ಬಿಗ್​ಬಾಸ್ ಮನೆಯಲ್ಲಿ ನಗು, ಹಾಡು-ನೃತ್ಯ: ಸ್ಟಾರ್​ ವಿದ್ಯಾರ್ಥಿಗಳಾಗಿದ್ಯಾರು?

Bigg Boss: ಬಿಗ್​ಬಾಸ್ ಮನೆಯಲ್ಲಿ ಇಂದು ಯಾವ-ಯಾವ ತರಗತಿ ನಡೆಯಿತು? ವಿನಯ್​ಗೆ ಲವ್ ಯೂ ಎಂದು ಸ್ಟಾರ್ ನೀಡಿದರು ಸಂಗೀತಾ? ಕಾರಣವೇನು?

ಬಿಗ್​ಬಾಸ್ ಮನೆಯಲ್ಲಿ ನಗು, ಹಾಡು-ನೃತ್ಯ: ಸ್ಟಾರ್​ ವಿದ್ಯಾರ್ಥಿಗಳಾಗಿದ್ಯಾರು?
ಬಿಗ್​ಬಾಸ್
Follow us
ಮಂಜುನಾಥ ಸಿ.
|

Updated on: Dec 13, 2023 | 11:18 PM

ಬಿಗ್​ಬಾಸ್ (Bigg Boss) ಕನ್ನಡ ಸೀಸನ್ 10ರಲ್ಲಿ ಕಳೆದ ವಾರ ನಡೆದಿದ್ದ ಜಗಳ-ಕಿತ್ತಾಟಕ್ಕೆ ಈ ವಾರ ಬ್ರೇಕ್ ದೊರೆತಿದೆ. ವಾರದ ಆರಂಭದಿಂದಲೇ ತಮಾಷೆಯ ಮತ್ತು ಕ್ರಿಯಾಶೀಲತೆಗೆ ಅವಕಾಶವಿರುವ ಟಾಸ್ಕ್​ಗಳನ್ನು ಬಿಗ್​ಬಾಸ್ ನೀಡಿದ್ದಾರೆ. ಟಾಸ್ಕ್​ಗಳನ್ನು ಆಡುತ್ತಾ ಮನೆಯ ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದ್ದಾರೆ.

ಶಾಲೆ ಮಕ್ಕಳಂತೆ ವೇಷ ಧರಿಸಿ ಶಾಲೆಯ ವಾತಾವರಣ ಮರುಸೃಷ್ಟಿ ಮಾಡುವ ಟಾಸ್ಕ್ ಅನ್ನು ಬಿಗ್​ಬಾಸ್ ಈ ವಾರ ನೀಡಿದ್ದಾರೆ. ಮಂಗಳವಾರದ ಎಪಿಸೋಡ್​ನಲ್ಲಿ ಡ್ರೋನ್ ಪ್ರತಾಪ್, ಮೈಖಲ್, ಪವಿ, ತನಿಷಾ ಅವರುಗಳು ಶಿಕ್ಷಕರಾಗಿದ್ದರು. ಚೆನ್ನಾಗಿ ಪಾಠ ಕೇಳಿ, ತರಗತಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಸ್ಟಾರ್ ನೀಡಬೇಕಾಗಿದೆ. ಅಂತೆಯೇ ಚೆನ್ನಾಗಿ ಪಾಠ ಮಾಡಿದ ಶಿಕ್ಷಕರಿಗೆ, ವಿದ್ಯಾರ್ಥಿಗಳು ಶಹಭಾಸ್ ಗಿರಿ ನೀಡಬೇಕಿದೆ.

ನಿನ್ನೆ ತರಗತಿಯಲ್ಲಿ ವಿದ್ಯಾರ್ಥಿಗಳು ಸಖತ್ ತರ್ಲೆ, ತಮಾಷೆ ಮಾಡಿದ್ದರು. ಆದರೆ ಇಂದಿನ ತರಗತಿಗಳು ನಿನ್ನೆಗೆ ಹೋಲಿಸಿದರೆ ತುಸು ಫಲದಾಯಕವಾಗಿದ್ದವು. ಇಂದಿನ ತರಗತಿಗಳಲ್ಲಿ ತುಕಾಲಿ ಸಂತು ಇಂಗ್ಲೀಷ್ ಮೇಷ್ಟ್ರಾಗಿದ್ದರು. ಅವರ ಇಂಗ್ಲೀಷ್​ಗೆ ವಿದ್ಯಾರ್ಥಿಗಳು ನಕ್ಕು ಸುಸ್ತಾದರು. ಕನ್ನಡ ಸಿನಿಮಾ ಡೈಲಾಗ್​ಗಳನ್ನು ಇಂಗ್ಲೀಷ್​ನಲ್ಲಿ ಹೇಳಿಸಿದ್ದು ಸಖತ್ ಆಗಿತ್ತು. ವಿದ್ಯಾರ್ಥಿಗಳು ಮೇಷ್ಟ್ರನ್ನು ಸಖತ್ ಗೋಳು ಹೊಯ್ದುಕೊಂಡರು.

ಇದನ್ನೂ ಓದಿ:ಬಿಗ್​ಬಾಸ್ ಪ್ರಾಥಮಿಕ ಪಾಠಶಾಲೆ ನೋಡಿ ಹೇಗಿದೆ: ಇಲ್ಲಿವೆ ಚಿತ್ರಗಳು

ಬಳಿಕ ಬಂದ ನಮ್ರತಾ ಟೀಚರ್, ವಿದ್ಯಾರ್ಥಿಗಳಿಗೆ ಡ್ಯಾನ್ಸ್ ಮತ್ತು ನಾಟಕ ಹೇಳಿಕೊಟ್ಟರು. ಒಳ್ಳೆಯ ಡ್ಯಾನ್ಸರ್ ಆದ ನಮ್ರತಾ ಎಲ್ಲರಿಂದಲೂ ಸಖತ್ ಆಗಿ ಡ್ಯಾನ್ಸ್ ಮಾಡಿಸಿದರು. ವರ್ತೂರು, ಪ್ರತಾಪ್​ರು ನೃತ್ಯ ಮಾಡಿದ್ದು ಮಜವಾಗಿತ್ತು. ಸ್ಟಾರ್ ಸಿಕ್ಕಿದ್ದು ಪ್ರತಾಪ್​ಗೆ.

ಬಳಿಕ ಬಂದ ಸಂಗೀತಾ, ಅಧ್ಯಾತ್ಮದ ತರಗತಿ ತೆಗೆದುಕೊಂಡರು. ಅವರ ತರಗತಿಯನ್ನು ತುಸು ಗಂಭೀರವಾಗಿ ವಿದ್ಯಾರ್ಥಿಗಳು ಕೇಳಿದರು. ಅವರು ತೋರಿಸಿದ ನೀರಿನ ಪ್ರಾತ್ಯಕ್ಷಿಕೆ ಚೆನ್ನಾಗಿತ್ತು, ನಮ್ಮಲ್ಲಿರುವ ಋಣಾತ್ಮಕ ಆಲೋಚನೆಗಳನ್ನು ದೂರ ತಳ್ಳುವ ಏಕೈಕ ಮಾರ್ಗ ಧನಾತ್ಮಕ ಆಲೋಚನೆಗಳು ಎಂದರು. ಸಂಗೀತಾ ಮಾಡಿಸಿದ ಟಾಸ್ಕ್​ನಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡರು ಆ ಸಮಯದಲ್ಲಿ ಪವಿ ತಮ್ಮ ವೈಯಕ್ತಿಕ ವಿಷಯ ನೆನದು ಕಣ್ಣೀರು ಹಾಕಿದರು. ವಿನಯ್​ಗೆ ಸ್ಟಾರ್ ನೀಡಿದ ಸಂಗೀತಾ, ವಿನಯ್ ಸೇರಿದಂತೆ ಎಲ್ಲರಿಗೂ ಲವ್​ ಯೂ ಹೇಳಿದರು. ಎಲ್ಲರೂ ಪರಸ್ಪರರನ್ನು ಪ್ರೀತಿಸುವಂತೆ, ಗೌರವಿಸುವಂತೆ ಹೇಳಿದರು.

ಬಳಿಕ ಬಂದ ಸಿರಿ ಅವರು ಕ್ರಾಫ್ಟಿಂಗ್ ಮಾಡಿಸಿದರು. ವಿದ್ಯಾರ್ಥಿಗಳಿಂದ ಹೃದಯ ಮಾಡಿಸಿದರು. ಬೋಟ್ ಮಾಡಿಸಿ ಅದನ್ನು ಸ್ವಿಮ್ಮಿಂಗ್ ಪೂಲ್​ನಲ್ಲಿ ತೇಲಿ ಬಿಟ್ಟರು. ಒಟ್ಟಾರೆ ಮನೆಯ ಸ್ಪರ್ಧಿಗಳೆಲ್ಲ ಟಾಸ್ಕ್​ ಅನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಟಾಸ್ಕ್ ಮುಗಿದ ಬಳಿಕ, ಮೈಖಲ್, ಬಿಗ್​ಬಾಸ್ ಇನ್ನು ಮುಂದೆ ಇಂಥಹದೇ ಟಾಸ್ಕ್​ಗಳನ್ನು ನೀಡಿ ಎಂದು ಕೇಳಿಕೊಂಡರು ಸಹ. ಎಪಿಸೋಡ್​ನ ಅಂತ್ಯಕ್ಕೆ ಕಡಿಮೆ ದೂರು ಪಡೆದ ಶಿಕ್ಷಕರು, ಸಿರಿ ಮತ್ತು ನಮ್ರತಾ, ಹೆಚ್ಚು ಸ್ಟಾರ್ ಪಡೆದ ವಿದ್ಯಾರ್ಥಿಗಳು ಡ್ರೋನ್ ಪ್ರತಾಪ್, ಪವಿ ಮತ್ತು ವಿನಯ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ