AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಖತ್ ಹರ್ಟ್​ ಮಾಡಿದ್ದೇನೆ’; ಸ್ನೇಹಿತ್​ನ ನೆನೆದು ಕಣ್ಣೀರು ಹಾಕಿದ ನಮ್ರತಾ ಗೌಡ

ಎಲಿಮಿನೇಷನ್ ಪೂರ್ಣಗೊಂಡ ಬಳಿಕ ನಮ್ರತಾ ಅವರು ಗಾರ್ಡನ್ ಏರಿಯಾಗೆ ಬಂದು ಕಣ್ಣೀರು ಹಾಕಲು ಆರಂಭಿಸಿದರು. ಸಿರಿ, ಸಂತೋಷ್ ಮೊದಲಾದವರು ಬಂದು ನಮ್ರತಾಗೆ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.

‘ಸಖತ್ ಹರ್ಟ್​ ಮಾಡಿದ್ದೇನೆ’; ಸ್ನೇಹಿತ್​ನ ನೆನೆದು ಕಣ್ಣೀರು ಹಾಕಿದ ನಮ್ರತಾ ಗೌಡ
ಸ್ನೇಹಿತ್-ನಮ್ರತಾ
ರಾಜೇಶ್ ದುಗ್ಗುಮನೆ
|

Updated on: Dec 12, 2023 | 6:57 AM

Share

ಬಿಗ್ ಬಾಸ್ ಮನೆಯಿಂದ ಕಳೆದ ವಾರ ಸ್ನೇಹಿತ್ (Snehith Gowda) ಅವರು ಎಲಿಮಿನೇಟ್ ಆಗಿದ್ದರು. ತಾವು ಔಟ್ ಆಗಬಹುದು ಎಂಬ ಊಹೆ ಅವರಿಗೆ ಇರಲಿಲ್ಲ. ಹೀಗಾಗಿ, ಹಾಯಾಗಿದ್ದರು. ಆದರೆ, ಸುದೀಪ್ ಅವರು ಸ್ನೇಹಿತ್ ಹೆಸರು ಹೇಳುತ್ತಿದ್ದಂತೆ ಎಲ್ಲರಿಗೂ ಒಮ್ಮೆ ಶಾಕ್ ಆಯಿತು. ಸ್ನೇಹಿತ್​ ಆ್ಯಂಡ್ ಗ್ಯಾಂಗ್​ಗೆ ಸಾಕಷ್ಟು ಬೇಸರ ಆಯಿತು. ಅವರು ಹೊರ ಹೋದ ಬಳಿಕ ನಮ್ರತಾ ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ಸ್ನೇಹಿತ್ ಹಾಗೂ ನಮ್ರತಾ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾ ಬಂದಿದ್ದಾರೆ. ನಮ್ರತಾಗೆ ಸಾಕಷ್ಟು ಪ್ರಾಮುಖ್ಯತೆ ಕೊಟ್ಟಿದ್ದರು ಸ್ನೇಹಿತ್. ಇದುವೇ ಅವರಿಗೆ ಮುಳುವಾಗಿದೆ. ಪಕ್ಷಪಾತ ಮಾಡಿದ್ದನ್ನು ಜನರು ಸಹಿಸಿಲ್ಲ. ಹೀಗಾಗಿ, ಅವರಿಗೆ ಕಡಿಮೆ ವೋಟ್ ಬಿದ್ದಿದೆ. ಸ್ನೇಹಿತ್ ಅವರು ಹೊರ ಹೋದ ಬಳಿಕ ನಮ್ರತಾ ಹಾಗೂ ವಿನಯ್ ಇಬ್ಬರೂ ಕಣ್ಣೀರು ಹಾಕಿದ್ದಾರೆ.

ಎಲಿಮಿನೇಷನ್ ಪೂರ್ಣಗೊಂಡ ಬಳಿಕ ನಮ್ರತಾ ಅವರು ಗಾರ್ಡನ್ ಏರಿಯಾಗೆ ಬಂದು ಕಣ್ಣೀರು ಹಾಕಲು ಆರಂಭಿಸಿದರು. ಸಿರಿ, ಸಂತೋಷ್ ಮೊದಲಾದವರು ಬಂದು ನಮ್ರತಾಗೆ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ‘ಸಖತ್ ಹರ್ಟ್​ ಮಾಡಿದ್ದೇನೆ. ಚಾನ್ಸ್​ ಸಿಕ್ಕಿದಾಗೆಲ್ಲ ಬೇಸರ ಮಾಡಿದ್ದೇನೆ. ಸಖತ್ ಬೈದಿದ್ದೇನೆ. ಈಗ ಅವರನ್ನು ಮಿಸ್ ಮಾಡ್ಕೋತಾ ಇದೀನಿ’ ಎಂದರು ನಮ್ರತಾ. ಆಗ ಸಿರಿ ಅವರು ನಮ್ರತಾನ ಸಮಾಧಾನ ಮಾಡಲು ಪ್ರಯತ್ನಿಸಿದರು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಸಂಪೂರ್ಣ ಸೈಲೆಂಟ್ ಆದ ಡ್ರೋನ್ ಪ್ರತಾಪ್; ಇದು ಸುದೀಪ್​ ಪಾಠದ ಎಫೆಕ್ಟ್​

‘ನೀವು ಹೊರಗೆ ಹೋಗಿ ಭೇಟಿ ಮಾಡಬಹುದು. ಇಷ್ಟೇ ಫನ್ ಮಾಡಬಹುದು. ಮೂರು ದಿನ ಮಿಸ್ಸಿಂಗ್ ಫೀಲ್ ಆಗುತ್ತದೆ. ಆ ಬಳಿಕ ಎಲ್ಲವೂ ಸರಿ ಆಗುತ್ತದೆ’ ಎಂದು ಸಿರಿ ಸಮಾಧಾನ ಮಾಡಲು ಪ್ರಯತ್ನಿಸಿದರು. ಅಲ್ಲೇ ಇದ್ದ ಸಂತೋಷ್ ಅವರು, ‘ಇಲ್ಲಿದ್ರೆ ಚಪಾತಿ, ಹೊರಗೆ ಹೋದ್ರೆ ಬಿರಿಯಾನಿ. ಇರವಷ್ಟು ದಿನ ಸಖತ್ ಆಗಿ ಆಡ್ಕೊಂಡು ಇರಬೇಕು’ ಎಂದರು. ಈ ಮಾತನ್ನು ಕೇಳಿ ಯಾರೂ ನಗಲಿಲ್ಲ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
ಕನ್ನಡ ಮಾತನಾಡದಂತೆ ವಾರ್ಡನ್ ಧಮ್ಕಿ: ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ; ಜೆಜೆ ನಗರ ಠಾಣೆಗೆ ಜಮೀರ್ ಭೇಟಿ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ