ಬಿಗ್ ಬಾಸ್​ನಲ್ಲಿ ಸಂಪೂರ್ಣ ಸೈಲೆಂಟ್ ಆದ ಡ್ರೋನ್ ಪ್ರತಾಪ್; ಇದು ಸುದೀಪ್​ ಪಾಠದ ಎಫೆಕ್ಟ್​

ಕಳೆದ ಏಳು ವಾರಗಳಲ್ಲಿ ಸುದೀಪ್ ಅವರು ಡ್ರೋನ್ ಪ್ರತಾಪ್​ಗೆ ಒಮ್ಮೆಯೂ ಬೈದಿಲ್ಲ. ಹೀಗಾಗಿ ತಾವು ಮಾಡಿದ್ದೆಲ್ಲ ಸರಿ ಎಂಬ ಓವರ್ ಕಾನ್ಫಿಡೆನ್ಸ್ ಅವರಲ್ಲಿ ಹುಟ್ಟಿತ್ತು. ಈಗ ಅವರು ಮಾಡಿದ ತಪ್ಪು ನಿರ್ಧಾರದ ವಿಚಾರದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್ ಬಾಸ್​ನಲ್ಲಿ ಸಂಪೂರ್ಣ ಸೈಲೆಂಟ್ ಆದ ಡ್ರೋನ್ ಪ್ರತಾಪ್; ಇದು ಸುದೀಪ್​ ಪಾಠದ ಎಫೆಕ್ಟ್​
ಪ್ರತಾಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 04, 2023 | 10:50 AM

ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್​ಗೆ (Bigg Boss) ಬಂದಾಗ ಆರಂಭದಲ್ಲಿ ಸಖತ್ ಸೈಲೆಂಟ್ ಆಗಿದ್ದರು. ಈ ಕಾರಣಕ್ಕೆ ಮನೆಯ ಅನೇಕರು ಅವರ ಮೇಲೆ ಮುಗಿಬೀಳೋಕೆ ಆರಂಭಿಸಿದರು. ಅವರ ಬಗ್ಗೆ ಆದ ಟ್ರೋಲ್​ಗಳ ಬಗ್ಗೆ ಅನೇಕರು ಮಾತನಾಡಿದರು. ಬಾತ್​ರೂಂಗೆ ಹೋಗಿ ಪ್ರತಾಪ್ ಸಾಕಷ್ಟು ಬಾರಿ ಕಣ್ಣೀರು ಹಾಕಿದ್ದು ಇದೆ. ಈ ವಿಚಾರದಲ್ಲಿ ಅವರನ್ನು ಸುದೀಪ್ ಸಾಕಷ್ಟು ಬಾರಿ ತಿದ್ದುವ ಕೆಲಸ ಮಾಡಿದ್ದರು. ಇದರಿಂದ ಪ್ರತಾಪ್ ಬದಲಾಗಿದ್ದರು. ಈಗ ಅವರು ಮತ್ತೆ ಸೈಲೆಂಟ್ ಮೂಡ್​ಗೆ ಹೋಗಿದ್ದಾರೆ. ಕಳೆದ ವಾರ ನಡೆದ ಒಂದು ಘಟನೆಯೇ ಇದಕ್ಕೆ ಕಾರಣ.

ಕಳೆದ ವಾರ ಡ್ರೋನ್ ಪ್ರತಾಪ್ ಅವರು ತಂಡದ ನಾಯಕನಾಗಿದ್ದರು. ಆದರೆ, ಅವರಿಗೆ ಈ ನಾಯಕತ್ವ ನಿಭಾಯಿಸಲು ಸಾಧ್ಯವಾಗಿಲ್ಲ. ಉಸ್ತುವಾರಿ ಆಗಿದ್ದ ಸಂದರ್ಭದಲ್ಲಿ ಎಲ್ಲವನ್ನೂ ಉತ್ತಮವಾಗಿ ನಿಭಾಯಿಸಿದ್ದ ಅವರು, ತಂಡದ ಲೀಡರ್ ಆದಾಗ ಎಡವಿದ್ದರು. ಅವರ ನಿರ್ಧಾರದಿಂದ ಎಲ್ಲರೂ ಕ್ಯಾಪ್ಟನ್ಸಿ ಓಟದಿಂದ ಹೊರಗೆ ಉಳಿಯಬೇಕಾಯಿತು. ಈ ಕಾರಣಕ್ಕೆ ಪ್ರತಾಪ್​​ಗೆ ಕಳೆದ ವಾರದ ಕಳಪೆ ಸಿಕ್ಕಿತ್ತು. ತಮ್ಮ ತಪ್ಪು ಏನೂ ಇಲ್ಲ ಎಂದು ಪ್ರತಾಪ್ ವಾದಿಸುತ್ತಲೇ ಬಂದರು. ಆದರೆ, ವೀಕೆಂಡ್​ನಲ್ಲಿ ಆಗಿದ್ದೇ ಬೇರೆ.

ಕಳೆದ ಏಳು ವಾರಗಳಲ್ಲಿ ಸುದೀಪ್ ಅವರು ಡ್ರೋನ್ ಪ್ರತಾಪ್​ಗೆ ಒಮ್ಮೆಯೂ ಬೈದಿಲ್ಲ. ಅವರು ಮಾಡಿದ್ದು ತಪ್ಪು ಎಂದು ಹೇಳಿಲ್ಲ. ಅವರ ಕಾಲೆಳೆಯಲು ಬಂದವರಿಗೆ ಸುದೀಪ್ ತಿರುಗೇಟು ಕೊಟ್ಟಿದ್ದರು. ಇದರಿಂದ ಪ್ರತಾಪ್​ಗೆ ಹೊಸ ಹುಮ್ಮಸ್ಸು ಬಂದಿತ್ತು. ತಾವು ಮಾಡಿದ್ದೆಲ್ಲ ಸರಿ ಎಂಬ ಓವರ್ ಕಾನ್ಫಿಡೆನ್ಸ್ ಹುಟ್ಟಿತ್ತು. ಇದಕ್ಕೆ ಸುದೀಪ್ ಹೊಡೆತ ಕೊಟ್ಟಿದ್ದಾರೆ. ಅವರು ಮಾಡಿದ ತಪ್ಪು ನಿರ್ಧಾರದ ವಿಚಾರದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊನೆಯಲ್ಲಿ ತಮ್ಮ ಕ್ಯಾಪ್ಟನ್ಸಿಗೆ ಹತ್ತಕ್ಕೆ ಒಂದು ಅಂಕ ಕೊಟ್ಟುಕೊಂಡಿದ್ದಾರೆ ಅವರು.

ಸುದೀಪ್ ಅವರು ಆಡಿದ ಮಾತು, ಕೊಟ್ಟ ತಿರುಗೇಟಿನಿಂದ ಪ್ರತಾಪ್ ಕೊಂಚ ಕಂಗಾಲಾಗಿದ್ದಾರೆ. ಮುಂದೇನು ಮಾಡಬೇಕು ಎಂಬ ಬಗ್ಗೆ ಅವರಿಗೆ ಚಿಂತೆ ಕಾಡಿದೆ. ಮನೆಯವರಿಗೂ ಅಷ್ಟೇ ಡ್ರೋನ್ ಪ್ರತಾಪ್ ಮೇಲೆ ಇದ್ದ ನಂಬಿಕೆ ಸಂಪೂರ್ಣವಾಗಿ ಹೋಗಿದೆ. ಹೀಗಾಗಿ ಪ್ರತಾಪ್ ಕಾನ್ಫಿಡೆನ್ಸ್ ಕೊಂಚ ತಗ್ಗಿದಂತೆ ಕಂಡಿದೆ.

ಭಾನುವಾರದ ಎಪಿಸೋಡ್​ನಲ್ಲಿ ಪ್ರತಾಪ್ ಸೋಫಾದ ಒಂದು ಅಂಚಿನಲ್ಲಿ ಕುಳಿತಿದ್ದರು. ಅವರು ಸಂಪೂರ್ಣವಾಗಿ ಮೂಲೆಗುಂಪೇ ಆಗಿ ಬಿಟ್ಟಿದ್ದರು. ಸುದೀಪ್ ಮಾಡುತ್ತಿದ್ದ ಕಾಮಿಡಿಗೆ ಅವರು ಹೆಚ್ಚು ನಗುತ್ತಿರಲಿಲ್ಲ. ಪ್ರತಾಪ್ ಮೇಲೆ ಸುದೀಪ್ ಮಾತು ಪ್ರಭಾವ ಬೀರಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ‘ಕೊಟ್ಟ ಮಾತನ್ನು ಉಳಿಸಿಕೊಂಡ್ರಿ’; ನಮ್ರತಾಗೆ ಕಿಚ್ಚನ ಚಪ್ಪಾಳೆ ಕೊಟ್ಟು ಪ್ರತಾಪ್​ನ​ ಕಾಲೆಳೆದ ಸುದೀಪ್

ಪ್ರತಾಪ್ ಒಳ್ಳೆಯ ತಂತ್ರಗಾರ ಎಂದು ಮನೆ ಮಂದಿ ನಂಬಿದ್ದರು. ಆದರೆ, ಕಳೆದ ವಾರ ಅವರು ಆಡಿದ ರೀತಿಯಿಂದ ಎಲ್ಲರೂ ಬೇಸರಗೊಂಡಿದ್ದಾರೆ. ಅವರ ಮೇಲೆ ಇದ್ದ ನಂಬಿಕೆ ಹೋಗಿದೆ. ಈ ನಂಬಿಕೆಯನ್ನು ಮರಳಿ ಪಡೆಯಬೇಕಾದ ಅನಿವಾರ್ಯತೆ ಪ್ರತಾಪ್​ಗೆ ಇದೆ. ಮುಂದಿನ ದಿನಗಳಲ್ಲಿ ಅವರು ಹೇಗೆ ಆಡುತ್ತಾರೆ, ತಮ್ಮನ್ನು ತಾವು ಹೇಗೆ ಸಾಬೀತು ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:12 am, Mon, 4 December 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?