Sign In

By signing in or creating an account, you agree with Associated Broadcasting Company's Terms & Conditions and Privacy Policy.

Snehith Gowda: ‘ನನ್ನ ಗುಂಡಿನಾ ನಾನೇ ತೋಡಿಕೊಂಡೆನಾ?’; ಸುದೀಪ್​ಗೆ ಸ್ನೇಹಿತ್​ ಪ್ರಶ್ನೆ

ಸ್ನೇಹಿತ್ ಗೌಡ ಅವರು ಪ್ರತಿ ವಾರ ಒಂದೊಂದು ಗುಂಡಿ ತೋಡಿಕೊಳ್ಳುತ್ತಿದ್ದಾರೆ. ಪ್ರತಿ ವಾರ ಒಂದೊಂದು ತಪ್ಪು ಮಾಡಿ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ವೀಕೆಂಡ್​ನಲ್ಲೂ ಹೀಗೆಯೇ ಆಗಿದೆ. ಈ ಬಗ್ಗೆ ಸುದೀಪ್ ಅವರು​ ಸ್ನೇಹಿತ್​ನ ಕಾಲೆಳೆದಿದ್ದಾರೆ.

Snehith Gowda: ‘ನನ್ನ ಗುಂಡಿನಾ ನಾನೇ ತೋಡಿಕೊಂಡೆನಾ?’; ಸುದೀಪ್​ಗೆ ಸ್ನೇಹಿತ್​ ಪ್ರಶ್ನೆ
ಮೈಕಲ್, ಸ್ನೇಹಿತ್, ನಮ್ರತಾ
Follow us
ರಾಜೇಶ್ ದುಗ್ಗುಮನೆ
|

Updated on:Dec 04, 2023 | 7:11 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ರ (BBK 10) ಎಂಟನೇ ವಾರ ಹಲವು ವಿಶೇಷತೆಗಳಿಗೆ ಸಾಕ್ಷಿ ಆಯಿತು. ನಾಮಿನೇಟ್ ಆದವರ ಪೈಕಿ ಕೊನೆಯಲ್ಲಿ ಇದ್ದವರು ಮೈಕಲ್ ಅಜಯ್ ಹಾಗೂ ಸ್ನೇಹಿತ್ ಗೌಡ. ಇಬ್ಬರಲ್ಲಿ ಯಾರೊಬ್ಬರನ್ನು ಮನೆಗೆ ಕಳುಹಿಸಲು ಸುದೀಪ್​ಗೆ ಇಷ್ಟ ಇರಲಿಲ್ಲ. ಹೀಗಾಗಿ, ವಿಶೇಷ ಅಧಿಕಾರ ಬಳಸಿ ಇಬ್ಬರನ್ನೂ ಅವರು ಸೇವ್ ಮಾಡಿದ್ದಾರೆ. ಅವರು ಈ ರೀತಿ ಮಾಡುತ್ತಿರುವುದು ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲು. ಈಗ ಸ್ನೇಹಿತ್ (Snehit Gowda) ಅವರು ಉತ್ತಮವಾಗಿ ಆಡುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರತಿ ಹಂತದಲ್ಲಿ ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಿದ್ದೇನೆ ಎಂದೆನಿಸಿದೆ.

ಕಳೆದ ವಾರದ ಲಕ್ಷುರಿ ಬಜೆಟ್​ನಲ್ಲಿ ಸಂಗೀತಾ ಪನೀರ್ ಬೇಕು ಎಂದಿದ್ದರು. ವೆಜ್​ ತಿನ್ನುವವರು ಅವರು ಮಾತ್ರ. ಆದರೆ, ಅದಕ್ಕೆ ಯಾರೂ ಪ್ರಾಮುಖ್ಯತೆ ನೀಡಲೇ ಇಲ್ಲ. ಕೇವಲ 10 ಕೆಜಿ ಚಿಕನ್ ತರಿಸಲಾಯಿತು. ಇದು ಸಂಗೀತಾ ಬೇಸರಕ್ಕೆ ಕಾರಣ ಆಗಿದೆ. ಭಾನುವಾರದ ಎಪಿಸೋಡ್​ನಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ಸ್ನೇಹಿತ್ ಅವರು, ‘ನಾನು ಯಾರೇ ಇದ್ದರೂ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿದ್ದೆ’ ಎಂದರು. ಇದಕ್ಕೆ ಸುದೀಪ್ ತಿರುಗೇಟು ಕೊಟ್ಟರು.

‘ಯಾರೇ ಇದ್ದರೂ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿದ್ದರೇ? ಇದು ಸುಳ್ಳು. ಬಹುಶಃ ಸಂಗೀತಾ ಜಾಗದಲ್ಲಿ ನಮ್ರತಾ ಇದ್ದಿದ್ದರೆ ಲಿಸ್ಟ್​ನಲ್ಲಿ ಪನೀರ್ ತುಂಬಿ ಹೋಗುತ್ತಿತ್ತು’ ಎಂದಿದ್ದಾರೆ ಸುದೀಪ್​. ಆಗ ಸ್ನೇಹಿತ್​ಗೆ ತಾವು ಆ ಮಾತನ್ನು ಹೇಳಬಾರದಿತ್ತು ಎಂದನಿಸಿದೆ. ‘ಬಹುಶಃ ನನ್ನ ಗುಂಡಿಯನ್ನು ನಾನೇ ತೋಡಿಕೊಂಡೆ ಎನಿಸುತ್ತಿದೆ’ ಎಂದು ಸುದೀಪ್ ಎದುರು ಹೇಳಿದರು. ಇದಕ್ಕೆ ಸುದೀಪ್ ಕೊಟ್ಟ ಉತ್ತರ ಮಜವಾಗಿತ್ತು.

ಇದನ್ನೂ ಓದಿ: ‘ಬಿಗ್ ಬಾಸ್ ವಿನ್ ಆಗೋದು ನಾನೇ’ ಎಂದ ವಿನಯ್; ಬೆಂಬಲ ಸೂಚಿಸಿದ ಸ್ನೇಹಿತ್​ಗೆ ವೀಕ್ಷಕರ ಪ್ರಶ್ನೆ

‘ನೀವು ಒಂದು ಗುಂಡಿ ತೋಡಿಕೊಂಡಿಲ್ಲ. ವಾರದಲ್ಲಿ ಒಂದೊಂದು ಗುಂಡಿ ತೋಡಿಕೊಂಡು ಸೈಟ್​ ಮಾಡಿಕೊಂಡಿದ್ದೀರಿ. ಯಾವ ಗುಂಡಿಯಲ್ಲಿ ಮಲಗ್ತೀರಾ, ಯಾರಿಗೋಸ್ಕರ ಮಲಗ್ತೀರಾ, ಯಾವಾಗ ಮಲಗ್ತೀರಾ ನನಗೆ ಗೊತ್ತಿಲ್ಲ’ ಎಂದರು ಸುದೀಪ್. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಸೋ ಸಿನಿಮಾದಲ್ಲಿ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:10 am, Mon, 4 December 23