AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಬಿಗ್​ಬಾಸ್ ಮನೆಯಲ್ಲಿ ಅತಿ ಹೆಚ್ಚು ಮತ ಗಳಿಸಿರುವುದು ಯಾರು? ಡ್ರೋನ್ ಪ್ರತಾಪ್​ಗೆ ಎಷ್ಟನೆ ಸ್ಥಾನ?

Bigg Boss: ಬಿಗ್​ಬಾಸ್​ ನಲ್ಲಿ ಕಳೆದ ವಾರ ಡ್ರೋನ್ ಪ್ರತಾಪ್ ಅತಿ ಹೆಚ್ಚು ಮತ ಗಳಿಸಿದ್ದರು. ಹಾಗಿದ್ದರೆ ಈ ವಾರ ಯಾರಿಗೆ ಅತಿ ಹೆಚ್ಚು ಮತ ಬಂದಿದೆ? ಸುದೀಪ್ ನೀಡಿದರು ಮಾಹಿತಿ.

ಈ ವಾರ ಬಿಗ್​ಬಾಸ್ ಮನೆಯಲ್ಲಿ ಅತಿ ಹೆಚ್ಚು ಮತ ಗಳಿಸಿರುವುದು ಯಾರು? ಡ್ರೋನ್ ಪ್ರತಾಪ್​ಗೆ ಎಷ್ಟನೆ ಸ್ಥಾನ?
ಬಿಗ್​ಬಾಸ್
ಮಂಜುನಾಥ ಸಿ.
|

Updated on: Dec 02, 2023 | 11:49 PM

Share

ಬಿಗ್​ಬಾಸ್ ಕನ್ನಡ ಸೀಸನ್ 10ರಲ್ಲಿ (Bigg Boss) ಮತ್ತೊಂದು ವಾರಾಂತ್ಯ ಬಂದಿದೆ. ಕಿಚ್ಚನ ವೀಕೆಂಡ್ ಪಂಚಾಯ್ತಿ ಶುರುವಾಗಿದೆ. ಶನಿವಾರದ ಎಪಿಸೋಡ್​ಗೆ ಆಗಮಿಸಿದ್ದ ಕಿಚ್ಚ ಸುದೀಪ್ ಮನೆಯ ಸದಸ್ಯರು ವಾರಪೂರ್ತಿ ಮಾಡಿದ ಆಡಿದ ಆಟ, ಆಡಿದ ರೀತಿ ಇನ್ನಿತರೆ ವಿಚಾರಗಳನ್ನು ಇಟ್ಟುಕೊಂಡು ಚರ್ಚಿಸಿದರು. ಡ್ರೋನ್ ಪ್ರತಾಪ್​ ಕಳೆದ ವಾರ ತಂಡದ ಲೀಡರ್ ಆಗಿದ್ದಾಗ ತೆಗೆದುಕೊಂಡ ನಿರ್ಣಯಗಳನ್ನು ವಿಮರ್ಶಿಸಿದ ಕಿಚ್ಚು ಸುದೀಪ್, ಚೆನ್ನಾಗಿ ಆಡಿದ ನಮ್ರತಾ ಗೌಡ ಅವರಿಗೆ ಚಪ್ಪಾಳೆ ನೀಡಿದರು.

ಪ್ರತಿ ವಾರಾಂತ್ಯದಲ್ಲಿಯೂ ಭಾನುವಾರದಂದು ಎಲಿಮಿನೇಷನ್ ಪ್ರಕ್ರಿಯೆ ಪೂರ್ಣವಾಗುತ್ತದೆಯಾದರೂ ಆ ಪ್ರಕ್ರಿಯೆ ಶನಿವಾರವೇ ಪ್ರಾರಂಭವಾಗುತ್ತದೆ. ಪ್ರತಿಬಾರಿ ನಿರ್ದಿಷ್ಟ ಕ್ರಮಾಂಕವಿಲ್ಲದೆ ಎಲಿಮಿನೇಷನ್​ನಿಂದ ಪಾರಾದವರ ಹೆಸರುಗಳನ್ನು ಸುದೀಪ್ ಹೇಳುತ್ತಿದ್ದರು. ಆದರೆ ಕಳೆದ ವಾರದಿಂದ ಪಡೆದ ಮತಗಳ ಆಧಾರದಲ್ಲಿ ಎಲಿಮಿನೇಷನ್​ನಿಂದ ಪಾರಾದವರ ಹೆಸರುಗಳನ್ನು ಸುದೀಪ್ ಹೇಳುತ್ತಿದ್ದಾರೆ. ಕಳೆದ ವಾರ ಡ್ರೋನ್ ಪ್ರತಾಪ್ ಅತಿ ಹೆಚ್ಚು ಮತ ಪಡೆದು ಮೊದಲು ಸೇವ್ ಆಗಿದ್ದರು. ಆದರೆ ಈ ವಾರ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದೆ.

ಈ ವಾರ ವಿನಯ್, ಡ್ರೋನ್ ಪ್ರತಾಪ್, ನಮ್ರತಾ ಗೌಡ, ಸ್ನೇಹಿತ್, ತನಿಷಾ, ಸಂಗೀತಾ, ವರ್ತೂರು ಸಂತೋಷ್, ಮೈಖಲ್ ಅವರುಗಳು ನಾಮಿನೇಟ್ ಆಗಿದ್ದರು. ಇವರಲ್ಲಿ ಶನಿವಾರದ ಎಪಿಸೋಡ್​ನಲ್ಲಿ ಮೂವರು ಸೇಫ್ ಆದರು. ಆ ಮೂವರ ಹೆಸರನ್ನು ಅವರು ಪಡೆದುಕೊಂಡ ಮತಗಳ ಆಧಾರದಲ್ಲಿ ನೀಡಲಾಯ್ತು. ಯಾರು ಹೆಚ್ಚು ಮತ ಪಡೆದಿದ್ದಾರೆಯೋ ಅವರ ಹೆಸರನ್ನು ಮೊದಲಿಗೆ ಘೋಷಿಸಲಾಯ್ತು. ಅದರಂತೆ ಮೊದಲು ಸುದೀಪ್ ಅವರು ಹೇಳಿದ ಹೆಸರು ವರ್ತೂರು ಸಂತೋಷ್ ಅವರದ್ದು. ಕಳೆದ ಬಾರಿ ಡ್ರೋನ್ ಅವರಿಗೆ ಹೆಚ್ಚು ಬಂದಿತ್ತು ಈ ವಾರ ವರ್ತೂರು ಸಂತೋಷ್​ಗೆ ಹೆಚ್ಚು ಮತಗಳು ಬಂದು ಅವರು ಮೊದಲಿಗೆ ಸೇಫ್ ಆದರು.

ಇದನ್ನೂ ಓದಿ:ಸುದೀಪ್​ ಮಾತಿಗೂ ಬೆಲೆ ಕೊಡಲಿಲ್ಲ ಬಿಗ್​ ಬಾಸ್​ ಮಂದಿ; ಮಿತಿ ಮೀರಿ ಇಂಗ್ಲಿಷ್​ ಬಳಸಿದ್ದಕ್ಕೆ ಈಗ ಕಠಿಣ ಶಿಕ್ಷೆ

ವರ್ತೂರು ಸಂತೋಷ್ ಬಳಿಕ ಹೆಚ್ಚು ಮತ ಪಡೆದು ಎರಡನೇ ಸ್ಥಾನದಲ್ಲಿರುವುದು ನಮ್ರತಾ ಗೌಡ. ಕಳೆದ ವಾರ ಐದರ ಬಳಿಕದ ಸ್ಥಾನದಲ್ಲಿದ್ದ ನಮ್ರತಾ ಈ ವಾರ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಈ ವಾರ ಉತ್ತಮ ಪ್ರಶಸ್ತಿ ಸಹ ಪಡೆದು, ಕಿಚ್ಚನ ಚಪ್ಪಾಳೆಯನ್ನೂ ಪಡೆದಿರುವ ನಮ್ರತಾ ಹೆಚ್ವು ಮತಗಳು ಬಂದಿರುವುದನ್ನು ಸಹ ಸಖತ್ ಎಂಜಾಯ್ ಮಾಡಿದರು. ಎಲ್ಲರಿಗೂ ಧನ್ಯವಾದವನ್ನೂ ಸಹ ಹೇಳಿದರು. ಇನ್ನು ಮತಗಳ ಆಧಾರದಲ್ಲಿ ಮೂರನೇ ಸ್ಥಾನದಲ್ಲಿರುವುದು ಡ್ರೋನ್ ಪ್ರತಾಪ್. ಕಳೆದ ವಾರ ನಂಬರ್ 1 ಸ್ಥಾನದಲ್ಲಿದ್ದ ಡ್ರೋನ್ ಪ್ರತಾಪ್ ಈ ವಾರ ಮೂರನೇ ಸ್ಥಾನಕ್ಕೆ ಬಂದಿದ್ದಾರೆ.

ಇನ್ನು ವಿನಯ್ ಗೌಡ, ಸ್ನೇಹಿತ್ ಗೌಡ, ಸಂಗೀತಾ, ಮೈಖಲ್ ಹಾಗೂ ತನಿಷಾ ಅವರುಗಳು ಎಲಿಮಿನೇಷನ್ ಪಟ್ಟಿಯಲ್ಲಿದ್ದಾರೆ. ಇವರಲ್ಲಿ ಒಬ್ಬರು ಈ ವಾರ ಮನೆಗೆ ಹೋಗಲಿದ್ದಾರೆ. ಎಲ್ಲರೂ ಗಟ್ಟಿ ಕಂಟೆಸ್ಟ್​ಗಳೇ ಆಗಿದ್ದಾರೆ. ಇಷ್ಟರಲ್ಲಿ ಯಾರು ಮನೆಗೆ ಹೋಗಲಿದ್ದಾರೆ ಎಂಬುದು ನಾಳೆ ಅಂದರೆ ಭಾನುವಾರದ ಎಪಿಸೋಡ್​ನಲ್ಲಿ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?