೆಯ ವಾತಾವರಣವನ್ನು ಮರುಸೃಷ್ಟಿ ಮಾಡಲಾಗಿತ್ತು. ಸ್ಪರ್ಧಿಗಳು ವಿದ್ಯಾರ್ಥಿಗಳು, ಶಿಕ್ಷಕರಾಗಿದ್ದರು. ಟಾಸ್ಕ್ ನಡೆಯುವ ವೇಳೆ ಮೊದಲ ದಿನ ಮೈಖಲ್, ಕನ್ನಡ ಶಿಕ್ಷಕನಾಗಿ ಚೆನ್ನಾಗಿಯೇ ಟಾಸ್ಕ್ ನಿರ್ವಹಿಸಿದರಾದರು, ಆ ನಂತರ ಟಾಸ್ಕ್​ಗಳಲ್ಲಿ ಸರಿಯಾಗಿ ತೊಡಗಿಕೊಳ್ಳಲಿಲ್ಲ. ಇತರೆ ಸದಸ್ಯರು ಟಾಸ್ಕ್ ಆಡುವಾಗ ಸರಿಯಾಗಿ ಸ್ಪಂದಿಸದೆ ಅಸಹಕಾರ ತೋರಿದರು. ಅವರ ಉತ್ತರಗಳು ತುಸು ಅಹಂಕಾರದಿಂದಲೂ ಕೂಡಿದ್ದವು.

ಇದನ್ನೂ ಓದಿ:ಬಿಗ್​ಬಾಸ್ ಪ್ರಾಥಮಿಕ ಪಾಠಶಾಲೆ ನೋಡಿ ಹೇಗಿದೆ: ಇಲ್ಲಿವೆ ಚಿತ್ರಗಳು

ಟಾಸ್ಕ್ ನಡೆಯುವ ಸಮಯದಲ್ಲಿ ಮನೆಯ ಸದಸ್ಯರ ಬಗ್ಗೆ ಅಭಿಪ್ರಾಯಗಳನ್ನು ಹೇಳುವ ಸಮಯದಲ್ಲಿ ಸಂಗೀತಾ, ಡ್ರೋನ್ ಪ್ರತಾಪ್ ಅವರುಗಳ ಬಗ್ಗೆ ಬಹಳ ಕಠಿಣವಾದ ಪದಗಳನ್ನು ಉದ್ದೇಶಪೂರ್ವಕವಾಗಿ ಬಳಸಿದರು. ವಿನಯ್​ರ ಅಗ್ರೆಸ್ಸಿವ್ ವ್ಯಕ್ತಿತ್ವವವನ್ನೇ ಮೈಖಲ್​ ಪ್ರತಿಬಿಂಬಿಸುವಂತಿತ್ತು. ಡ್ರೋನ್ ಪ್ರತಾಪ್​ಗೆ ವ್ಯಕ್ತಿತ್ವವೇ ಇಲ್ಲ, ಅವನನ್ನು ಸ್ಪರ್ಧಿ ಎಂದೇ ನಾನು ಪರಿಗಣಿಸುವುದಿಲ್ಲ, ಅವನೊಬ್ಬ ವೇಸ್ಟ್ ಬಾಡಿ ಎಂದರು. ಸಂಗೀತಾ ಬಗ್ಗೆಯೂ ಕಠೋರವಾದ ಮಾತುಗಳನ್ನು ಆಡಿದರು.

ತೀರ ಸಣ್ಣ ವಿಷಯಕ್ಕೆ ಕಾರ್ತಿಕ್ ಜೊತೆ ಉದ್ದೇಶಪೂರ್ವಕವಾಗಿ ಜಗಳವಾಡಿದರು, ಕಾರ್ತಿಕ್ ಅನ್ನು ಕೋಪೋದ್ರೇಕಗೊಳಿಸುವಂತೆ ಅಹಂಕಾರದಿಂದ ಮಾತನಾಡಿದರು. ಇವೆಲ್ಲವೂ ವಿನಯ್​ರ ಕಳೆದ ವಾರದ ವರ್ತನೆಯನ್ನು ನೆನಪಿಸುವಂತಿತ್ತು. ಕೊನೆಯಲ್ಲಿ ಟಾಸ್ಕ್​ ಬಗ್ಗೆ ಅಭಿಪ್ರಾಯ ತಿಳಿಸಿ, ಯಾರದ್ದಾದರೂ ಮನಸ್ಸು ನೋಯಿಸಿದರೆ ಕ್ಷಮೆ ಕೇಳುವ ಅವಕಾಶವನ್ನು ಎಲ್ಲ ಸ್ಪರ್ಧಿಗಳಿಗೂ ಬಿಗ್​ಬಾಸ್ ನೀಡಿದಾಗ ಮಾತನಾಡಿದ ಮೈಖಲ್, ಅಲ್ಲಿಯೂ ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಬಗ್ಗೆ ಕಠಿಣ ಪದಗಳನ್ನು ಬಳಸಿ ಮಾತನಾಡಿದ್ದಲ್ಲದೆ, ನನ್ನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಆ ಬಗ್ಗೆ ನಾನು ಕೇರ್ ಮಾಡಲ್ಲ, ‘ಐ ಡೋಂಟ್ ಗಿವ್ ಎ ಡ್ಯಾಮ್’ ಎಂದು ಅಹಂಕಾರ ಪ್ರದರ್ಶಿಸಿದರು. ಬಹುಷಃ ಈ ವಾರ ಮೈಖಲ್​ರ ಕೊನೆಯ ವಾರವಾದರೂ ಆಗಬಹುದೇನೋ?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್