AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರವೇ ಕೊನೆಯಾಗಲಿದೆ ವರ್ತೂರು ಸಂತೋಷ್-ತುಕಾಲಿ ಫ್ರೆಂಡ್​ಶಿಪ್​; ಸಿಕ್ಕಿದೆ ಸೂಚನೆ

ಇಬ್ಬರೂ ಸಂತೋಷ್ ಎಲ್ಲೇ ಹೋದರೂ ಇಬ್ಬರೂ ಒಟ್ಟಿಗೇ ಇರುತ್ತಾರೆ. ಒಂದೇ ತಂಡದಲ್ಲಿ ಆಡಲು ಬಯಸುತ್ತಾರೆ. ಆದರೆ, ಇವರ ಫ್ರೆಂಡ್​ಶಿಪ್ ಶೀಘ್ರವೇ ಕೊನೆ ಆಗಬಹುದು ಅನ್ನೋದು ಪ್ರತಾಪ್ ಅಭಿಪ್ರಾಯ.

ಶೀಘ್ರವೇ ಕೊನೆಯಾಗಲಿದೆ ವರ್ತೂರು ಸಂತೋಷ್-ತುಕಾಲಿ ಫ್ರೆಂಡ್​ಶಿಪ್​; ಸಿಕ್ಕಿದೆ ಸೂಚನೆ
ವರ್ತೂರು-ತುಕಾಲಿ
ರಾಜೇಶ್ ದುಗ್ಗುಮನೆ
|

Updated on:Dec 14, 2023 | 10:27 AM

Share

ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ (Tukali Santosh) ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಒಬ್ಬರ ಮಾತನ್ನು ಒಬ್ಬರು ಕೇಳುತ್ತಿದ್ದಾರೆ. ಇಬ್ಬರ ಫ್ರೆಂಡ್​ಶಿಪ್ ಬ್ರೇಕ್ ಆಗುವ ಸೂಚನೆ ಸಿಕ್ಕಿದೆ. ಇಬ್ಬರ ಜೊತೆಯೂ ಒಳ್ಳೆಯ ಒಡನಾಟ ಹೊಂದಿರುವ ಪ್ರತಾಪ್ ಅವರು ಈ ಬಗ್ಗೆ ಸೂಚನೆ ನೀಡಿದ್ದಾರೆ. ಇವರ ಮಧ್ಯೆ ಯಾವುದೂ ಸರಿ ಇಲ್ಲ ಎಂದು ಅವರು ಹೇಳಿದ್ದಾರೆ. ಹಾಗಾದಲ್ಲಿ ಸ್ಪರ್ಧೆ ಮತ್ತಷ್ಟು ಹೆಚ್ಚಲಿದೆ. ಕಲರ್ಸ್ ಕನ್ನಡ, ಜಿಯೋ ಸಿನಿಮಾದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ.

ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಆರಂಭದಲ್ಲಿ ಬೇರೆ ಬೇರೆ ಆಗೇ ಇದ್ದರು. ಯಾವಾಗ ವರ್ತೂರು ಸಂತೋಷ್ ಅವರು ಹೊರಗೆ ಹೋಗಿ ಬಂದರೋ ತುಕಾಲಿ ಜೊತೆ ಫ್ರೆಂಡ್​ಶಿಪ್ ಬೆಳೆಯಿತು. ಈಗ ಎಲ್ಲೇ ಹೋದರೂ ಇಬ್ಬರೂ ಒಟ್ಟಿಗೇ ಇರುತ್ತಾರೆ. ಒಂದೇ ತಂಡದಲ್ಲಿ ಆಡಲು ಬಯಸುತ್ತಾರೆ. ಆದರೆ, ಇವರ ಫ್ರೆಂಡ್​ಶಿಪ್ ಶೀಘ್ರವೇ ಕೊನೆ ಆಗಬಹುದು ಅನ್ನೋದು ಪ್ರತಾಪ್ ಅಭಿಪ್ರಾಯ.

ಇದನ್ನೂ ಓದಿ: ‘ನಾನೇ ಕಾರಣ ಅನಿಸುತ್ತೆ’; ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರು ಸಂತೋಷ್​ಗೆ ಮಾತ್ರ

ಕಾರ್ತಿಕ್ ಹಾಗೂ ಸಂಗೀತಾ ಜೊತೆ ಡ್ರೋನ್ ಪ್ರತಾಪ್ ಕುಳಿತಿದ್ದರು. ಈ ವೇಳೆ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ವರ್ತೂರು ಸಂತೋಷ್​ ಅವರಿಗೆ ಕಾಮಿಡಿ ಸಂತೋಷ್​ ಮೇಲೆ ಅಸಮಧಾನ ಇದೆ. ಮೊದಲಿದ್ದ ಬಾಂಡಿಂಗ್ ಈಗ ಇಲ್ಲ. ಅದನ್ನು ಎಲ್ಲಿಯೂ ತೋರಿಸಿಕೊಳ್ಳುತ್ತಿಲ್ಲ. ಇದು ಸರಿ ಹೋದರೂ ಹೋಗಬಹುದು’ ಎಂದಿದ್ದಾರೆ ಡ್ರೋನ್ ಪ್ರತಾಪ್.

ಇದನ್ನೂ ಓದಿ: ‘ನನಗೆ ಪ್ರತಾಪ್​ ತುಂಬ ಇಷ್ಟ’: ಕನ್ಫೆಷನ್​​ ರೂಮ್​ನಲ್ಲಿ ಕಣ್ಣೀರು ಹಾಕಿಕೊಂಡು ಹೇಳಿದ ಸಂಗೀತಾ

ಪ್ರತಾಪ್ ಅವರು ಬಿಗ್ ಬಾಸ್​ನಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ಅವರಿಗೆ ಇಬ್ಬರೂ ಸಂತೋಷ್ ಜೊತೆ ಒಳ್ಳೆಯ ಬಾಂಧವ್ಯ ಇದೆ. ಹೀಗಾಗಿ ಅವರ ಊಹೆ ಸರಿ ಆದರೂ ಅಚ್ಚರಿ ಏನಿಲ್ಲ. ಈ ವಾರ ಫನ್ ಟಾಸ್ಕ್​ ನೀಡಲಾಗುತ್ತಿದೆ. ಹೀಗಾಗಿ, ಹೆಚ್ಚು ಜಗಳ ನಡೆದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:21 am, Thu, 14 December 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ