ಮೊಟ್ಟೆ ಯಾರಿಗೆ? ಅವಿನಾಶ್ ಉತ್ತರ ಕೇಳಿ ಬಿದ್ದು-ಬಿದ್ದು ನಕ್ಕ ವರ್ತೂರು-ತುಕಾಲಿ

Bigg Boss: ಬಿಗ್​ಬಾಸ್ ಮನೆಯಲ್ಲಿ ಮೊಟ್ಟೆಗಾಗಿ ಜಗಳ ನಡೆಯುವುದು ಸಾಮಾನ್ಯ ಆದರೆ ಬುಧವಾರದ ಎಪಿಸೋಡ್​ನಲ್ಲಿ ಮೊಟ್ಟೆಯಿಂದಾಗಿ ಸಖತ್ ಕಾಮಿಡಿ ನಡೆದಿದೆ. ಏನದು?

ಮೊಟ್ಟೆ ಯಾರಿಗೆ? ಅವಿನಾಶ್ ಉತ್ತರ ಕೇಳಿ ಬಿದ್ದು-ಬಿದ್ದು ನಕ್ಕ ವರ್ತೂರು-ತುಕಾಲಿ
ಅವಿನಾಶ್-ಸಂತು
Follow us
ಮಂಜುನಾಥ ಸಿ.
|

Updated on: Dec 13, 2023 | 11:40 PM

ಬಿಗ್​ಬಾಸ್ (BiggBoss) ಮನೆಯಲ್ಲಿ ತುಕಾಲಿ ಸಂತೋಷ್ (Tukali Santhosh) ಮತ್ತು ವರ್ತೂರು ಸಂತೋಷ್ ಗಳಸ್ಯ-ಕಂಠಸ್ಯ. ಸದಾ ಒಟ್ಟಿಗೆ ಕೂತು ಮನೆಯ ಇತರೆ ಸದಸ್ಯರ ಬಗ್ಗೆ ತಮಗೆ ತೋಚಿದಂತೆ ಮಾತನಾಡುತ್ತಾ, ತಮಾಷೆ ಮಾಡುತ್ತಾ ಇರುತ್ತಾರೆ. ವೈಲ್ಡ್ ಕಾರ್ಡ್​ನಲ್ಲಿ ಎಂಟ್ರಿ ಕೊಟ್ಟಿರುವ ಅವಿನಾಶ್ ಅವರನ್ನು ಸಹ ಜೊತೆಗೆ ಸೇರಿಸಿಕೊಂಡಿರುವ ತುಕಾಲಿ ಮತ್ತು ವರ್ತೂರು, ಅವಿನಾಶ್​ ಅನ್ನು ಆಡಿಕೊಂಡು ಒಳ್ಳೆಯ ಟೈಂಪಾಸ್ ಮಾಡುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಅವಿನಾಶ್ ಅನ್ನು ತಮಾಷೆ ಮಾಡಿದ್ದಾರೆ. ಆದರೆ ಬುಧವಾರದ ಎಪಿಸೋಡ್​ನಲ್ಲಿ ಅವಿನಾಶ್ ತಾವೇ ಬಂದು ಹಳ್ಳಕ್ಕೆ ಬಿದ್ದರು.

ಬಿಗ್​ಬಾಸ್, ಯಾರಿಗೆ ಹೇಗೆ ಅರ್ಥವಾಗಿದ್ದಾರೆ ತಿಳಿದುಕೊಳ್ಳುವ ಕುತೂಹಲ ಇದೆ ಎಂಬ ಕಾರಣಕ್ಕೆ ಬಿಗ್​ಬಾಸ್ ಮನೆಯ ಸದಸ್ಯರಿಗೆ ಟಾಸ್ಕ್ ಒಂದನ್ನು ನೀಡಿ, ನೀವು ಅರಿತುಕೊಂಡಂತೆ ಬಿಗ್​ಬಾಸ್ ಚಿತ್ರ ಬರೆಯಿರಿ ಎಂದರು. ಅಂತೆಯೇ ಎಲ್ಲರೂ ಚಿತ್ರ ಬಿಡಿಸಿದರು. ಹಲವರು ಬಿಗ್​ಬಾಸ್ ಅನ್ನು ವ್ಯಕ್ತಿಯ ರೀತಿಯಲ್ಲಿಯೇ ಚಿತ್ರ ಬಿಡಿಸಿದರು. ವಿನಯ್ ತುಸು ಭಿನ್ನವಾಗಿ ಮತ್ತು ಚೆನ್ನಾಗಿ ಚಿತ್ರ ಬಿಡಿಸಿದ್ದರು.

ಇದನ್ನೂ ಓದಿ:ಆ ಒಂದು ವಿಚಾರಕ್ಕೆ ಎಲ್ಲರ ಮೆಚ್ಚುಗೆ ಪಡೆದ ವಿನಯ್ ಗೌಡ

ಆದರೆ ಟಾಸ್ಕ್​ನ ಆರಂಭದಿಂದಲೂ ಚಿತ್ರ ಬಿಡಿಸಲು ಪರದಾಡಿದ ತುಕಾಲಿ ಕೊನೆಗೆ, ಮೊಟ್ಟೆ ಇಡುವ ಕೋಳಿಯ ಚಿತ್ರ ಬಿಡಿಸಿ, ನನ್ನ ಪ್ರಕಾರ ಬಿಗ್​ಬಾಸ್ ಎಂದರೆ ಮೊಟ್ಟೆ ಇಡುವ ಕೋಳಿ ಎಂದರು. ಟಾಸ್ಕ್​ ಎಲ್ಲ ಮುಗಿದ ಮೇಲೆ ವರ್ತೂರು ಹಾಗೂ ತುಕಾಲಿ ಇದೇ ವಿಷಯವಾಗಿ ಚರ್ಚೆ ಮಾಡುತ್ತಿದ್ದರು. ಅಲ್ಲಿಗೆ ವಿನಯ್ ಹಾಗೂ ಅವಿನಾಶ್ ಸಹ ಬಂದರು.

ಆಗ ವಿನಯ್, ಅವಿನಾಶ್ ಅವರನ್ನು ಉದ್ದೇಶಿಸಿ, ತುಕಾಲಿ ಹಾಗೂ ವರ್ತೂರು ಅವರ ಮನೆಗಳು ಅಕ್ಕ-ಪಕ್ಕದಲ್ಲಿವೆ. ನಡುವೆ ಕಾಂಪೌಂಡ್ ಇದೆ. ವರ್ತೂರು ಅವರ ಹುಂಜ, ಕಾಂಪೌಂಡ್ ಮೇಲೆ ಕೂತು ವರ್ತೂರು ಅವರ ಜಾಗದಲ್ಲಿ ಮೊಟ್ಟೆ ಇಟ್ಟರೆ ಆ ಮೊಟ್ಟೆ ಯಾರಿಗೆ ಸೇರುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಯನ್ನು ಕೇಳಿಸಿಕೊಂಡ ಅವಿನಾಶ್ ಸ್ವಲ್ಪ ಹೊತ್ತು ಯೋಚಿಸಿ ತುಕಾಲಿ ಅವರಿಗೆ ಸೇರುತ್ತದೆ ಎಂದು ಉತ್ತರ ನೀಡಿದ್ದಾರೆ.

ಉತ್ತರ ಕೇಳುತ್ತಿದ್ದಂತೆ, ವರ್ತೂರು, ‘ಈ ಬಾರಿ ನೀವೇ ಬಿಗ್​ಬಾಸ್ ಗೆಲ್ಲುವುದು’ ಎಂದು ಹೇಳಿ ನಗುತ್ತಾ ಹೊರಟು ಹೋದರೆ, ತುಕಾಲಿ ಹಾಗೂ ವಿನಯ್ ನಕ್ಕು ನಕ್ಕು ಸುಸ್ತಾಗಿದ್ದಾರೆ. ಬಳಿಕ, ತುಕಾಲಿ, ಹುಂಜ ಎಂದಾದರೂ ಮೊಟ್ಟೆ ಇಡುತ್ತಾ? ಎಂದು ಕೇಳಿದಾಗ, ಅಯ್ಯೋ, ಇಲ್ಲ ನಾನು ಪ್ರಶ್ನೆ ಸರಿಯಾಗಿ ಕೇಳಿಸಿಕೊಂಡಿಲ್ಲ ಎಂದು ಸಫಾಯಿ ಕೊಟ್ಟಿದ್ದಾರೆ ಅವಿನಾಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಮ್ಯಾಕ್ಸ್’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮ; ಲೈವ್​ ವಿಡಿಯೋ ನೋಡಿ..
‘ಮ್ಯಾಕ್ಸ್’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮ; ಲೈವ್​ ವಿಡಿಯೋ ನೋಡಿ..
ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ
ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!
ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು
ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು