AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೆ ಆದರೆ ಕಷ್ಟ ಇದೆ; ವೈಯಕ್ತಿಕ ಆಟ ತೋರಿಸಬೇಕಿರುವಾಗ ಮುಂದುವರಿದ ಗುಂಪುಗಾರಿಕೆ…

ಪವಿ, ಸಿರಿ, ವಿನಯ್, ಸಂಗೀತಾ, ಮೈಕಲ್, ಪ್ರತಾಪ್ ನಾಮಿನೇಟ್ ಆದರು. ವಿನಯ್ ಹಾಗೂ ಮೈಕಲ್​ನ ನಾಮಿನೇಷನ್​ನಿಂದ ಹೊರಗೆ ಇಡಬೇಕು ಎಂಬುದು ನಮ್ರತಾ ಉದ್ದೇಶ ಆಗಿತ್ತು. ಆದರೆ, ಹಾಗಾಗಿಲ್ಲ.

ಹೀಗೆ ಆದರೆ ಕಷ್ಟ ಇದೆ; ವೈಯಕ್ತಿಕ ಆಟ ತೋರಿಸಬೇಕಿರುವಾಗ ಮುಂದುವರಿದ ಗುಂಪುಗಾರಿಕೆ…
ನಮ್ರತಾ
Follow us
ರಾಜೇಶ್ ದುಗ್ಗುಮನೆ
|

Updated on: Dec 13, 2023 | 7:33 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ವಿನಯ್ ಅವರು ಗುಂಪು ಕಟ್ಟಿಕೊಂಡಿದ್ದಾರೆ. ಈ ಗ್ರೂಪ್ ಮೊದಲು ದೊಡ್ಡದಾಗಿತ್ತು. ಈಗ ಈ ಗುಂಪಿನಲ್ಲಿ ಇರೋದು ನಮ್ರತಾ, ವಿನಯ್ ಮಾತ್ರ. ತುಕಾಲಿ ಸಂತೋಷ್ ಹಾಗೂ ಮೈಕಲ್ ಆಗಾಗ ಬಂದು ಹೋಗುತ್ತಾರೆ. ಸ್ನೇಹಿತ್ ಹೋದ ಬಳಿಕವಾದರೂ ನಮ್ರತಾ ಬದಲಾಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಲೇ ಇಲ್ಲ. ಅವರು ಮತ್ತೆ ಗುಂಪುಗಾರಿಕೆ ಮುಂದುವರಿಸಿದ್ದಾರೆ. ಈ ಬಗ್ಗೆ ವೀಕ್ಷಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಟಾಸ್ಕ್ ಒಂದನ್ನು ಆಡುವಾಗ ವಿನಯ್, ನಮ್ರತಾ, ತುಕಾಲಿ ಸಂತೋಷ್, ಸ್ನೇಹಿತ್, ರಕ್ಷಕ್, ನೀತು ಒಂದಾಗಿದ್ದರು. ಈ ಗ್ರೂಪ್​ನ ತುಕಾಲಿ ತೊರೆದಿದ್ದಾರೆ. ವಿನಯ್, ನಮ್ರತಾ ಬಿಟ್ಟು ಉಳಿದ ಎಲ್ಲರೂ ಮನೆ ಬಿಟ್ಟು ಹೋಗಿದ್ದಾರೆ. ಇಷ್ಟಾದರೂ ಇವರಿಗೆ ಬುದ್ಧಿ ಬಂದಿಲ್ಲ. ಈಗಲೂ ನಮ್ಮ ಟೀಂ, ನಮ್ಮ ಗ್ರೂಪ್ ಎನ್ನುತ್ತಿದ್ದಾರೆ.

ಇದನ್ನೂ ಓದಿ: ‘ಯಾರೇ ಮಧ್ಯೆ ಬಂದ್ರೂ ನಾನು ಯಾವತ್ತಿದ್ದರೂ ನಿನ್ನ ಫ್ರೆಂಡ್​’: ಕೈ ಜೋಡಿಸಿದ ವಿನಯ್​-ಕಾರ್ತಿಕ್​

ಈ ವಾರದ ನಾಮಿನೇಷನ್​ಗೆ ಟ್ವಿಸ್ಟ್ ಇತ್ತು. ನಾಮಿನೇಷನ್ ಮಾಡುವ ವಿಶೇಷ ಅಧಿಕಾರವನ್ನು ನಮ್ರತಾ ಪಡೆದಿದ್ದರು. ಅದರಂತೆ ಆರು ಜನರ ಹೆಸರನ್ನು ಅವರು ನಾಮಿನೇಟ್ ಮಾಡಿದರು. ನಂತರ ನಾಮಿನೇಟ್ ಮಾಡುವ ಅಧಿಕಾರ ಪಡೆದವರು ಹೋಗಿ ಇಬ್ಬರ ಹೆಸರನ್ನು ಬದಲಿಸುತ್ತಾ ಹೋಗಬೇಕು. ಕೊನೆಗೆ ಪವಿ, ಸಿರಿ, ವಿನಯ್, ಸಂಗೀತಾ, ಮೈಕಲ್, ಪ್ರತಾಪ್ ನಾಮಿನೇಟ್ ಆದರು. ವಿನಯ್ ಹಾಗೂ ಮೈಕಲ್​ನ ನಾಮಿನೇಷನ್​ನಿಂದ ಹೊರಗೆ ಇಡಬೇಕು ಎಂಬುದು ನಮ್ರತಾ ಉದ್ದೇಶ ಆಗಿತ್ತು. ಆದರೆ, ಹಾಗಾಗಿಲ್ಲ.

ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ತುಕಾಲಿ ಸಂತೋಷ್ ಬಳಿ ನಮ್ರತಾ ಮಾತನಾಡಿದ್ದಾರೆ. ‘ಪ್ಲಾನ್ ವಿಫಲವಾಯಿತು. ಇಲ್ಲದಿದ್ದರೆ ಗೇಮ್ ಸಂಪೂರ್ಣವಾಗಿ ನಮ್ಮ ಕಡೆ ತಿರುಗುತ್ತಿತ್ತು’ ಎಂದಿದ್ದಾರೆ ನಮ್ರತಾ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತಿದೆ. ಈಗ ವೈಯಕ್ತಿಕ ಆಟ ಆಡಬೇಕಿದೆ. ಯಾರೇ ನಾಮಿನೇಟ್ ಆದರೂ ವೋಟ್ ಮಾಡಿ ಗೆಲ್ಲಿಸೋದು ವೀಕ್ಷಕರು ಎಂಬುದನ್ನು ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಅನೇಕರು ಹೇಳಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ