‘ಬಿಗ್ ಬಾಸ್ ವಿನ್ ಆಗೋದು ನಾನೇ’ ಎಂದ ವಿನಯ್; ಬೆಂಬಲ ಸೂಚಿಸಿದ ಸ್ನೇಹಿತ್​ಗೆ ವೀಕ್ಷಕರ ಪ್ರಶ್ನೆ

ವಿನಯ್ ತಪ್ಪು ಮಾಡಿದರೂ ಸ್ನೇಹಿತ್ ಅದನ್ನು ಬೆಂಬಲಿಸುತ್ತಾರೆ. ಈ ಬಗ್ಗೆ ಸುದೀಪ್ ಅವರು ಅನೇಕ ಬಾರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ನಾನೇ ಬಿಗ್ ಬಾಸ್ ವಿನ್ ಆಗೋದು’ ಎಂದು ವಿನಯ್ ಹೇಳಿದಾಗ ಸ್ನೇಹಿತ್​​ಗೆ ಸಖತ್ ಖುಷಿ ಆಗಿದೆ.

‘ಬಿಗ್ ಬಾಸ್ ವಿನ್ ಆಗೋದು ನಾನೇ’ ಎಂದ ವಿನಯ್; ಬೆಂಬಲ ಸೂಚಿಸಿದ ಸ್ನೇಹಿತ್​ಗೆ ವೀಕ್ಷಕರ ಪ್ರಶ್ನೆ
ಬಿಗ್ ಬಾಸ್ ಸ್ಪರ್ಧಿಗಳು
Follow us
ರಾಜೇಶ್ ದುಗ್ಗುಮನೆ
|

Updated on: Dec 02, 2023 | 8:13 AM

ವಿನಯ್ ಗೌಡ (Vinay Gowda) ಅವರನ್ನು ಸ್ನೇಹಿತ್ ಸದಾ ಬೆಂಬಲಿಸುತ್ತಾ ಬರುತ್ತಿದ್ದಾರೆ. ಹೊರಗಿನಿಂದ ನೋಡುವವರಿಗೆ ಇದು ಬೇರೆಯದೇ ರೀತಿಯಲ್ಲಿ ಕಾಣುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಸುದೀಪ್ ಅವರು ಅನೇಕ ಬಾರಿ ಸ್ನೇಹಿತ್​ಗೆ ಕಿವಿಮಾತು ಹೇಳಿದ್ದಾರೆ. ಆದರೂ ಅವರು ಬದಲಾಗುವ ರೀತಿಯಲ್ಲಿ ಕಾಣುತ್ತಿಲ್ಲ. ‘ಬಿಗ್ ಬಾಸ್​ನ ನಾನು ವಿನ್ ಆಗ್ತೀನಿ’ ಎಂದು ವಿನಯ್ ಹೇಳಿದ್ದಾರೆ. ಇದಕ್ಕೆ ಸ್ನೇಹಿತ್ ಬೆಂಬಲ ಸೂಚಿಸಿದ್ದಾರೆ. ‘ಗೆಲ್ಲೋ ಹಂಬಲ ಇಲ್ಲ ಎಂದಾದರೆ ಮತ್ಯಾಕೆ ಬಿಗ್ ಬಾಸ್​ನಲ್ಲಿ ಇದ್ದೀರಿ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಸ್ನೇಹಿತ್​ನ ಪ್ರಶ್ನೆ ಮಾಡಿದ್ದಾರೆ.

‘ಬಿಗ್ ಬಾಸ್’ನಲ್ಲಿ ವಿನಯ್ ಚಮಚಾ ರೀತಿ ಸ್ನೇಹಿತ್ ವರ್ತಿಸುತ್ತಿದ್ದರು. ಇದರ ಬಗ್ಗೆ ಅನೇಕರು ಅಸಮಾಧಾನ ತೋಡಿಕೊಂಡಿದ್ದರು. ಸುದೀಪ್ ಕೂಡ ಈ ನಡೆಯ ಬಗ್ಗೆ ಪ್ರಶ್ನೆ ಮಾಡಿದ್ದರು. ಆದರೂ ಅವರು ಬದಲಾಗುವ ಸೂಚನೆ ಸಿಗುತ್ತಿಲ್ಲ. ಈಗ ವಿನಯ್ ಅವರು ತಾವು ಬಿಗ್ ಬಾಸ್ ವಿನ್ನರ್ ಎಂದು ಘೋಷಿಸಿದ್ದಾರೆ. ಸ್ನೇಹಿತ್ ಅವರು ಈ ಮಾತಿಗೆ ಖುಷಿಯಾಗಿದ್ದಾರೆ.

ಸ್ನೇಹಿತ್, ವಿನಯ್, ನಮ್ರತಾ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಈ ಗ್ಯಾಂಗ್​ನಿಂದ ಹೊರ ಬಂದು ಆಟ ಆಡಿದ್ದಾರೆ ನಮ್ರತಾ. ಸ್ನೇಹಿತ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ‘ನಾವು ಮೂರು ಜನ ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡಿದ್ದೇವೆ’ ಎಂದರು ಸ್ನೇಹಿತ್. ‘ಟಾಪ್​ ಮೂರರಲ್ಲಿ ಇದ್ದಿದ್ದು ನಾವೇ’ ಎಂದು ವಿನಯ್ ಖುಷಿಪಟ್ಟರು. ಅಲ್ಲದೆ ಈ ವಾರ ಯಾರಿಗೂ ಅನ್ಯಾಯ ಮಾಡಿಲ್ಲ ಎಂಬ ಖುಷಿ ಇದೆ.

ಇದನ್ನೂ ಓದಿ: ‘ಬಳೆ ಹಾಕ್ಕೊಂಡಿಲ್ಲ ಎಂದಿದ್ದು ದೊಡ್ಡ ವಿಷಯ ಆಗೋಯ್ತು’; ವಿನಯ್​ಗೆ ಇನ್ನೂ ಅರಿವಾಗಿಲ್ಲ ಗಂಭೀರತೆ?

‘ಫಿನಾಲೆಯಲ್ಲಿ ಟಾಪ್​ 3ಗೆ ನಾವೇ ಹೋಗಬೇಕು’ ಎಂದು ಸ್ನೇಹಿತ್ ಹೇಳಿದರು. ‘ಯೆಸ್ ನಾವು ಮೂರು ಜನ ಹೋಗುತ್ತೇವೆ. ಆದರೆ, ಅಲ್ಲಿ ವಿನ್ ಆಗೋದು ನಾನೇ’ ಎಂದರು ವಿನಯ್. ‘ನೀವು ವಿನ್ ಆದ್ರೆ ನನಗಿಂತ ಹೆಚ್ಚು ಖುಷಿಪಡುವವರು ಮತ್ತೊಬ್ಬರು ಇರಲ್ಲ’ ಎಂದರು. ಈ ಮಾತು ಚರ್ಚೆ ಆಗುತ್ತಿದೆ. ‘ಮತ್ತೊಬ್ಬರಿಗೆ ಗೆಲುವನ್ನು ಬಿಟ್ಟುಕೊಡಲು ಸಿದ್ಧರಿರುವಾಗ ಆಟ ಆಡೋದು ಏಕೆ’ ಎಂದು ಅನೇಕರು ಕೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ