ಸುದೀಪ್​ ಮಾತಿಗೂ ಬೆಲೆ ಕೊಡಲಿಲ್ಲ ಬಿಗ್​ ಬಾಸ್​ ಮಂದಿ; ಮಿತಿ ಮೀರಿ ಇಂಗ್ಲಿಷ್​ ಬಳಸಿದ್ದಕ್ಕೆ ಈಗ ಕಠಿಣ ಶಿಕ್ಷೆ

ಕನ್ನಡ ಹೊರತುಪಡಿಸಿ ಬೇರೆ ಭಾಷೆಯಲ್ಲಿ ಹೆಚ್ಚಾಗಿ ಮಾತಾಡುವಂತಿಲ್ಲ ಎಂದು ಕಿಚ್ಚ ಸುದೀಪ್​ ಅವರು ವೀಕೆಂಡ್​ ಸಂಚಿಕೆಯಲ್ಲಿ ಹೇಳಿದ್ದರು. ಆದರೂ ಕೂಡ ಬಿಗ್​ ಬಾಸ್​ ಮನೆಯ ಸದಸ್ಯರು ಸುದೀಪ್​ ಅವರ ಮಾತಿಗೆ ಬೆಲೆ ನೀಡಿಲ್ಲ. ಮತ್ತೆ ಮತ್ತೆ ಇಂಗ್ಲಿಷ್​ನಲ್ಲಿ ಮಾತನಾಡಿದ್ದಕ್ಕೆ 8ನೇ ವಾರದಲ್ಲಿ ಎಲ್ಲರಿಗೂ ಕಠಿಣವಾದ ಶಿಕ್ಷೆಗಳನ್ನು ನೀಡಲಾಗಿದೆ.

ಸುದೀಪ್​ ಮಾತಿಗೂ ಬೆಲೆ ಕೊಡಲಿಲ್ಲ ಬಿಗ್​ ಬಾಸ್​ ಮಂದಿ; ಮಿತಿ ಮೀರಿ ಇಂಗ್ಲಿಷ್​ ಬಳಸಿದ್ದಕ್ಕೆ ಈಗ ಕಠಿಣ ಶಿಕ್ಷೆ
ಕಿಚ್ಚ ಸುದೀಪ್​
Follow us
| Updated By: ರಾಜೇಶ್ ದುಗ್ಗುಮನೆ

Updated on:Nov 28, 2023 | 6:10 AM

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋನಲ್ಲಿ ಸ್ಪರ್ಧಿಗಳು ಹೆಚ್ಚಾಗಿ ಇಂಗ್ಲಿಷ್​ ಬಳಸುತ್ತಿದ್ದಾರೆ. ಅದಕ್ಕೆ ಈಗಾಗಲೇ ಕಿಚ್ಚ ಸುದೀಪ್​ (Kichcha Sudeep) ಅವರು ಕ್ಲಾಸ್​ ತೆಗೆದುಕೊಂಡಿದ್ದರು. ಹಾಗಿದ್ದರೂ ಕೂಡ ಅನೇಕರು ಆ ಮಾತಿಗೆ ಬೆಲೆ ಕೊಟ್ಟಿಲ್ಲ. ಮತ್ತೆ ಮತ್ತೆ ಹೆಚ್ಚಾಗಿ ಇಂಗ್ಲಿಷ್​ನಲ್ಲಿ ಮಾತನಾಡುವುದನ್ನು ಅನೇಕರು ಮುಂದುವರಿಸಿದ್ದಾರೆ. ಅದಕ್ಕಾಗಿ ದೊಡ್ಮನೆಯ ಮಂದಿಗೆ ಬಿಗ್​ ಬಾಸ್​ ಕಡೆಯಿಂದ ಕಠಿಣ ಶಿಕ್ಷೆ ನೀಡಲಾಗಿದೆ. ಸ್ನೇಹಿತ್​ ಗೌಡ, ನಮ್ರತಾ ಗೌಡ, ಸಂಗೀತಾ ಶೃಂಗೇರಿ, ವಿನಯ್​ ಗೌಡ, ಸಿರಿ ಮುಂತಾದವರು ಹೆಚ್ಚಾಗಿ ಇಂಗ್ಲಿಷ್​ನಲ್ಲಿ (English) ಮಾತನಾಡುತ್ತಾರೆ. ಇವರೆಲ್ಲ ಮಾಡಿದ ತಪ್ಪಿಗೆ ಇಡೀ ಮನೆಮಂದಿಗೆ ಶಿಕ್ಷೆ ಆಗಿದೆ.

ಬಿಗ್​ ಬಾಸ್​ ಮನೆಯೊಳಗೆ 7ನೇ ವಾರ ಮೂರು ತಪ್ಪು ನಡೆದಿದ್ದವು. ಜೈಲು ಸೇರಿದ್ದ ವರ್ತೂರು ಸಂತೋಷ್​ ಅವರು ತರಕಾರಿ ಹೆಚ್ಚಬೇಕಿತ್ತು. ಆ ನಿಯಮ ಉಲ್ಲಂಘಿಸಿ ಬೇರೆ ಸ್ಪರ್ಧಿಗಳು ತರಕಾರಿ ಕಟ್​ ಮಾಡಿದ್ದರು. ಬೇರೆ ಕೆಲಸಕ್ಕೆ ತೆರಳಿದ್ದಾಗ ಗ್ಯಾಸ್​ ಆಫ್​ ಮಾಡಬೇಕು ಎಂಬುದು ಸಾಮಾನ್ಯ ಪ್ರಜ್ಞೆ. ಅದನ್ನು ಕೂಡ ಕೆಲವರು ಉಲ್ಲಂಘಿಸಿದ್ದಾರೆ. ಇದರ ಜೊತೆಗೆ ಇಂಗ್ಲಿಷ್​ ಬಳಸುವುದು ಕೂಡ ಜಾಸ್ತಿ ಆಗಿದೆ. ಅದನ್ನು ಬಿಗ್​ ಬಾಸ್​ ಗಂಭೀರವಾಗಿ ಪರಿಗಣಿಸಿದ್ದಾರೆ. ಹಾಗಾಗಿ ಇನ್ಮುಂದೆ ಪ್ರತಿ ದಿನ ಕೇವಲ 45 ನಿಮಿಷ ಮಾತ್ರ ಅಡುಗೆ ಮಾಡಲು ಗ್ಯಾಸ್​ ಆನ್​ ಮಾಡುವುದಾಗಿ ತಿಳಿಸಿದ್ದಾರೆ. 45 ನಿಮಿಷದ ಒಳಗೆ ಬಿಗ್​ ಬಾಸ್​ ಸ್ಪರ್ಧಿಗಳು ಅಡುಗೆ ಮಾಡಿಕೊಳ್ಳಬೇಕು. ಇದರಿಂದ ಎಲ್ಲರಿಗೂ ತೊಂದರೆ ಆಗಿದೆ. ಅಲ್ಲದೇ, ಈ ವಾರ ಬಿಗ್​ ಬಾಸ್​ ಸ್ಪರ್ಧಿಗಳು ಗಳಿಸಿದ್ದ ದಿನಸಿ ವಸ್ತುಗಳ ಪೈಕಿ ನಾಲ್ಕು ಬಾಸ್ಕೆಟ್​ ಹಿಂದಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: BBK 10: ಸುದೀಪ್​ ಎದುರಲ್ಲೇ ಬಿಗ್​ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ; ಹೆಚ್ಚಾಗಿದೆ ಕಾವು

ಕನ್ನಡವನ್ನು ಬಿಟ್ಟು ಬೇರೆ ಭಾಷೆಯನ್ನು ಹೆಚ್ಚಾಗಿ ಮಾತನಾಡಬಾರದು ಎಂದು ಕಿಚ್ಚ ಸುದೀಪ್​ ಅವರು ಹೇಳಿದ್ದರೂ ಕೂಡ ಬಿಗ್​ ಬಾಸ್​ ಮಂದಿ ಅದಕ್ಕೆ ಬೆಲೆ ನೀಡಿಲ್ಲ. ಪದೇ ಪದೇ ಇಂಗ್ಲಿಷ್​ ಬಳಸಿದ್ದಕ್ಕಾಗಿ ಒಬ್ಬರನ್ನು ನೇರವಾಗಿ ನಾಮಿನೇಟ್​ ಮಾಡಲಾಗಿದೆ. ಎಲ್ಲರಿಗಿಂತ ಹೆಚ್ಚು ಸ್ನೇಹಿತ್ ಅವರು ಇಂಗ್ಲಿಷ್​ನಲ್ಲಿ ಮಾತನಾಡಿದ್ದಾರೆ. ಹಾಗಾಗಿ ಅವರು 8ನೇ ವಾರದ ಎಲಿಮಿನೇಷನ್​ಗೆ ನೇರವಾಗಿ ನಾಮಿನೇಟ್​ ಆಗಿದ್ದಾರೆ. ನಮ್ರತಾ, ಸಂಗೀತಾ, ವಿನಯ್​, ಸಿರಿ ಕೂಡ ಜಾಸ್ತಿ ಇಂಗ್ಲಿಷ್​ ಬಳಸಿದ್ದಾರೆ. ಆದರೆ ಎಲ್ಲರೂ ಸೇರಿ ಸ್ನೇಹಿತ್​ನ ಶಿಕ್ಷೆಗೆ ಗುರಿ ಮಾಡಿದ್ದಾರೆ.

ಇದನ್ನೂ ಓದಿ: BBK 10: ಬಿಗ್​ ಬಾಸ್​ ಮನೆಯಲ್ಲಿ ಅತಿಯಾಗಿ ಇಂಗ್ಲಿಷ್​ ಮಾತಾಡುವ ಮಂದಿಗೆ ಕಿಚ್ಚ ಸುದೀಪ್​ ಕ್ಲಾಸ್​

‘ಇಲ್ಲಿ ಎಲ್ಲರಿಗೂ ಕನ್ನಡ ಬರುತ್ತದೆ. ಬಾರದೇ ಇರುವವರು ಕೂಡ ಕಲಿತು ಮಾತಾಡುತ್ತಿದ್ದಾರೆ. ಇಂಗ್ಲಿಷ್​ ಜಾಸ್ತಿ ಬಳಸಬಾರದು ಎಂಬ ಗಂಭೀರ ಆದೇಶ ಇದ್ದರೂ ಕೂಡ ಮತ್ತೆ ಮತ್ತೆ ಉಲ್ಲಂಘನೆ ಮಾಡಿದ್ದು ಎಷ್ಟು ಸರಿ’ ಎಂದು ಬಿಗ್​ ಬಾಸ್​ ಪ್ರಶ್ನಿಸಿದರು. ‘ಹೌದು, ಇದು ತಪ್ಪು’ ಎಂದು ಎಲ್ಲ ಸ್ಪರ್ಧಿಗಳು ಒಪ್ಪಿಕೊಂಡರು. ಮೈಕೆಲ್​ ಅವರು ಕನ್ನಡ ಕಲಿತು ಮಾತನಾಡಿ ಕಿಚ್ಚ ಸುದೀಪ್​ ಅವರಿಂದ ಚಪ್ಪಾಳೆ ಪಡೆದಿದ್ದರು. ಈಗ ಸ್ನೇಹಿತ್​ಗೆ ಮೈಕೆಲ್​ ಬುದ್ಧಿಮಾತು ಹೇಳಿದ್ದಾರೆ. ‘ನೀನು ಅತಿ ಹೆಚ್ಚು ಪ್ರಯತ್ನ ಮಾಡಬೇಕು’ ಎಂದು ಸ್ನೇಹಿತ್​ಗೆ ಅವರು ಸೂಚನೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:58 pm, Mon, 27 November 23

Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ