AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರೋನ್ ಪ್ರತಾಪ್ ಕಳಪೆ, ನಮ್ರತಾ ಉತ್ತಮ: ಕ್ಯಾಪ್ಟನ್ ಆಗಿದ್ದು ಯಾರು?

Bigg Boss 10: ಈ ಬಾರಿ ಕೆಲವು ಕೆಟ್ಟ ನಿರ್ಣಯಗಳಿಂದ ತಂಡದ ಸೋಲಿಗೆ ಕಾರಣವಾದ ಡ್ರೋನ್ ಪ್ರತಾಪ್​ಗೆ ಕಳಪೆ ಕೊಟ್ಟರೆ, ಉತ್ತಮವಾಗಿ ಆಡಿದ ನಮ್ರತಾ ಉತ್ತಮ ಎನಿಸಿಕೊಂಡರು. ಮನೆಯ ಕ್ಯಾಪ್ಟನ್ ಯಾರಾದರು?

ಡ್ರೋನ್ ಪ್ರತಾಪ್ ಕಳಪೆ, ನಮ್ರತಾ ಉತ್ತಮ: ಕ್ಯಾಪ್ಟನ್ ಆಗಿದ್ದು ಯಾರು?
ಮಂಜುನಾಥ ಸಿ.
|

Updated on: Dec 01, 2023 | 11:48 PM

Share

ಬಿಗ್​ಬಾಸ್ (Bigg Boss) ಮನೆಯಲ್ಲಿ ಶುಕ್ರವಾರದ ಎಪಿಸೋಡ್ ಆ ವಾರದ ಕಳಪೆ ಹಾಗೂ ಉತ್ತಮ ಯಾರೆಂಬುದನ್ನು ಗುರುತಿಸುವ ಹಾಗೂ ಮನೆಯ ಮುಂದಿನ ವಾರದ ಕ್ಯಾಪ್ಟನ್ ಅನ್ನು ಆಯ್ಕೆ ಮಾಡುವ ಎಪಿಸೋಡ್ ಆಗಿರುತ್ತದೆ. ಬಿಗ್​ಬಾಸ್ ಮನೆಯ ಜನಪ್ರಿಯ ಸ್ಪರ್ಧಿ ಆಗಿರುವ ಡ್ರೋನ್ ಪ್ರತಾಪ್​ಗೆ ಈ ವಾರದ ಕಳಪೆಯನ್ನು ಬಹುತೇಕ ಬಿಗ್​ಬಾಸ್ ಮನೆ ಸದಸ್ಯರು ನೀಡಿದರು. ಮೊದಲಲ್ಲೇ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರದಬ್ಬಿಸಿಕೊಂಡ ನಮ್ರತಾ ಮನೆಯವರಿಂದ ಉತ್ತಮ ಪಡೆದುಕೊಂಡರು.

ಡ್ರೋನ್ ಪ್ರತಾಪ್ ಈ ವಾರ ತಂಡದ ಲೀಡರ್ ಆಗಿ ತೆಗೆದುಕೊಂಡ ನಿರ್ಧಾರಗಳು ಹಲವರಿಗೆ ಇಷ್ಟವಾಗಲಿಲ್ಲ. ಆರಂಭದಲ್ಲಿಯೇ ತಂಡದ ಪ್ರಬಲ ಆಟಗಾರ ಕಾರ್ತಿಕ್ ಅನ್ನು ಕ್ಷುಲ್ಲಕ ಕಾರಣಕ್ಕೆ ತಂಡದಿಂದ ಹೊರಗಿಟ್ಟು ತಮ್ಮ ತಂಡವನ್ನು ತಾವೇ ವೀಕ್ ಮಾಡಿಕೊಂಡರು. ಬಳಿಕ ನಮ್ರತಾರಿಗೆ ಮಾತುಕೊಟ್ಟು ತಮ್ಮ ತಂಡಕ್ಕೆ ಕರೆದುಕೊಂಡು ಬಂದಿದ್ದ ಪ್ರತಾಪ್ ಮೊದಲಲ್ಲೇ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟರು. ಅಲ್ಲದೆ ಇನ್ನೂ ಕೆಲವು ಹಂತಗಳಲ್ಲಿ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾದರು. ಹಾಗಾಗಿ ಅವರ ತಂಡ ಪ್ರಬಲ ಹೋರಾಟವೇ ಇಲ್ಲದೆ ಎದುರಾಳಿ ತಂಡದ ವಿರುದ್ಧ ಸೋತಿತು.

ಇದನ್ನೋ ಓದಿ:ಕಿವಿ ಹಿಡಿದು ಮಂಡಿ ಬಗ್ಗಿಸಿ ಬಿಗ್​ಬಾಸ್​ಗೆ ಕ್ಷಮೆ ಕೇಳಿದ ಡ್ರೋನ್ ಪ್ರತಾಪ್: ಮಾಡಿದ ತಪ್ಪೇನು?

ಇದೇ ಕಾರಣಕ್ಕೆ, ಕಾರ್ತಿಕ್, ನಮ್ರತಾ, ವಿನಯ್, ಮೈಖಲ್, ಪವಿ, ಡ್ರೋನ್​ರ ಸ್ನೇಹಿತರೇ ಆಗಿರುವ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರುಗಳು ಸಹ ಪ್ರತಾಪ್​ಗೆ ಕಳಪೆ ಪಟ್ಟ ನೀಡಿದರು. ಸಂಗೀತಾ, ತುಕಾಲಿ ಅವರಿಗೆ ಕಳಪೆ ಕೊಟ್ಟರೆ, ಸಿರಿ ಅವರು ಸ್ನೇಹಿತ್​ಗೆ ಕಳಪೆ ನೀಡಿದರು. ಡ್ರೋನ್ ಪ್ರತಾಪ್, ವಿನಯ್​ಗೆ ಕಳಪೆ ಪಟ್ಟ ನೀಡಿದರು. ಉತ್ತಮವನ್ನು ಅವರು ನಮ್ರತಾ ಅವರಿಗೇ ಕೊಟ್ಟರು. ಇನ್ನು ಮನೆಯ ಹಲವು ಸದಸ್ಯರು ಈ ವಾರ ಚೆನ್ನಾಗಿ ಆಡಿದ ನಮ್ರತಾಗೆ ಉತ್ತಮ ನೀಡಿದರು. ಸಿರಿ ಅವರಿಗೂ ಒಂದು ಉತ್ತಮ ಬಂದರೆ, ಪವಿ ಅವರಿಗೆ ಸಂಗೀತಾ ಉತ್ತಮ ನೀಡಿದರು. ಸ್ನೇಹಿತ್​ಗೆ ಮೈಖಲ್ ಉತ್ತಮ ನೀಡಿದರು.

ಇನ್ನು ಕ್ಯಾಪ್ಟೆನ್ಸಿ ಟಾಸ್ಕ್​ನ ಕೊನೆಯ ಟಾಸ್ಕ್​ನಲ್ಲಿ ತನಿಷಾ ಪರವಾಗಿ ನಮ್ರತಾ ಆಡಿದರು. ಎದುರಾಳಿಯಾಗಿ ಇದ್ದಿದ್ದು ಸ್ನೇಹಿತ್. ತುಸು ಸರಳವಾಗಿಯೇ ಇದ್ದ ಆ ಟಾಸ್ಕ್​ನಲ್ಲಿ ಆರಂಭದಲ್ಲಿ ನಮ್ರತಾ ಮುಂದಿದ್ದರು, ಆದರೆ ಮೈಖಲ್​ರ ಸಲಹೆಯಂತೆ ಆಟದಲ್ಲಿ ಬದಲಾವಣೆ ಮಾಡಿಕೊಂಡ ಸ್ನೇಹಿತ್ ಸುಲಭಕ್ಕೆ ಗೆದ್ದು ಮನೆಯ ಕ್ಯಾಪ್ಟನ್ ಆದರು. ಗೆಲುವನ್ನು ವಿನಯ್​ಗೆ ಅರ್ಪಿಸಿದರು. ವಿನಯ್​ ಅನ್ನು ತನ್ನ ಅಣ್ಣ ಎಂದು ಕರೆಯುತ್ತಾ ಭಾವುಕರಾಗಿ ಕಣ್ಣೀರು ಸಹ ಹಾಕಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು