ಹೆಚ್ಚುತ್ತಲೇ ಇದೆ ಬಿಗ್ ಬಾಸ್ ಟಿಆರ್ಪಿ; ಸಂಕಷ್ಟದಲ್ಲಿ ‘ಸೀತಾ ರಾಮ’ ಧಾರಾವಾಹಿ
Kannada Serials TRP: ನಗರ ಭಾಗದಲ್ಲಿ ವಾರದ ದಿನಗಳಲ್ಲಿ 7.6 ಹಾಗೂ ವಾರಾಂತ್ಯದಲ್ಲಿ 8.4 ರೇಟಿಂಗ್ ಪಡೆದಿದೆ. ಬಿಗ್ ಬಾಸ್ನಲ್ಲಿ ಈ ಬಾರಿ ಜಗಳ ಜೋರಾಗಿದೆ. ಈ ಕಾರಣಕ್ಕೆ ವೀಕ್ಷಕರನ್ನು ಶೋ ಸೆಳೆಯುತ್ತಿದೆ.
ಈ ಬಾರಿ ಬಿಗ್ ಬಾಸ್ (Bigg Boss) ಎಲ್ಲರ ಗಮನ ಸೆಳೆಯುತ್ತಿದೆ. ಒಳ್ಳೆಯ ಟಿಆರ್ಪಿ ಪಡೆದುಕೊಂಡು ಈ ಶೋ ಮುನ್ನುಗ್ಗುತ್ತಿದೆ. ವಾರ ಕಳೆದಂತೆ ಬಿಗ್ ಬಾಸ್ ನೋಡುವರ ಸಂಖ್ಯೆ ಹೆಚ್ಚುತ್ತಿದೆ. ಇತರ ವಾಹಿನಿಗಳಲ್ಲಿ ಆ ಸಂದರ್ಭದಲ್ಲಿ ಪ್ರಸಾರ ಆಗುವ ಧಾರಾವಾಹಿಗಳ ಟಿಆರ್ಪಿ ಮೇಲೆ ಬಿಗ್ ಬಾಸ್ ಪ್ರಭಾವ ಬೀರಿದೆ. ಹಾಗಾದರೆ, ಬಿಗ್ ಬಾಸ್ಗೆ ಸಿಗುತ್ತಿರುವ ಟಿಆರ್ಪಿ ಎಷ್ಟು? ಉಳಿದ ಧಾರಾವಾಹಿಗಳು ಪಡೆಯುತ್ತಿರುವ ಟಿಆರ್ಪಿ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್
ಬಿಗ್ ಬಾಸ್ ವಾರದ ದಿನ ಹಾಗೂ ವಾರಾಂತ್ಯದಲ್ಲಿ ಒಳ್ಳೆಯ ಟಿಆರ್ಪಿಯನ್ನೇ ಪಡೆಯುತ್ತಿದೆ. ಈ ಶೋ ರಾತ್ರಿ 9:30ಕ್ಕೆ ಪ್ರಸಾರ ಆರಂಭಿಸುವುದರಿಂದ ಇದನ್ನು ನೋಡುಗರ ಸಂಖ್ಯೆ ಕಡಿಮೆ ಆಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಈ ಊಹೆ ತಪ್ಪಾಗಿತ್ತು. ನಗರ ಭಾಗದಲ್ಲಿ ವಾರದ ದಿನಗಳಲ್ಲಿ 7.6 ಹಾಗೂ ವಾರಾಂತ್ಯದಲ್ಲಿ 8.4 ರೇಟಿಂಗ್ ಪಡೆದಿದೆ. ಬಿಗ್ ಬಾಸ್ನಲ್ಲಿ ಈ ಬಾರಿ ಜಗಳ ಜೋರಾಗಿದೆ. ಈ ಕಾರಣಕ್ಕೆ ವೀಕ್ಷಕರನ್ನು ಶೋ ಸೆಳೆಯುತ್ತಿದೆ. ಕಲರ್ಸ್ ಕನ್ನಡ ವಾಹಿನಿ ಹಾಗೂ ಜಿಯೋ ಸಿನಿಮಾ ಒಟಿಟಿಯಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.
ಧಾರಾವಾಹಿಗಳ ಟಿಆರ್ಪಿ.. (ನಗರ ಹಾಗೂ ಗ್ರಾಮೀಣ ಭಾಗ)
ಟಿಆರ್ಪಿ ಲಿಸ್ಟ್ನಲ್ಲಿ ಮೊದಲ ಸ್ಥಾನದಲ್ಲಿ ಎಂದಿನಂತೆ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಈ ಧಾರಾವಾಹಿ ವರ್ಷದಿಂದ ಮೊದಲ ಸ್ಥಾನ ಕಾಪಾಡಿಕೊಂಡು ಬರುತ್ತಿದೆ. ಟಿಆರ್ಪಿ ಕೊಂಚ ಕಡಿಮೆ ಆದರೂ, ಮೊದಲ ಸ್ಥಾನಕ್ಕೆ ಕುತ್ತು ಬಂದಿಲ್ಲ. ಎರಡನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಇದೆ.
ಇದನ್ನೂ ಓದಿ: ಶಾಲೆಯಾಗಿ ಬದಲಾದ ಬಿಗ್ ಬಾಸ್ ಮನೆ; ಇಲ್ಲಿದೆ ನೋಡಿ ಫನ್ ವಿಡಿಯೋ
ನಾಲ್ಕನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮಿ’, ಐದನೇ ಸ್ಥಾನದಲ್ಲಿ ‘ಶ್ರೀರಸ್ತು ಶುಭಮಸ್ತು ಧಾರಾವಾಹಿ ಇದೆ. ದಿನ ಕಳೆದಂತೆ ‘ಸೀತಾ ರಾಮ’ ಧಾರಾವಾಹಿಯ ಟಿಆರ್ಪಿ ಕುಗ್ಗುತ್ತಿದೆ. ಆರಂಭದಲ್ಲಿ ಈ ಧಾರಾವಾಹಿ ಎಲ್ಲರಿಂದ ಮೆಚ್ಚುಗೆ ಪಡೆದಿತ್ತು. ಆದರೆ, ದಿನ ಕಳೆದಂತೆ ಧಾರಾವಾಹಿಗೆ ಬೇಡಿಕೆ ಕಡಿಮೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ