AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ನಲ್ಲಿ ನಡೆಯುತ್ತಿದೆ ಬ್ರೋ ಕೋಡ್​; ವಿನಯ್​ನ ಸೇವ್​ ಮಾಡೋದೇ ಉದ್ದೇಶ?

ವಿನಯ್ ಗೌಡಗೆ ಕಾರ್ತಿಕ್ ಬಕೆಟ್ ಹಿಡಿಯುತ್ತಿದ್ದಾರೆ ಅನ್ನೋದು ಸಂಗೀತಾ ಅಭಿಪ್ರಾಯ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಇದಕ್ಕೆ ಅವರು ವಿವರಣೆ ಕೂಡ ನಡೆದಿದ್ದಾರೆ.

ಬಿಗ್ ಬಾಸ್​ನಲ್ಲಿ ನಡೆಯುತ್ತಿದೆ ಬ್ರೋ ಕೋಡ್​; ವಿನಯ್​ನ ಸೇವ್​ ಮಾಡೋದೇ ಉದ್ದೇಶ?
ನಮ್ರತಾ-ವಿನಯ್
ರಾಜೇಶ್ ದುಗ್ಗುಮನೆ
|

Updated on: Dec 15, 2023 | 8:04 AM

Share

ಬಿಗ್ ಬಾಸ್​ನಲ್ಲಿ ವಿನಯ್ ಗೌಡ (Vinay Gowda) ಹೆಸರು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಲೇ ಇರುತ್ತದೆ. ಹಲವು ಸ್ಪರ್ಧಿಗಳ ಮೇಲೆ ಅವರ ಪ್ರಭಾವ ಇದೆ. ಅನೇಕ ಸಂದರ್ಭಗಳಲ್ಲಿ ಬೇರೆಯವರು ಮಾಡಿದ ತಪ್ಪಿಗೆ ಅವರು ಸುದೀಪ್​ ಅವರಿಂದ ಹೇಳಿಸಿಕೊಂಡಿದ್ದೂ ಇದೆ. ಈಗ ಬಿಗ್ ಬಾಸ್ ಮನೆಯಲ್ಲಿ ವಿನಯ್ ಹೆಸರಲ್ಲಿ ಬ್ರೋ ಕೋಡ್ ನಡೆಯುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಸಂಗೀತಾ ಅವರು ಮಾತನಾಡಿದ್ದಾರೆ.

ವಿನಯ್ ಗೌಡ ಅವರನ್ನು ಕಂಡರೆ ಅನೇಕರಿಗೆ ಭಯ. ಅವರ ಟೀಂನಲ್ಲಿದ್ದರೆ ಸೇವ್ ಆಗಬಹುದು ಅನ್ನೋದು ಅನೇಕರ ನಂಬಿಕೆ. ಆದರೆ, ಈ ನಂಬಿಕೆಯಲ್ಲಿ ನಿಜವಿಲ್ಲ. ಈ ವರೆಗೆ ಎಲಿಮಿನೇಟ್ ಆದ ಬಹುತೇಕರು ಅವರ ಟೀಂನವರೇ. ವಿನಯ್ ಗೌಡಗೆ ಕಾರ್ತಿಕ್ ಬಕೆಟ್ ಹಿಡಿಯುತ್ತಿದ್ದಾರೆ ಅನ್ನೋದು ಸಂಗೀತಾ ಅಭಿಪ್ರಾಯ. ಈ ಬಗ್ಗೆ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದ ಸ್ನೇಹಿತ್

ನಡೆದ ಟಾಸ್ಕ್​ನಲ್ಲಿ ಕಾರ್ತಿಕ್ ಅವರು ವಿನಯ್ ಅವರನ್ನು ಓಲೈಸಲು ಪ್ರಯತ್ನಿಸಿದಂತೆ ಕಂಡುಬಂತು. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಈ ಪ್ರಶ್ನೆ ಸಂಗೀತಾ ಮನದಲ್ಲೂ ಎದ್ದಿದೆ. ಈ ಬಗ್ಗೆ ಅವರು ಡ್ರೋನ್ ಪ್ರತಾಪ್ ಬಳಿ ಚರ್ಚೆ ಮಾಡಿದ್ದಾರೆ. ‘ಕಾರ್ತಿಕ್ ಯಾಕೆ ಹಾಗೆ ಆಡ್ತಾ ಇದಾನೆ? ಅವನು ಹೋಗಿ ವಿನಯ್​ಗೆ ಬಕೆಟ್ ಹಿಡಿಯುತ್ತಿದ್ದಾನೆ. ಬಹುಶಃ ನಾನು ನಿನ್ನ ಜೊತೆ ಕ್ಲೋಸ್ ಆಗಿರೋದು ಅವನಿಗೆ ಇಷ್ಟ ಆಗುತ್ತಿಲ್ಲ ಅನಿಸುತ್ತಿದೆ’ ಎಂದಿದ್ದಾರೆ ಸಂಗೀತಾ.

ಇದನ್ನೂ ಓದಿ: ಹೆಚ್ಚುತ್ತಲೇ ಇದೆ ಬಿಗ್ ಬಾಸ್ ಟಿಆರ್​ಪಿ; ಸಂಕಷ್ಟದಲ್ಲಿ ‘ಸೀತಾ ರಾಮ’ ಧಾರಾವಾಹಿ

‘ಬಿಗ್ ಬಾಸ್ ಮನೆಯಲ್ಲಿ ಬ್ರೋ ಕೋಡ್ ಇದೆ. ಅಂದರೆ, ಸೇವ್ ಮಾಡೋ ಪರಿಸ್ಥಿತಿ ಬಂದರೆ ಆ ಟೀಂನವರು ವಿನಯ್​ನ ಸೇವ್ ಮಾಡಬೇಕು. ಇದು ಬ್ರೋ ಕೋಡ್’ ಎಂದರು ಸಂಗೀತಾ. ಈ ವಿಚಾರ ತಿಳಿದು ಪ್ರತಾಪ್ ಅಚ್ಚರಿಗೊಂಡರು. ಸಂಗೀತಾ ಹೇಳಿರುವ ಮಾತು ಅನೇಕರಿಗೆ ಮೇಲ್ನೋಟಕ್ಕೆ ನಿಜ ಎನಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್